Site icon Vistara News

Heavy Rain | ಸಾತ್ಕೊಳದಲ್ಲಿ ನಿಯಂತ್ರಣ ತಪ್ಪಿ ಹಳ್ಳಕ್ಕೆ ಕಾರು, ವ್ಯಕ್ತಿ ನೀರು ಪಾಲು

chikkamagaluru nrpura car accident

ಚಿಕ್ಕಮಗಳೂರು: ಸಂಬಂಧಿಕರ ಮನೆಗೆ ಶ್ರಾವಣಕ್ಕೆ ಹೋಗುವಾಗ ಹಳ್ಳದಲ್ಲಿ ಕೊಚ್ಚಿ ಹೋಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಎನ್.ಆರ್.ಪುರ ತಾಲೂಕಿನ ಸಾತ್ಕೊಳದಲ್ಲಿ ನಡೆದಿದೆ. ಭಾರಿ ಮಳೆಯಾಗುತ್ತಿರುವ (Heavy Rain) ಹಿನ್ನೆಲೆಯಲ್ಲಿ ರಸ್ತೆ ಸಹ ಹದಗೆಟ್ಟಿತ್ತು ಎನ್ನಲಾಗಿದೆ.

ಅರಿಶಿಣಗೆರೆ ಪ್ರಸನ್ನ (51) ಹಳ್ಳದಲ್ಲಿ ಕೊಚ್ಚಿ ಹೋದ ಮೃತ ದುರ್ದೈವಿ. ಇವರು ಶ್ರಾವಣಕ್ಕಾಗಿ ಸಂಬಂಧಿಕರ ಮನೆಗೆ ತಮ್ಮ ಕಾರಿನಲ್ಲಿ ಹೊರಟಿದ್ದರು. ಎನ್.ಆರ್.ಪುರ ತಾಲೂಕಿನ ಸಾತ್ಕೊಳಕ್ಕೆ ಬರುವ ವೇಳೆ ನಿಯಂತ್ರಣ ತಪ್ಪಿ ಕಾರು ಹಳ್ಳಕ್ಕೆ ಬಿದ್ದು ಕೊಚ್ಚಿಕೊಂಡು ಹೋಗಿದೆ.

ಕಾರಿನಿಂದ ಹೊರಬರಲಾರದೆ ಪ್ರಸನ್ನ ಅವರು ಮೃತಪಟ್ಟಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಎನ್.ಆರ್.ಪುರ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ.

Exit mobile version