ಗದಗ: ಇಲ್ಲಿನ ಶಿರಹಟ್ಟಿ ತಾಲೂಕಿನ ಕೆರಹಳ್ಳಿ ಗ್ರಾಮದಲ್ಲಿ ಸತತ ಮಳೆಯಾಗುತ್ತಿದ್ದು (Heavy Rain) ಜನಜೀವನ ಅಸ್ತವ್ಯಸ್ತವಾಗಿದೆ. ಭಾರಿ ಮಳೆಗೆ ಕೆರೆಯಲ್ಲಿ ತುಂಬಿ ಹರಿಯುತ್ತಿದ್ದ ನೀರಿನಲ್ಲಿ ಶ್ವಾನವೊಂದು ಸಿಲುಕಿದ್ದು, ಜೀವದ ಹಂಗು ತೊರೆದು ಯುವಕನೊಬ್ಬ ರಕ್ಷಿಸಿದ್ದಾನೆ.
ಗ್ರಾಮದ ಕೆರೆ ಕೋಡಿ ಒಡೆದ ಪರಿಣಾಮ ನಾಯಿಯೊಂದು ಸಿಲುಕಿ ನರಳಾಡುತ್ತಿತ್ತು. ಇದನ್ನು ಗಮನಿಸಿದ ಸಂಗಮೇಶ ನೀರಿಗೆ ಧುಮುಕಿ ಶ್ವಾನವನ್ನು ರಕ್ಷಿಸಿದ್ದಾರೆ. ತುಂಬಿ ಹರಿಯುತ್ತಿದ್ದ ನೀರು ಜತೆಗೆ ಕಾಲು ಜಾರುವಷ್ಟು ಪಾಚಿಕಟ್ಟಿತ್ತು. ಸ್ವಲ್ಪ ಆಯ ತಪ್ಪಿದರೆ ಯುವಕ ಸಹ ನೀರುಪಾಲಾಗುವ ಸಾಧ್ಯತೆ ಇತ್ತು. ಆದರೆ, ಇದನ್ನು ಲೆಕ್ಕಿಸದೆ ಧೈರ್ಯದಿಂದ ನೀರಿಗೆ ಇಳಿದು ನಾಯಿಯನ್ನು ರಕ್ಷಣೆ ಮಾಡುವುದರಲ್ಲಿ ಯಶಸ್ವಿ ಆಗಿದ್ದಾರೆ ಎಂದು ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | ಮುದ್ದಿನ ನಾಯಿಗೆ ಸೀಮಂತ, ಶ್ವಾನ ಪ್ರೀತಿ ಮೆರೆದ ನಾಟಕ ಕಲಾವಿದೆ ಜ್ಯೋತಿ