ಚಾಮರಾಜನಗರ: ಇಲ್ಲಿನ ಹೆಬ್ಬಸೂರು ಗ್ರಾಮದಲ್ಲಿ ಧಾರಾಕಾರ ಮಳೆಗೆ(Heavy Rain) ಜಮೀನಿನಲ್ಲಿ ಗುಡ್ಡೆ ಹಾಕಿದ ತೆಂಗಿನಕಾಯಿ ಗುಡ್ಡೆ ಕೊಚ್ಚಿ ಹೋದ ಘಟನೆ ಸೋಮವಾರ ನಡೆದಿದೆ.
ಗ್ರಾಮದ ಚಿನ್ನಸ್ವಾಮಿ ಎನ್ನುವವರ ಜಮೀನಲ್ಲಿ ಗುಡ್ಡೆ ಹಾಕಿದ ತೆಂಗಿನ ಕಾಯಿಗಳು ನೀರು ಪಾಲಾಗಿದ್ದು, ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ತೆಂಗಿನಕಾಯಿಯನ್ನು ಹಿಡಿಯುತ್ತಿದ್ದ ವಿಡಿಯೋ ವೈರಲ್ ಆಗಿದೆ. ದಿಢೀರ್ ಮಳೆಯಿಂದಾಗಿ ಸುಮಾರು 10 ಸಾವಿರಕ್ಕೂ ಹೆಚ್ಚು ತೆಂಗಿನಕಾಯಿ ನೀರು ಪಾಲಾಗಿದೆ.
ಅಗರ-ಮಾಂಬಳ್ಳಿ ಪೊಲೀಸ್ ಠಾಣೆ ಜಲಾವೃತ
ಸೋಮವಾರ ರಾತ್ರಿಯಿಡೀ ಸುರಿದ ಮಳೆಗೆ ಜನರ ಸ್ಥಿತಿ ಅಯೋಮಯವಾಗಿದೆ. ಜಿಲ್ಲೆಯಲ್ಲಿ ಧಾರಾಕಾರ ಮಳೆಗೆ ಯಳಂದೂರು ತಾಲೂಕಿನ ಅಗರ-ಮಾಂಬಳ್ಳಿ ಪೊಲೀಸ್ ಠಾಣೆ ಜಲಾವೃತಗೊಂಡಿದೆ. ಠಾಣೆ ಒಳಗೆ ಮಳೆ ನೀರು ನುಗ್ಗಿದ್ದು ಪರಿಣಾಮ ಟೇಬಲ್, ಕುರ್ಚಿ ಮುಳುಗಡೆಯಾಗಿದೆ.
ಠಾಣೆ ಆವರಣ ಸಂಪೂರ್ಣ ಜಲಾವೃತವಾಗಿ ಸಾರ್ವಜನಿಕರು ಬರುವುದು ಅಸಾಧ್ಯವಾಗಿದೆ. ಇತ್ತ ಠಾಣೆ ಒಳಗೆ ಮಹತ್ವದ ದಾಖಲೆಗಳು ಇರುವುದರಿಂದ ಅವುಗಳ ರಕ್ಷಣೆಗೆ ಸಿಬ್ಬಂದಿ ಪರದಾಡುವಂತಾಗಿದೆ. ಮೊಟಕಾಲಿಗಿಂತ ಹೆಚ್ಚು ನೀರು ನಿಂತಿದ್ದು ಹೊರಗೆ ಬರಲು ಆಗದೇ ಒಳಗೆ ಇರಲು ಆಗದ ಅತಂತ್ರ ಸ್ಥಿತಿ ಎದುರಾಗಿದೆ. ಮಳೆ ಕೊಂಚ ತಗ್ಗಿದ್ದರೆ ಸ್ವಚ್ಛತಾ ಕಾರ್ಯ ಆರಂಭಿಸಲು ಸಿಬ್ಬಂದಿಗಳು ಮುಂದಾಗಿದ್ದಾರೆ. ಯಳಂದೂರು ತಾಲೂಕಿನ ಇನ್ನಷ್ಟು ಕಚೇರಿಗಳು ಜಲಾವೃತಗೊಂಡಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಇದನ್ನೂ ಓದಿ | Ran news | ಮಳೆಗೆ ನಾಡು ತತ್ತರ, ರಸ್ತೆ- ಹೊಲ ಮುಳುಗಡೆ, ಪರದಾಡಿದ ಜನತೆ