Site icon Vistara News

BBMP Works: ಬಿಬಿಎಂಪಿ ಕಾಮಗಾರಿಗಳ ಎಸ್ಐಟಿ ತನಿಖೆ; ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ

Pepper spray

ಬೆಂಗಳೂರು: ಬಿಬಿಎಂಪಿ ಕಾಮಗಾರಿಗಳ ಎಸ್ಐಟಿ ತನಿಖೆಗೆ ನೀಡಿದ ಕಾಂಗ್ರೆಸ್ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಬಿಜೆಪಿ‌ ಸರ್ಕಾರದ ಅವಧಿಯಲ್ಲಿ ನಡೆದ ಕಾಮಗಾರಿಗಳಲ್ಲಿ (BBMP Works) ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದರಿಂದ ಬಾಕಿ ಬಿಲ್‌ ಹಣ ಬಿಡುಗಡೆಗೂ ಮುನ್ನ ರಾಜ್ಯ ಸರ್ಕಾರ ಎಸ್ಐಟಿ ತನಿಖೆಗೆ ಆದೇಶಿಸಿತ್ತು. ಆದರೆ, ಇದನ್ನು ಪ್ರಶ್ನಿಸಿ ಗುತ್ತಿಗೆದಾರರು ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ತಡೆಯಾಜ್ಞೆ ನೀಡಲಾಗಿದೆ.

ಹೈಕೋರ್ಟ್ ನ್ಯಾ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠದಿಂದ ಎಸ್ಐಟಿ ತನಿಖೆಗೆ ತಡೆ ನೀಡಿ ಆದೇಶ ನೀಡಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ 2019 ರಿಂದ 2023 ಏಪ್ರಿಲ್‌ವರೆಗೆ ನಡೆದಿದ್ದ ಕಾಮಗಾರಿಗಳಲ್ಲಿ ಅಕ್ರಮ ಆರೋಪ ಕೇಳಿಬಂದಿತ್ತು. 15ನೇ ಹಣಕಾಸು ಆಯೋಗದ ಅನುದಾನ, ನಗರೋತ್ಥಾನ ಅನುದಾನ ಮತ್ತು ಬಿಬಿಎಂಪಿ ಅನುದಾನಗಳ ಅಡಿಯಲ್ಲಿ ಕೈಗೊಳ್ಳಲಾದ ಕಾಮಗಾರಿಗಳ ಬಗ್ಗೆ ಎಸ್ಐಟಿ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿತ್ತು. ಆದರೆ, ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಗುತ್ತಿಗೆದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಗಳ ಉಲ್ಲಂಘನೆ, ನಿರ್ದಿಷ್ಟ ಗುತ್ತಿಗೆದಾರರನ್ನು ಬಿಟ್ಟು ನಕಲಿ ಗುತ್ತಿಗೆದಾರರಿಗೆ ಹಣ ಪಾವತಿ ಆರೋಪ, ನಕಲಿ ಬಿಲ್ ಸೃಷ್ಟಿ, ಕಾಮಗಾರಿ ನಡೆಸದೆಯೇ ಬಿಲ್‌ ಪಾವತಿ, ಗುಣಮಟ್ಟ ಕಾಪಾಡದಿರುವುದು ಸೇರಿ ಹಲವು ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಅಕ್ರಮಗಳ ತನಿಖೆಗೆ ಎಸ್‌ಐಟಿ ರಚಿಸಲಾಗಿತ್ತು.

ಇದನ್ನೂ ಓದಿ | Education News: ಸರ್ಕಾರಿ ಶಾಲೆಗಳ ಬಲವರ್ಧನೆಗೆ 10 ಸೂತ್ರ; ಶಿಕ್ಷಣ ಸಚಿವರಿಗೆ ತಜ್ಞರಿಂದ ಪತ್ರ

MRPಗಿಂತ ಹೆಚ್ಚು ಹಣ ಪಡೆದ ಫ್ಲಿಪ್‌ಕಾರ್ಟ್‌; ಬೆಂಗಳೂರು ಮಹಿಳೆಗೆ ಸಿಕ್ಕಿತು 20,000 ರೂ. ಪರಿಹಾರ!

ಬೆಂಗಳೂರು:‌ ಎಂಆರ್‌ಪಿ ರೇಟ್‌ಗಿಂತ ಹೆಚ್ಚಿನ ಹಣವನ್ನು ಗ್ರಾಹಕರಿಂದ ಪಡೆದಿದ್ದ ಫ್ಲಿಪ್‌ಕಾರ್ಟ್‌ಗೆ ಗ್ರಾಹಕರ ನ್ಯಾಯಾಲಯವು 20,000 ರೂ ದಂಡವನ್ನು ವಸೂಲಿ ಮಾಡಿದೆ.

