ಬೆಂಗಳೂರು: ವನ್ಯಜೀವಿಗಳನ್ನು ನೋಡಲು ಬಂದ ಕೂಡಲೆ ಜನ ಇವರಿಗೆ ಓಟು ಒತ್ತಿಬಿಡತ್ತಾರೆಯೇ ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಪ್ರವಾಸದ ಕುರಿತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (H.D. Kumaraswamy) ವ್ಯಂಗ್ಯ ಮಾಡಿದ್ದಾರೆ.
ಕರ್ನಾಟಕದಲ್ಲಿ ಹುಲಿ ಯಳಜನೆಗೆ ಐವತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೋದಿ ಆಗಮಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ವನ್ಯಜೀವಿ ನೋಡಲು ಬಂದ ತಕ್ಷಣ ಜನ ಇವರಿಗೆ ವೋಟು ಒತ್ತು ಬಿಡ್ತಾರ?
ಪ್ರವಾಹ ಬಂದಾಗ, ಕೋವಿಡ್ ಅನಾಹುತದಿಂದ ಜನ ಬೀದಿಗೆ ಬಂದಾಗ ಬರಲಿಲ್ಲ. ಇವತ್ತು ಸಫಾರಿ ಹಾಕ್ಕೊಂಡು ಸಫಾರಿ ಮಾಡಲು ಬಂದಿದ್ದಾರೆ. ವನ್ಯಜೀವಿಗಳನ್ನ ರಕ್ಷಣೆ ಮಾಡಬೇಕು ನಿಜ, ಆದರೆ ಮಾನವರ ರಕ್ಷಣೆಯನ್ನು ಮಾಡಬೇಕಲ್ವ?
ವನ್ಯಜೀವಿಗಳಿಂದ ಎಷ್ಟು ದಾಳಿ ಆಗಿದೆ, ಎಷ್ಟು ಜೀವ ಹಾನಿ ಆಗಿದೆ? ಯಾವುದಾದರೂ ಒಂದು ಕುಟುಂಬದ ಭೇಟಿ ಹಾಕೊಂಡ್ರ? ವನ್ಯಜೀವಿ ದಾಳಿಗೆ ಒಳಗಾದ ಕುಟುಂಬ ಪರಿಸ್ಥಿತಿ ಏನಾಗಿದೆ? ಕೂಲಿಂಗ್ ಗ್ಲಾಸ್ , ಸೂಟು ಬೂಟು ಹಾಕೊಂಡು ಬಂದ್ರೆ ಆಗುತ್ತಾ..?.
ಅರಣ್ಯ ಭಾಗದಲ್ಲಿ ಪೌಷ್ಟಿಕಾಂಶ, ಆಹಾರದ ಕೊರತೆ ಇದೆ ಅಂತ ವರದಿ ನೀಡಿದ್ದಾರೆ. ಅದರ ಬಗ್ಗೆ ಇವರಿಗೆ ಗಮನ ಹರಿಸಲು ಆಗಲ್ಲ. ನಾಡಿನ ಜನತೆ ಇದನ್ನ ಅರ್ಥ ಮಾಡಿಕೊಳ್ಳಬೇಕು. ವನ್ಯಜೀವಿ ನೋಡಲು ಬಂದ ತಕ್ಷಣ ಇವರಿಗೆ ವೋಟು ಒತ್ತು ಬಿಡ್ತಾರ ಎಂದು ಕುಟುಕಿದ್ದಾರೆ.
ಇದನ್ನೂ ಓದಿ: Karnataka Elections : ವಿದ್ಯಾರ್ಥಿನಿಯರಿಗೆ ಉಚಿತ ಎಲೆಕ್ಟ್ರಿಕ್ ಸ್ಕೂಟರ್: ಎಚ್.ಡಿ ಕುಮಾರಸ್ವಾಮಿ ಹೊಸ ಭರವಸೆ