Site icon Vistara News

ಬಿಟ್ಟು ಬಿಡದೇ ಮಳೆ ಸುರಿದ ಪರಿಣಾಮ ಜನ ಕಂಗಾಲು

Male avantara in State

ಬೆಂಗಳೂರು : ರಾಜ್ಯಾದ್ಯಂತ ಬಿಟ್ಟು ಬಿಡದೇ ಮಳೆ ಸುರಿದ ಪರಿಣಾಮ ಜನರು ಕಂಗಾಲಾಗಿ ಹೋಗಿದ್ದಾರೆ. ಜನಜೀವನ ಅಸ್ತವ್ಯಸ್ತವಾಗಿದ್ದು, ಅಪಾರ ಹಾನಿ ಸಂಭವಿಸಿದೆ.

ವಿಜಯಪುರದಲ್ಲಿ ಭಾರಿ ಮಳೆಯಿಂದಾಗಿ ನಂದ್ಯಾಳ ಗ್ರಾಮದಲ್ಲಿನ ಐದಾರು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಧವಸ, ಧಾನ್ಯ ಸೇರಿದಂತೆ ದಿನೋಪಯೋಗಿ ವಸ್ತುಗಳೆಲ್ಲ ನೀರುಪಾಲು ಆಗಿ ನೀರು ಬೇರೆಡೆ ಹರಿಯಲು ವ್ಯವಸ್ಥೆ ಕಲ್ಪಿಸಬೇಕು ಹಾಗೂ ಬಡ ಕುಟುಂಬಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನೂ ಶಿವಮೊಗ್ಗದಲ್ಲಿಯೂ ಕೂಡ ಮಳೆ ಹೆಚ್ಚಾದ ಹಿನ್ನಲೆಯಲ್ಲಿ ಜಲಾವೃತಗೊಂಡ ಮನೆಯಿಂದ ತಾಯಿ ಮಗುವನ್ನು ಅಗ್ನಿಶಾಮಕ ದಳ ಸಿಬ್ಬಂದಿ ಪಾರು ಮಾಡಿದ್ದಾರೆ. ಸಂಜೆ ವೇಳೆ ಬಡಾವಣೆಯಲ್ಲಿ ನೀರು ಐದು ಅಡಿಗೂ ಚ್ಚು ನೀರು ತುಂಬಿದ ಪರಿಣಾಮನಾಗವೇಣಿ ಹಾಗೂ 4 ತಿಂಗಳ ಸಿಕ್ಕಿಹಾಕೊಂಡಿದ್ದರು. ಕಿರಣ್, ಭಾಗ್ಯಮ್ಮ ಹಾಗೂ ದೀಕ್ಷಾ ಎಂಬುವವರನ್ನು ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಿಸಿದ್ದಾರೆ.

ಶಿವಮೊಗ್ಗ ತಾಲೂಕಿನ ಮುದ್ದಿನ ಕೊಪ್ಪ ಗ್ರಾಮದ ಚಿಕ್ಕೇರಿ ಕೆರೆಯ ನೀರಿನ ರಭಸಕ್ಕೆ ಹಸುಗಳು ಕೂಡ ಕೊಚ್ಚಿಹೋದವು. ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದಲ್ಲಿ ಹಳ್ಳ ತುಂಬಿ ಹರಿಯುತ್ತಿದ್ದು, ಹಳ್ಳದ ಸೇತುವೆ ಮೇಲೆ ನೀರು ಹರಿಯುತ್ತಿದೆ. ಸೇತುವೆ ಮೇಲೆ ನೀರು ಹರಿಯುತ್ತಿರುವ ಹಿನ್ನಲೆಯಲ್ಲಿ ರಸ್ತೆ ಸಂಪರ್ಕ ಸ್ಥಗಿತಗೊಂಡಿದ್ದು, ಹಿರೇಸಿಂದೋಗಿ-ಅಳವಂಡಿ ಸಂಪರ್ಕ ಸ್ಥಗಿತವಾಗಿದೆ.

ಮುದ್ದಿನ ಕೊಪ್ಪ ಗ್ರಾಮದ ಚಿಕ್ಕೇರಿ ಕೆರೆಯ ನೀರಿನ ರಭಸಕ್ಕೆ ಹಸುಗಳು ಕೊಚ್ಚಿ ಹೋದ ದೃಶ್ಯ

ಹುಬ್ಬಳ್ಳಿಯಲ್ಲಿಯೂ ಕೂಡ ಕೆರೆ ಭರ್ತಿಯಾಗಿ ಕೋಡಿ ಹರಿದು, ಹೊಲ, ಮನೆಗಳಿಗೆ ನೀರು ನುಗ್ಗಿ, ಹಾನಿ ಸಂಭವಿಸಿದೆ. ಕುಂದಗೋಳ ತಾಲೂಕು ಪಶುಪತಿಹಾಳ ಗ್ರಾಮದಲ್ಲಿಯಲ್ಲವ್ವ ಡೊಳ್ಳಿನ ಎಂಬುವವರದೂ ಸೇರಿದಂತೆ ಹಲವರ ಮನೆಗಳ ಕುಸಿತಗೊಂಡಿದೆ. ಕೆರೆ ನೀರು ಭರ್ತಿಯಾಗಿ ಕೋಡಿ ಹರಿದು ಹೊಲಗಳು ಜಲ ಆವೃತಗೊಂಡಿದೆ.

