ಬೆಂಗಳೂರು: ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಬೆಂಗಳೂರಿನಲ್ಲಿ ಹೃದಯಾಘಾತದಿಂದ (Heart attack) ಹೆಡ್ ಕಾನ್ಸ್‌ಟೇಬಲ್ ಮೃತಪಟ್ಟಿರುವ ಘಟನೆ ನಡೆದಿದೆ. ಹೆಬ್ಬಾಳ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ವಿರೂಪಾಕ್ಷಪ್ಪ ಮೃತ ದುರ್ದೈವಿ.
ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿರೂಪಾಕ್ಷಪ್ಪ ಬುಧವಾರ ಬೆಳಗ್ಗೆ ಕರ್ತವ್ಯದಲ್ಲಿದ್ದಾಗ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಹೆಬ್ಬಾಳದ ಬ್ಯಾಪ್ಟಿಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ವಿರೂಪಾಕ್ಷಪ್ಪ ನಿಧನರಾಗಿದ್ದಾರೆ. ಮೂಲತಃ ವಿಜಯಪುರ ಮೂಲದವರಾಗಿರುವ ವಿರೂಪಾಕ್ಷಪ್ಪ ಅವರ ಸಾವಿನ ಸುದ್ದಿ ಕೇಳಿ ಇತರೆ ಸಿಬ್ಬಂದಿ ಶಾಕ್ ಆಗಿದ್ದಾರೆ.
ಇದನ್ನೂ ಓದಿ | Heart attack | ಕೈನಲ್ಲಿ ಟೀ ಹಿಡಿದು ನಡೆದು ಹೋಗುತ್ತಲೇ ಕುಸಿದು ಬಿದ್ದು ಸಾವು; ಬದುಕಿನ ಕ್ಷಣಿಕತೆ ಸಿಸಿಟಿವಿಯಲ್ಲಿ ಸೆರೆ!