Site icon Vistara News

Heavy Rain | ಭಾರಿ ಮಳೆಗೆ ನಾಗಮಂಗಲದಲ್ಲಿ 20ಕ್ಕೂ ಕೆಎಸ್‌ಆರ್‌ಟಿಸಿ ಬಸ್‌ ಮುಳುಗಡೆ

heavy

ಮಂಡ್ಯ: ಇಲ್ಲಿನ ನಾಗಮಂಗಲದಲ್ಲಿ ಕಳೆದ ಮೂರು ದಿನಗಳಿಂದ ಸತತ ಮಳೆಯಾಗುತ್ತಿದ್ದು, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣವು (Heavy Rain) ಜಲಾವೃತಗೊಂಡಿದೆ. ಪಕ್ಕದ ಬಸ್‌ ಡಿಪೋ ಕೆರೆಯಂತಾಗಿದ್ದು, ಸುಮಾರು 20ಕ್ಕೂ ಹೆಚ್ಚು ಬಸ್ಸುಗಳು ಮುಳುಗಡೆಯಾಗಿದೆ. ಕೆರೆ ಕೋಡಿ ಬಿದ್ದ ಪರಿಣಾಮ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಡಿಪೋಗೆ ನೀರು ನುಗ್ಗಿದೆ.

ತೆಪ್ಪ ಬಳಸಿ ಹೊರ ಬರುತ್ತಿರುವ ಸಿಬ್ಬಂದಿ

ಕೆಎಸ್‌ಆರ್‌ಟಿಸಿ ಕಚೇರಿ ಸೇರಿದಂತೆ ಹಲವು ಕೊಠಡಿಗಳಿಗೂ ನೀರು ತುಂಬಿದ್ದು, ಕಚೇರಿಯ ಕಡತಗಳ ಸಂರಕ್ಷಣೆಗೆ ಸಿಬ್ಬಂದಿ ಪರದಾಡುತ್ತಿದ್ದ ದೃಶ್ಯ ಕಂಡು ಬಂತು. ತೆಪ್ಪದ ಸಹಾಯದಿಂದ ಕಡತಗಳನ್ನು ಸಿಬ್ಬಂದಿ ತರುತ್ತಿದ್ದರು.

ಟೊಳ್ಳಿಕೆರೆಯಿಂದ ಕೊಚ್ಚಿ ಹೋದ ರಸ್ತೆ

ನೀರಿನ ರಭಸಕ್ಕೆ ಕೊಚ್ಚಿ ಹೋದ ರಸ್ತೆ

ನಾಗಮಂಗಲ ತಾಲೂಕಿನ ಅಗಸೇಗೌಡನಕೊಪ್ಪಲಿನಲ್ಲಿ ಕೆರೆ ನೀರಿನ ರಭಸಕ್ಕೆ ರಸ್ತೆ ಕೊಚ್ಚಿ ಹೋಗಿದೆ. ಧಾರಾಕಾರ ಮಳೆಯಿಂದ ಟೊಳ್ಳಿ ಕೆರೆ ಭರ್ತಿಯಾಗಿದೆ. ಟೊಳ್ಳಿಕೆರೆಯಿಂದ ಅಪಾರ ಪ್ರಮಾಣದ ನೀರು ಹೊರ ಬರುತ್ತಿದ್ದು, ಅಗಸೇಗೌಡನಕೊಪ್ಪಲು- ಮೈಲಾರಪಟ್ಟಣ ರಸ್ತೆ ಕೊಚ್ಚಿ ಹೋಗಿದೆ. ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಜತೆಗೆ ಕೆರೆ ನೀರಿನಿಂದ ಜಮೀನು ಜಲಾವೃತಗೊಂಡಿದೆ.

ಇದನ್ನೂ ಓದಿ | Fishermen missing | ಅಲೆಗಳ ಹೊಡೆತಕ್ಕೆ ಮುಳುಗಿದ ದೋಣಿ; ಮೀನುಗಾರಿಕೆಗೆ ಹೋದವರಲ್ಲಿ ಒಬ್ಬ ನಾಪತ್ತೆ

Exit mobile version