Site icon Vistara News

ಸವಣೂರಿನಲ್ಲಿ ಕಾಲು ಜಾರಿ ಕೆರೆಗೆ ಬಿದ್ದು ಇಬ್ಬರು ಬಾಲಕರು ಸಾವು

ಬಾಲಕರು ಸಾವು

ಹಾವೇರಿ: ಸ್ನೇಹಿತರ ಜತೆ ಸ್ನಾನಕ್ಕೆ ತೆರಳಿದ್ದಾಗ ಸವಣೂರು ಹೊರವಲಯದ ಕೆಂಪಿ ಕೆರೆಗೆ ಕಾಲು ಜಾರಿ ಬಿದ್ದು ಇಬ್ಬರು ಬಾಲಕರು ಮೃತಪಟ್ಟಿದ್ದಾರೆ.

ಪಟ್ಟಣದ ಕಾರಿಗರ್ ಪ್ಲಾಟ್‌ನ ನಿವಾಸಿಗಳಾದ ಸೈಯದ್‌ ರೇಹಾನ ಬಾಬಾಹುಸೇನ್ ಮಕಾಂದಾರ (13), ಜಿಲಾನಿ ಮಹ್ಮದ್‌ ಖಾಸೀಮ್‌ ಮಂಡಾಲೆ (12) ಮೃತ ಬಾಲಕರು. ಸತತ ಮಳೆಯಿಂದಾಗಿ ಶಾಲೆಗೆ ರಜೆ ಘೋಷಿಸಿದ ಹಿನ್ನೆಲೆಯಲ್ಲಿ ಮೃತ ಇಬ್ಬರು ಬಾಲಕರು ಸೇರಿ ಐವರು ಬಾಲಕರು ಕೆಂಪಿ ಕೆರೆಗೆ ಸ್ನಾನಕ್ಕೆಂದು ತೆರಳಿದ್ದರು. ಈ ವೇಳೆ ಐವರು ಬಾಲಕರ ಪೈಕಿ ಇಬ್ಬರು ಕೆರೆಯಲ್ಲಿ ಇಳಿದಿದ್ದರು. ಈ ವೇಳೆ ಸಯ್ಯದ್‌ ರೇಹಾನ ಬಾಬಾಹುಸೇನ್ ಮಕಾಂದಾರ, ಜಿಲಾನಿ ಮಹ್ಮದ್‌ ಖಾಸೀಮ್‌ ಮಂಡಾಲೆ ಈಜಲು ಬಾರದ ಇಬ್ಬರು ಬಾಲಕರು ಸ್ನಾನಕ್ಕೆ ಕೆರೆಗಿಳಿದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Rain News | ಧಾರಾಕಾರ ಮಳೆಯಿಂದ ತತ್ತರಿಸಿದ ಹಾವೇರಿ ಜನ; ಮಹಿಳೆ ಸಾವು, ಒಬ್ಬ ನಾಪತ್ತೆ

Exit mobile version