ಹಾವೇರಿ: ಹಾವೇರಿ ತಾಲೂಕಿನ (Haveri News) ಆಲದಕಟ್ಟಿ ಗ್ರಾಮದ ಭೂಮಿಕಾ ಟ್ರೇಡರ್ಸ್ ಪಟಾಕಿ ಅಂಗಡಿಯ ಗೋದಾಮಿನಲ್ಲಿ ಮಂಗಳವಾರ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ (Cracker tragedy) ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ (Four dead in Cracker tragedy). ರಾಜ್ಯ ಸರ್ಕಾರ ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ರೂ. ಪರಿಹಾರವನ್ನು ಘೋಷಿಸಿದೆ. ಇದರ ಜತೆಗೆ ಭಾರತೀಯ ಜನತಾ ಪಕ್ಷದ (one lakh compensation from BJP) ವತಿಯಿಂದಲೂ ತಲಾ ಒಂದು ಲಕ್ಷ ರೂ. ಪರಿಹಾರವನ್ನು ಪ್ರಕಟಿಸಲಾಗಿದೆ. ಇದರ ನಡುವೆಯೇ ಇಲ್ಲಿ ಬೆಂಕಿ ಹೊತ್ತಿಕೊಳ್ಳಲು ಏನು ಕಾರಣ ಎಂಬುದನ್ನು ಕೂಡಾ ಪತ್ತೆ ಹಚ್ಚಲಾಗಿದೆ.
ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ ದ್ಯಾಮಪ್ಪ ಓಲೇಕಾರ, ರಮೇಶ್ ಬಾರ್ಕಿ, ಶಿವಲಿಂಗ ಅಕ್ಕಿ ಮತ್ತು ಕೆ.ಬಿ. ಜಯಣ್ಣ ಅವರು ಮೃತಪಟ್ಟವರು. ಇವರ ಜತೆಗೆ ವಾಸೀಂ ಹಾಗೂ ಶೇರು ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರು ತಾಲೂಕಿನ ಕಾಟೇನಹಳ್ಳಿ ಗ್ರಾಮದ ನಿವಾಸಿಗಳು ಎನ್ನಲಾಗಿದೆ.
ಸಾಮಾನ್ಯವಾಗಿ ಇಲ್ಲಿ ಇಷ್ಟು ಪ್ರಮಾಣದಲ್ಲಿ ಪಟಾಕಿಗಳನ್ನು ತಂದು ಕೂಡಿಡುವುದಿಲ್ಲ. ಈ ಬಾರಿ ಗಣೇಶೋತ್ಸವದ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಪಟಾಕಿಗಳನ್ನು ಸಂಗ್ರಹಿಸಿಡಲಾಗಿತ್ತು. ಇವುಗಳನ್ನು ಜೋಡಿಸಿಡುವ ಮತ್ತು ಕಿಟಕಿಗಳ ಮೂಲಕ ಯಾರೂ ಕಳವು ಇಲ್ಲವೇ ಬೇರೇನಾದರೂ ಅನಾಹುತ ನಡೆಸದಿರಲಿ ಎಂದು ಕಿಟಕಿ ಭದ್ರಪಡಿಸುವ ಕೆಲಸವನ್ನು ಮಾಡಲಾಗುತ್ತಿತ್ತು. ಈ ವೇಳೆ ಕಾಣಿಸಿಕೊಂಡ ಬೆಂಕಿಯೇ ದುರಂತಕ್ಕೆ (Welding is the source of fire ಕಾರಣ ಎನ್ನಲಾಗಿದೆ.
ಅಷ್ಟು ದೊಡ್ಡ ಪ್ರಮಾಣದಲ್ಲಿ ಪಟಾಕಿಯನ್ನು ಕೂಡಿಟ್ಟುಕೊಂಡು ಪಕ್ಕದಲ್ಲೇ ಇದ್ದ ಕಿಟಕಿಯ ವೆಲ್ಡಿಂಗ್ ಕಾರ್ಯ ನಡೆಸಲಾಗಿದ್ದು, ಆ ವೇಳೆ ಹಾರಿದ ಕಿಡಿಯೊಂದು ನಾಲ್ವರನ್ನು ಸಜೀವ ದಹನ ಮಾಡಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಕೆಲವರು ಸಣ್ಣ ಪುಟ್ಟ ಗಾಯಗಳೊಂದಿಗೆ ಓಡಿ ತಪ್ಪಿಸಿಕೊಂಡಿದ್ದರೆ ನಾಲ್ವರು ಪಕ್ಕದಲ್ಲಿದ್ದ ಒಂದು ಕೋಣೆಯನ್ನು ಸೇರಿಸಿಕೊಂಡಿದ್ದರು. ಏನೇ ಸಂಭವಿಸಿದರೂ ಅಲ್ಲಿಗೆ ಬೆಂಕಿ ಬರಲಿಕ್ಕಿಲ್ಲ ಎನ್ನುವುದು ಅವರ ನಂಬಿಕೆಯಾಗಿತ್ತು. ಆದರೆ, ಹೊರಗಿನ ಭಾಗಗಳನ್ನು ಸುಟ್ಟು ಭಸ್ಮ ಮಾಡಿದ ಬೆಂಕಿ ಒಳಗೂ ಸಾಗಿತ್ತು. ಅಲ್ಲಿದ್ದ ನಾಲ್ವರನ್ನು ಗುರುತು ಕೂಡಾ ಹಿಡಿಯಲಾಗದಂತೆ ಸುಟ್ಟು ಭಸ್ಮಗೊಳಿಸಿದೆ.
ನಾಲ್ಕು ಜನರ ಮೇಲೆ ಪ್ರಕರಣ ದಾಖಲು
ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸಿದ ಆರೋಪದಲ್ಲಿ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಅಂಗಡಿ ಮಾಲೀಕ ವೀರೇಶ ಸಾತೇನಹಳ್ಳಿ, ವಿಜಯ ಯರೇಸೀಮಿ, ಕುಮಾರಪ್ಪ ಸಾತೇನಹಳ್ಳಿ ಸೇರಿ ನಾಲ್ವರ ಮೇಲೆ ಪ್ರಕರಣ ದಾಖಲಾಗಿದೆ. ಕಾರ್ಮಿಕರ ಸುರಕ್ಷತೆಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಪಟಾಕಿ ಸಂಗ್ರಹಿಸಿದ ಜಾಗದಲ್ಲಿ ಬೆಂಕಿಯ ಕೆಲಸ ಮಾಡಿದ್ದನ್ನು ಗಂಭೀರವಾಗಿ ಪರಿಗಣಿಸಿ ಕೇಸು ದಾಖಲಾಗಿದೆ.
ಇದನ್ನೂ ಓದಿ: Cracker Tragedy : ಹಾವೇರಿಯ ಪಟಾಕಿ ಅಂಗಡಿಯಲ್ಲಿ ಅಗ್ನಿ ಅನಾಹುತ; ನಾಲ್ಕು ಕಾರ್ಮಿಕರು ಸಜೀವದಹನ
ಸರ್ಕಾರದಿಂದ ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ರೂ. ಪರಿಹಾರ ನೀಡಲಾಗಿದೆ. ಇದರ ಜತೆಗೆ ಮೃತರ ಕುಟುಂಬಗಳಿಗೆ ಬಿಜೆಪಿಯಿಂದ ತಲಾ ಒಂದು ಲಕ್ಷ ಪರಿಹಾರ ನೀಡುವುದಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.