ಹಾಸನ: ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಹಾಡಹಗಲೇ ಗ್ರಾನೈಟ್ ಉದ್ಯಮಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ (Murder Case) ಮಾಡಿರುವ ಘಟನೆ ಬುಧವಾರ ನಡೆದಿದೆ.
ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಆಪ್ತ ಹಾಗೂ ಗ್ರಾನೈಟ್ ಉದ್ಯಮಿ ಕೃಷ್ಣೇಗೌಡ (53) ಕೊಲೆಯಾದವರು. ಉದ್ಯಮಿ ತಮ್ಮ ಗ್ರಾನೈಟ್ ಫ್ಯಾಕ್ಟರಿ ಬಳಿ ಬಂದಿದ್ದಾಗ ಕಾರು ಅಡ್ಡಗಟ್ಟಿ ಕೊಚ್ಚಿ ಕೊಲೆ ಮಾಡಲಾಗಿದೆ. ಮಚ್ಚು, ಲಾಂಗು ಹಿಡಿದು ಬಂದಿದ್ದ ನಾಲ್ಕೈದು ದುಷ್ಕರ್ಮಿಗಳು ಹಠಾತ್ ದಾಳಿ ನಡೆಸಿ ಕೊಂದಿದ್ದಾರೆ.
ಸ್ಥಳಕ್ಕೆ ಎಸ್ಪಿ ಹರಿರಾಮ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಮಾಹಿತಿ ತಿಳಿಯುತ್ತಲೇ ಸ್ಥಳಕ್ಕೆ ಹಾಸನ ಜೆಡಿಎಸ್ ಶಾಸಕ ಸ್ವರೂಪ್ ಪ್ರಕಾಶ್ ಆಗಮಿಸಿ ಮಾಹಿತಿ ಪಡೆದರು.
ಇದನ್ನೂ ಓದಿ | Heart Attack : SSLC ವಿದ್ಯಾರ್ಥಿನಿ ಹೃದಯಾಘಾತದಿಂದ ನಿಧನ; ವಾಯು ವಿಹಾರದ ವೇಳೆ ಕುಸಿದ ಬಾಲಕಿ
ನಿರ್ಜನ ಪ್ರದೇಶದಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ; ಅತ್ಯಾಚಾರ ಎಸಗಿ ಕೊಲೆ ಶಂಕೆ
ರಾಯಚೂರು: ರಾಯಚೂರು ಜಿಲ್ಲೆಯ (Raichur News) ಸಿಂಧನೂರು ತಾಲೂಕಿನ ಜವಳಗೇರ ಗ್ರಾಮದ ನಿರ್ಜನ ಪ್ರದೇಶದಲ್ಲಿ ಅಪರಿಚಿತ ಮಹಿಳೆಯೊಬ್ಬರ (Dead Body of woman) ಶವ ಪತ್ತೆಯಾಗಿದ್ದು, ಇದೊಂದು ಅತ್ಯಾಚಾರ (Physical abuse) ಮಾಡಿ ಕೊಲೆ ಮಾಡಿ (Murder case) ಎಸೆದು ಹೋದ ಪ್ರಕರಣ ಎಂದು ಭಾವಿಸಲಾಗಿದೆ. ಮೃತ ಮಹಿಳೆಯ ಮುಖದ ಮೇಲೆ ಕಪ್ಪು ಬಣ್ಣದ ಆಯಿಲ್ ಹಾಕಲಾಗಿದ್ದು, ಸಾಕ್ಷ್ಯ ನಾಶಪಡಿಸಲು ಈ ರೀತಿ ಮಾಡಲಾಗಿದೆ ಎಂದು ಹೇಳಲಾಗಿದೆ.
ರಾಯಚೂರು ಹೆದ್ದಾರಿಗೆ ಹೊಂದಿಕೊಂಡಿರುವ ನಿರ್ಜನ ಪ್ರದೇಶದಲ್ಲಿ ಈ ಮಹಿಳೆಯ ಶವ ಪತ್ತೆಯಾಗಿದೆ. ಸುಮಾರು 30-35 ವರ್ಷದ ಮಹಿಳೆ ಇವರು ಎಂದು ಅಂದಾಜಿಸಲಾಗಿದೆ ಯಾರೋ ರಕ್ಕಸರು ಮೊದಲು ಅತ್ಯಾಚಾರ ಎಸಗಿ ಬಳಿಕ ಬಲವಾದ ವಸ್ತುವಿನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಮಹಿಳೆಯ ತಲೆಯ ಹಿಂಬದಿಯಲ್ಲಿ ರಕ್ತದ ಗಾಯಗಳಿವೆ. ಮಹಿಳೆಯ ಮೈಮೇಲಿರುವ ಬಟ್ಟೆಗಳನ್ನು ಎಳೆದಾಡಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ ಬೇರೆ ಸ್ಥಳದಲ್ಲಿ ಕೊಲೆಗೈದು ಸಾಕ್ಷ್ಯ ನಾಶಪಡಿಸಲು ದುರುಳರು ನಿರ್ಜನ ಪ್ರದೇಶದಲ್ಲಿ ಶವ ತಂದು ಹಾಕಿದ್ದಾರೆ ಎನ್ನ ಲಾಗಿದೆ.
ಇದನ್ನೂ ಓದಿ: Murder Case : ಪತ್ನಿಯನ್ನು ಜನ ಕಳ್ಳಿ ಎಂದಿದ್ದಕ್ಕೆ ಕೊಂದೇ ಬಿಟ್ಟ!
ಮೃತಪಟ್ಟ ಮಹಿಳೆಯ ಬಲಗೈಯಲ್ಲಿ ತಿರುಪತಮ್ಮ ಎಂದು ತೆಲಗು ಭಾಷೆಯಲ್ಲಿ ಹಚ್ಚೆ ಇದೆ. ಬಲಗೈ ಬೆರಳಿಗೆ ಆಮೆ ಆಕೃತಿಯ ಉಂಗುರ ಧರಿಸಿದ್ದಾಳೆ. ಸಿಂಧನೂರು ಭಾಗದಲ್ಲಿ ನೆರೆ ರಾಜ್ಯದಿಂದ ಬಂದು ನೆಲೆಸಿರುವ ಜನರು ಸಾಕಷ್ಟಿದ್ದಾರೆ. ಇದೆಲ್ಲವೂ ನೋಡಿದಾಗ ಈ ಅಪರಿಚಿ ಶವ ಹೊರ ರಾಜ್ಯದ ಮಹಿಳೆಯದು ಎಂಬ ಸಂಶಯ ಮೂಡುತ್ತಿದೆ.
ಪೊಲೀಸರು ಮಹಿಳೆ ಗುರುತು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಇತ್ತ ಬಳಗಾನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯ ಮೃತದೇಹವನ್ನು ಸಿಂಧನೂರು ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.