ಬೆಂಗಳೂರಿನ ಪ್ಯಾಲೇಸ್ ಗುಟ್ಟಹಳ್ಳಿಯ ನಿವಾಸಿ ಸೌಮ್ಯಾ.ಪಿ 2019ರ ಅಕ್ಟೋಬರ್‌ನಲ್ಲಿ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್‌ ಸೇಲ್‌ನಲ್ಲಿ ಶಾಂಪುವೊಂದನ್ನು ಆರ್ಡರ್‌ ಮಾಡಿ, ಫೋನ್‌ ಪೇ ಮೂಲಕ 191ರೂ. ಹಣವನ್ನು ಪಾವತಿಸಿದ್ದರು. ಮನೆಗೆ ಬಂದ ಪಾರ್ಸೆಲ್‌ ತೆರೆದು ನೋಡಿದಾಗ ಶಾಕ್‌ ಕಾದಿತ್ತು. ಯಾಕೆಂದರೆ ಶಾಂಪು ಬಾಟೆಲ್‌ ಮೇಲೆ ಎಂಆರ್‌ಪಿ ದರ 95 ಇತ್ತು. ಫ್ಲಿಪ್‌ಕಾರ್ಟ್ ಮೂಲಕ ಗುಜರಾತ್‌ನ ಸೂರತ್‌ನ ಎಚ್ಚಿಕೆ ಎಂಟರ್ಪ್ರೈಸಸ್‌ ಸಂಸ್ಥೆ ಮಾರಿತ್ತು.

ಕೂಡಲೇ ಸೌಮ್ಯ ಫ್ಲಿಪ್‌ಕಾರ್ಟ್‌ ಕಸ್ಟಮರ್‌ ಕೇರ್‌ಗೆ ದೂರು ನೀಡಿದರು.ಆಗ ಆರ್ಡರ್‌ ಮರಳಿಸಿ ರೀಫಂಡ್‌ ಮಾಡುವುದಾಗಿ ಹೇಳಿತ್ತು. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಕ್ರಮವಹಿಸಲಾಗುತ್ತೆ ಎಂಬ ಭರವಸೆ ನೀಡಿತ್ತು. ಆದರೆ ಮಾರಾಟ ಮಾಡಿದ ಸಂಸ್ಥೆಯ ವಿರುದ್ಧ ಯಾವುದೇ ಕ್ರಮಕೈಗೊಳ್ಳದನ್ನು ಸೌಮ್ಯ ಗಮನಿಸಿದ್ದರು.

ಇದನ್ನೂ ಓದಿ | Money Guide: ಪಾರ್ಟ್‌ ಟೈಮ್‌ ಜಾಬ್‌ ಹುಡುಕುತ್ತಿದ್ದೀರಾ? ಇಲ್ಲಿದೆ ವಿಫುಲ ಅವಕಾಶ

ಬಳಿಕ ಸೌಮ್ಯ ಶಾಂತಿನಗರದ ನಾಲ್ಕನೇ ಹೆಚ್ಚುವರಿ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗಕ್ಕೆ ಫ್ಲಿಟ್‌ಕಾರ್ಟ್‌ ಹಾಗೂ ಫ್ಲಿಪ್‌ಕಾರ್ಟ್ ಮೂಲಕ ಮಾರಾಟ ಮಾಡಿದ್ದ ಗುಜರಾತ್‌ನ ಸೂರತ್‌ನ ಎಚ್ಚಿಕೆ ಎಂಟರ್ಪ್ರೈಸಸ್‌ ಸಂಸ್ಥೆ ವಿರುದ್ಧ ದೂರು ನೀಡಿದರು. ದೂರು ಪರಿಶೀಲಿಸಿದ ಕೋರ್ಟ್‌ ಈ ಸಂಬಂಧ ಗ್ರಾಹಕರ ಪರವಾಗಿ ತೀರ್ಪು ನೀಡಿದೆ. ಮಾತ್ರವಲ್ಲ ಹೆಚ್ಚುವರಿ ಶುಲ್ಕ ಪಡೆದ ಕಾರಣಕ್ಕೆ 20,000 ದಂಡವನ್ನು ವಿಧಿಸಿದೆ.

Exit mobile version