ತುಮಕೂರು: ಇಲ್ಲಿನ ಶಿರಾದ ಚೆನ್ನನಕುಂಟೆ ಗ್ರಾಮದಲ್ಲಿ ಶಿಕ್ಷಕರೊಬ್ಬರು ಹಳ್ಳ ದಾಟುಲು ಹೋಗಿ ನೀರಿನಲ್ಲಿ (Heavy Rain) ಕೊಚ್ಚಿ ಹೋದ ಪ್ರಕರಣ ನಡೆದಿದೆ. ಶಿಕ್ಷಕ ಆರೀಫ್ ಉಲ್ಲಾ (55) ಎಂಬುವವರು ದಾವತ್ ಪಾಳ್ಯದ ಶಾಲೆಯಲ್ಲಿ ಶಿಕ್ಷಕರಾಗಿದ್ದು, ಕೆಲಸ ಮುಗಿಸಿ ತೆರಳುವಾಗ ಈ ಅವಘಡ ಸಂಭವಿಸಿದೆ.
ಗ್ರಾಮದಲ್ಲಿ ಸೋಮವಾರದಿಂದ ವ್ಯಾಪಕ ಮಳೆಯಾಗಿದ್ದು, ಪರಿಣಾಮ ಹಳ್ಳದಲ್ಲಿ ನೀರಿನ ಪ್ರಮಾಣ ಅಧಿಕವಾಗಿತ್ತು. ಇದನ್ನು ಗಮನಿಸದೇ ಹಳ್ಳ ದಾಟುವ ಸಮಯದಲ್ಲಿ ವಾಹನ ಆಯ ತಪ್ಪಿ ಬಿದ್ದಿದೆ. ಹಳ್ಳದಲ್ಲಿ ನೀರು ರಭಸವಾಗಿ ಇದ್ದಿದ್ದರಿಂದ ಆರಿಫ್ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಶೋಧ ಕಾರ್ಯ ನಡೆಸಿದಾಗ ಸುಮಾರು ಐವತ್ತು ಮೀಟರ್ ದೂರದಲ್ಲಿ ಸೀಮೆ ಜಾಲಿ ಗಿಡಗಳ ಮಧ್ಯೆ ಆರಿಫ್ ಮೃತದೇಹ ಪತ್ತೆಯಾಗಿದೆ. ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರಿಫ್ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ | Heavy Rain | ಮಳೆ ಅನಾಹುತಕ್ಕೆ ಪ್ರತ್ಯೇಕ ಕಡೆ ವೃದ್ಧೆಯರಿಬ್ಬರು ಸಾವು