ಕೊಡಗು: ನೈರುತ್ಯ ಮುಂಗಾರು ಪ್ರಭಾವಕ್ಕೆ ಜನರು ನಲುಗಿ ಹೋಗಿದ್ದು, ಜನಜೀವನವೇ ಅಸ್ತವ್ಯಸ್ತವಾಗಿದೆ. ಇಲ್ಲಿನ ಸೋಮವಾರಪೇಟೆ ತಾಲೂಕಿನ ಹರಪಳ್ಳಿ ಗ್ರಾಮದಲ್ಲಿ ಮಳೆಯಿಂದ (Heavy Rain) ಭೂಕುಸಿತ ಉಂಟಾಗಿದ್ದು, ಪ್ರಾಣಭಯದಿಂದ ಜನರು ದಿನ ದೂಡುವಂತಾಗಿದೆ.
ಗ್ರಾಮದ ಎಚ್.ಎ.ಸೋಮಯ್ಯ ಅವರ ಮನೆಯಿಂದ 20 ಅಡಿ ದೂರದಲ್ಲಿ ಭೂಮಿ ಕುಸಿದಿದೆ. ಅಪಾಯದಲ್ಲಿ ಸೋಮಯ್ಯ ಅವರ ಕುಟುಂಬದವರು ಇದ್ದಾರೆ. ಮಂಗಳವಾರ ಸುರಿದ ಭಾರಿ ಮಳೆಯಿಂದ ಭೂಕುಸಿತ ಉಂಟಾಗಿದ್ದು, ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಕುಟುಂಬದವರನ್ನು ಸ್ಥಳಾಂತರ ಮಾಡುವ ಬಗ್ಗೆ ಇದುವರೆಗೂ ಯಾವುದೇ ತೀರ್ಮಾನ ಆಗಿಲ್ಲ.
ಇದನ್ನೂ ಓದಿ | Heavy Rain | ಕಾಲು ಸಂಕ ದಾಟುವಾಗ ಜಾರಿ ಬಿದ್ದು ಶಾಲಾ ಬಾಲಕಿ ನೀರು ಪಾಲು