ಬೆಂಗಳೂರು: ಬೇಸಿಗೆ ಇನ್ನೂ ಪ್ರಖರವಾಗುವ ಮುನ್ನವೇ ರಾಜ್ಯ ಹಾಗೂ ರಾಜ್ಯಧಾನಿಯಲ್ಲಿ ಉಷ್ಣಾಂಶ ಹೆಚ್ಚಾಗಿದ್ದು, ಬಿಸಿಗಾಳಿಯ ಅಲೆಗಳು ಕಂಡುಬಂದಿವೆ. ಹೀಗಾಗಿ ಆರೋಗ್ಯದ ಬಗ್ಗೆ ಎಲ್ಲರೂ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಸೂಚನೆ (weather alert) ನೀಡಿದೆ.
ಅಧಿಕ ಉಷ್ಣಾಂಶದಿಂದ ನಾನಾ ರೀತಿಯ ಅನಾರೋಗ್ಯ ಪರಿಸ್ಥಿತಿಗಳು ಸಂಭವಿಸುವ ಸಾಧ್ಯತೆ ಇದೆ. ಅದರಲ್ಲೂ ವೃದ್ಧರು, ಮಕ್ಕಳು, ದುರ್ಬಲ ಆರೋಗ್ಯವುಳ್ಳವರು ಇನ್ನಷ್ಟು ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಹಲವು ಸಲಹೆಗಳನ್ನು ನೀಡಿ ಸುತ್ತೋಲೆ ಹೊರಡಿಸಿದೆ.
ರಾಜಧಾನಿಯಲ್ಲಿ ಕಳೆದ ಎರಡು ದಿನಗಳಿಂದ ಬೇಸಿಗೆಯ ಧಗೆ ಉಲ್ಬಣಿಸಿದೆ. ಉಷ್ಣಾಂಶವು ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಇಲ್ಲಿ ಮುಂದಿನ 48 ಗಂಟೆಗಳಲ್ಲಿ ಮೇಲ್ಮೈ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಈ ಮುನ್ನೆಚ್ಚರಿಕೆಗಳನ್ನು ಪಾಲಿಸಿ:
- ಬಾಯಾರಿಕೆ ಇಲ್ಲದಿದ್ದರೂ ಪದೇ ಪದೆ ನೀರು ಕುಡಿಯಬೇಕು. ಪ್ರಯಾಣ ಸಮಯದಲ್ಲೂ ನೀರು ತೆಗೆದುಕೊಂಡು ಹೋಗಬೇಕು.ದೇಹವು ನಿರ್ಜಲೀಕರಣಗೊಳ್ಳಲು ಬಿಡಬಾರದು.
- ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸಬೇಕು.
- ಹತ್ತಿ ಬಟ್ಟೆ ಧರಿಸುವುದು ಉತ್ತಮ.
- ಅವಶ್ಯವಿಲ್ಲದಿದ್ದರೆ ನಡುಹಗಲಿನ ಬಿಸಿಲಿನಲ್ಲಿ ನಿಲ್ಲುವುದು ಬೇಡ. ಬಿಸಿಲಿನಲ್ಲಿ ದುಡಿಯುವವರು ತಲೆಯನ್ನು ಕವರ್ ಮಾಡಿಕೊಳ್ಳುವುದು ಉತ್ತಮ.
ಇದನ್ನೂ ಓದಿ: Warmest February: 122 ವರ್ಷದಲ್ಲೇ ದಾಖಲೆಯಲ್ಲಿ ‘ಬಿಸಿ’ಯಾದ ಫೆಬ್ರವರಿ! ಹವಾಮಾನ ಬದಲಾವಣೆ ಎಫೆಕ್ಟ್?