Site icon Vistara News

Heavy Rain | ಧಾರಾಕಾರ ಮಳೆಗೆ ಕುಸಿದು ಬಿದ್ದ ಮನೆ; ಪ್ರಾಣಾಪಾಯದಿಂದ ಕುಟುಂಬ ಪಾರು

ಹಾಸನ: ಇಲ್ಲಿನ ಹೆಬ್ಬಾಳು ಗ್ರಾಮದಲ್ಲಿ ಧಾರಾಕಾರ ಮಳೆಗೆ (Heavy Rain) ಮನೆಯೊಂದು ಕುಸಿದು ಬಿದ್ದಿದೆ. ಗ್ರಾಮದ ನಂಜೇಶ ಎಂಬುವವರಿಗೆ ಸೇರಿದ ಮನೆಗೆ ಹಾನಿಯಾಗಿದ್ದು, ಅದೃಷ್ಟವಶಾತ್‌ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮನೆ ಕುಸಿದ ರಭಸಕ್ಕೆ ಪಕ್ಕದ ದನದ ಕೊಟ್ಟಿಗೆ ಹಾಗೂ ಕುರಿ ಶೆಡ್‌ ಸೇರಿದಂತೆ ಅಕ್ಕಪಕ್ಕದ 5 ವಾಸದ ಮನೆಗಳಿಗೂ ಹಾನಿಯಾಗಿದೆ. ವಾಸಕ್ಕೆ ಮನೆಯಿಲ್ಲದೆ ನಂಜೇಶ ಕುಟುಂಬ ಕಂಗಾಲಾಗಿದ್ದು, ನೆರವಿಗೆ ಬರುವಂತೆ ಗ್ರಾಮ ಪಂಚಾಯತ್ ಹಾಗೂ ತಾಲೂಕು ಆಡಳಿತದ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಮನೆಯೊಳಗೆ ಇದ್ದ ಎಲ್ಲ ವಸ್ತುಗಳು ಅವಶೇಷಗಳಡಿ ಸಿಲುಕಿದ್ದು, ನಂಜೇಶ ಕುಟುಂಬ ಬೀದಿಗೆ ಬಿದ್ದಿದೆ. ಮಣ್ಣಿನ ಗೋಡೆಯಾಗಿದ್ದರಿಂದ ನಿರಂತರ ಮಳೆಗೆ ಮನೆ ಕುಸಿದು ಬಿದ್ದಿದೆ.

ಇದನ್ನೂ ಓದಿ | Heavy Rain | ಉಕ್ಕಿ ಹರಿಯುವ ಸೇತುವೆ ದಾಟಲು ಜೆಸಿಬಿ ಮೊರೆ ಹೋದ ಶಾಲಾ ಮಕ್ಕಳು!

Exit mobile version