ಬೆಂಗಳೂರು: ಪ್ರಕರಣವೊಂದರ ಚಾರ್ಜ್‌ಶೀಟ್‌ನಿಂದ ಹೆಸರು ತೆಗೆಯಲು ಲಂಚ ಪಡೆಯುವಾಗ ಪೊಲೀಸ್ ಕಾನ್ಸ್‌ಟೇಬಲ್ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಾರೆ. ಬೆಂಗಳೂರು ಗ್ರಾಮಾಂತರ ಸೆನ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಲೋಕೇಶ್ ಬಂಧಿತರು. ಜಯಣ್ಣಚಾರ್ ಎಂಬುವರಿಂದ 50 ಸಾವಿರ ರೂ.ಗೆ ಕಾನ್ಸ್‌ಟೇಬಲ್ ಬೇಡಿಕೆಯಿಟ್ಟಿದ್ದರು. ಈ ಪೈಕಿ 25 ಸಾವಿರ ರೂ. ಪಡೆಯುವಾಗ ಲೋಕಾಯುಕ್ತ (Lokayukta Raid) ಬಲೆಗೆ ಬಿದ್ದಿದ್ದಾರೆ.
ಇದನ್ನೂ ಓದಿ | Kodagu News: ಮ್ಯಾನೇಜರ್ ಕಿರುಕುಳ; ಬಸ್ ಡಿಪೋದಲ್ಲೇ ವಿಷ ಸೇವಿಸಿದ ನೌಕರ
ಬಾಗೇಪಲ್ಲಿಯಲ್ಲಿ ಕಂಪ್ಯೂಟರ್ ಅಪರೇಟರ್ ವಶಕ್ಕೆ
ಚಿಕ್ಕಬಳ್ಳಾಪುರ: ಬಟ್ಟೆ ಅಂಗಡಿಗೆ ಪರವಾನಗಿ ನೀಡಲು ಲಂಚ ಪಡೆಯುತ್ತಿದ್ದಾಗ ಕಾರ್ಮಿಕ ಇಲಾಖೆಯ ಕಂಪ್ಯೂಟರ್ ಆಪರೇಟರ್ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಜಿಲ್ಲೆಯ ಬಾಗೇಪಲ್ಲಿಯ ತಾಲೂಕು ಕಾರ್ಮಿಕ ಇಲಾಖೆಯಲ್ಲಿ 3500 ರೂ. ಲಂಚ ಸ್ವೀಕರಿಸುತ್ತಿದ್ದಾಗ ಕಾರ್ಮಿಕ ಇಲಾಖೆ ಕಂಪ್ಯೂಟರ್ ಆಪರೇಟರ್ ನಾಗೇಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಜೆಸಿ ಪ್ಯಾಷನ್‌ಗೆ ಕಾರ್ಮಿಕ ಪರವಾನಗಿ ನೀಡಲು ನಾಗೇಶ್ 5 ಸಾವಿರ ರೂ. ಬೇಡಿಕೆ ಇಟ್ಟಿದ್ದರು. ಈ ಪೈಕಿ 1500 ರೂ. ಮುಂಗಡ ಹಣ ಪಡೆದಿದ್ದರು. ಮಂಗಳವಾರ ಉಳಿದ 3500 ರೂ. ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಕಂಪ್ಯೂಟರ್ ಅಪರೇಟರ್ ನಾಗೇಶ್ ಅವರನ್ನು ವಶಕ್ಕೆ ಪಡೆದಿದ್ದಾರೆ.