Site icon Vistara News

Heavy Rain | ಘಟಪ್ರಭಾ ಪ್ರವಾಹಕ್ಕೆ ನಲುಗಿದ ಗೋಕಾಕ ಮಂದಿ! ಮನೆ ತೊರೆದು ಬೇರೆಡೆ ಶಿಫ್ಟ್‌

heavy rain

ಬೆಳಗಾವಿ: ರಾಜ್ಯದಲ್ಲಿ ಮಳೆಯ ಪ್ರಭಾವ (Heavy Rain) ಕಡಿಮೆ ಆಗಿದೆ. ಆದರೆ ಪಕ್ಕದ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಪರಿಣಾಮ ಘಟಪ್ರಭಾ ‌ನದಿಯು ಅಪಾಯಮಟ್ಟ ಮೀರಿ ಹರಿಯುತ್ತಿದೆ. ಇದರಿಂದಾಗಿ ಮಳೆ ನಿಂತರೂ ಮಳೆಯಿಂದ ಆಗುತ್ತಿರುವ ಸಮಸ್ಯೆ ಮಾತ್ರ ನಿಂತಿಲ್ಲ.

ಘಟಪ್ರಭಾದ ಪ್ರವಾಹದ ಪ್ರಭಾವಕ್ಕೆ ಗೋಕಾಕ ನಗರದ ಮಂದಿ ನಲುಗಿ ಹೋಗಿದ್ದಾರೆ. ನದಿಪಾತ್ರದ ಗ್ರಾಮಗಳಿಗೆ ಪ್ರವಾಹದ ಭೀತಿ ಇದ್ದು, ಗೋಕಾಕ್‌ನ ಹಳೆಯ ದನದ ಪೇಟೆಗೆ ಘಟಪ್ರಭಾ ನದಿ ನೀರು ನುಗ್ಗಿದೆ. ಘಟಪ್ರಭಾ ನದಿಗೆ 45 ಸಾವಿರ ಕ್ಯೂಸೆಕ್‌ಗಿಂತಲೂ ಒಳಹರಿವು ಹೆಚ್ಚಿದ್ದು, ಹಿಡಕಲ್ ಜಲಾಶಯದಿಂದ 22 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.

ಮನೆ ತೊರೆದು ಹೋದ ಮಂದಿ

ಇದರಿಂದಾಗಿ ಗೋಕಾಕ್, ಮೂಡಲಗಿ ನದಿ ತೀರದ ಗ್ರಾಮಗಳ ಗ್ರಾಮಸ್ಥರು ತಮ್ಮ ಮನೆ ಮಳಿಗೆಗಳನ್ನು ತೊರೆದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಆಗುತ್ತಿದ್ದಾರೆ. ಮನೆ- ಮಳಿಗೆಗಳಿಗೆ ನೀರು ನುಗ್ಗುವ ಸಾಧ್ಯತೆ ಇದ್ದು, ಮನೆಯಲ್ಲಿರುವ ಫ್ರಿಡ್ಜ್‌, ವಾಷಿಂಗ್‌ ಮಷಿನ್‌, ಟೈಲರಿಂಗ್‌ ಮಷಿನ್‌ ಸೇರಿದಂತೆ ಮಳಿಗೆಯಲ್ಲಿ ಸಂಗ್ರಹವಾಗಿರುವ ಎಲ್ಲ ವಸ್ತುಗಳನ್ನು ಶಿಫ್ಟ್‌ ಮಾಡಿಕೊಳ್ಳುತ್ತಿದ್ದಾರೆ.

ನದಿ ನೀರು ನುಗ್ಗುವ ಭೀತಿಯಲ್ಲಿ ಮಂದಿ

ನಗರದ ಪಟಗುಂದಿ ಹನುಮಂತ ದೇವಸ್ಥಾನದಲ್ಲಿ ನದಿ ನೀರು ಸುತ್ತುವರಿದಿದ್ದು, ಬೀಗ ಹಾಕಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಭಕ್ತರಾರೂ ಬಾರದಂತೆ ಮಾಹಿತಿ ರವಾನಿಸಲಾಗಿದೆ.

ಇದನ್ನೂ ಓದಿ | Rain News | ಚಿಕ್ಕಮಗಳೂರಿನಲ್ಲಿ ಮುಂದುವರಿದ ಮಳೆ: ಕೊಚ್ಚಿ ಹೋದ ರಸ್ತೆ, ಶಾಲೆಗಳಿಗೆ ರಜೆ ಘೋಷಣೆ

Exit mobile version