ಬಳ್ಳಾರಿಯಲ್ಲಿ ಹಗರಿ ನದಿ ತುಂಬಿ ಹರಿಯುತ್ತಿದ್ದರೂ ದಾಟಲು ಹೋಗಿ ಯುವಕ ಕಾಲು ಜಾರಿ ಬಿದ್ದಿದ್ದಾನೆ. 23 ವರ್ಷದ ಮಲ್ಲಿಕಾರ್ಜುನ ಎಂಬ ಯುವಕ ರಾರಾವಿ ಸೇತುವೆ ದಾಟಲು ಹೊಗಿ ಅಗರಿ ನದಿಯಲ್ಲಿ ಕೊಚ್ಚಿ ಹೋಗಿದ್ದ. ಕೂಡಲೇ ಸ್ಥಳೀಯರು ಆತನನ್ನ ರಕ್ಷಣೆ ಮಾಡಲಾಗಿದೆ.

ಹಾವೇರಿಯಲ್ಲಿ ಪಟ್ಟಣದ ಶ್ರೀ ಗ್ರಾಮದೇವಿ ದೇವಸ್ಥಾನ ಓಣಿ ರಜಪುತಗಲ್ಲಿಯಲ್ಲಿ ಮಳೆಯಿಂದಾಗಿ ಪ್ರಕಾಶ ಹಳೆಕೋಟಿ ಅವರ ಮನೆಯ ಗೋಡೆ  ಸಂಪೂರ್ಣ ಕುಸಿತಗೊಂಡಿದೆ. ಶ್ರೀ ಗ್ರಾಮದೇವಿ ದೇವಸ್ಥಾನದ ಅರ್ಚಕ ಲೋಹಿತ ಅರ್ಕಸಾಲಿ ಕುಟುಂಬ ಮನೆಯಲ್ಲಿ ವಾಸವಾಗಿತ್ತು. ಅದೃಷ್ಟವಶಾತ್ ಕುಟುಂಬದ ಸದಸ್ಯರ ಮುಂಜಾಗ್ರತೆಯಿಂದ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.

ಇದನ್ನೂ ಓದಿ | ಬಾಗಲಕೋಟೆಯಿಂದ ಕೊಡಗಿನವರೆಗೆ ಮಳೆಯೋ ಮಳೆ: ಹಳ್ಳಿಗರಲ್ಲಿ ಸಂತಸ, ನಗರದಲ್ಲಿ ಸಂಕಟ

ಗದಗದಲ್ಲಿ ಲಕ್ಷ್ಮೇಶ್ವರ ತಾಲೂಕಿನ ನೆಲೂಗಲ್ ಗ್ರಾಮದಲ್ಲಿ ನಿರಂತರ ಮಳೆ ಹಿನ್ನೆಲೆ ತುಂಬಿ ಹರಿಯುತ್ತಿದ್ದ ಹಳ್ಳ ದಾಟುವಾಗ ಕಾರು ಸಮೇತ 4 ಜನರು ಹಳ್ಳದಲ್ಲಿ  ಕೊಚ್ಚಿ ಹೋಗಿದ್ದಾರೆ. ಗ್ರಾಮಸ್ಥರ ಸಹಾಯದಿಂದ  ಸಹಾಯದಿಂದ 4ಜನರನ್ನು ರೆಸ್ಕ್ಯೂ(ರಕ್ಷಣೆ ) ಮಾಡಿದ ಪೊಲೀಸ್ ಸಿಬ್ಬಂದಿ. ಅದೃಷ್ಟವಶಾತ್ ಪ್ರಾಣಾಪಾಯದಿಂದ ನಾಲ್ವರು ಪಾರಾಗಿದ್ದಾರೆ.

ಅಪಾರ ನಷ್ಟ :

ದಾವಣಗೆರೆ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ವ್ಯಾಪಕ ಪ್ರಮಾಣದ ಬೆಳೆ , ಆಸ್ತಿ ನಷ್ಟ ಸಂಭವಿಸಿದೆ. ಚನ್ನಗಿರಿ ತಾಲೂಕಿನ ಜಯಂತಿನಗರ, ಕೋಟಿಹಾಳ್ ,ಚಿಕ್ಕ ಕುರುಹಳ್ಳಿ  ಚಿರಡೋಣಿ ಗ್ರಾಮಗಳಲ್ಲಿ 33  ಮನೆಗೆ ನೀರು ನುಗ್ಗಿ, ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ 1878 ಹೆಕ್ಟೇರ್ ಭತ್ತದ ಬೆಳೆ ನೀರಲ್ಲಿ ಮುಳುಗಡೆ ಆಗಿದೆ. 87 ಕ್ಕೂ ಹೆಚ್ಚು ಜನರಿಗೆ ಬೇರೆಡೆ ಸ್ಥಳಾಂತರ ಮಾಡಲಾಗಿದ್ದು, 65 ಹೆಕ್ಟೇರ್ ಪ್ರದೇಶದ ಅಡಿಕೆ ತೆಂಗು ಬಾಳೆ ಗೆ ಹಾನಿ ಆಗಿದೆ. ಜಿಲ್ಲಾಡಳಿತದಿಂದ  5.5 ಕೋಟಿ ಮೌಲ್ಯದ ಬೆಳೆ ಹಾನಿ ಆಗಿರುವುದು ಅಂದಾಜಿಸಲಾಗಿದ್ದು, ಜಿಲ್ಲೆಯಲ್ಲಿ 17  ಸಂಪೂರ್ಣ , 67 ಭಾಗಶಃ  ಸೇರಿ 84 ಮನೆ ಕುಸಿತಗೊಂಡಿದೆ. ಹಾನಿ ಪ್ರದೇಶಕ್ಕೆ ಡಿಸಿ, ಎಸಿ, ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ ಮುಂದುವರಿದ ಮಳೆಯಿಂದಾಗಿ ಅಪಾರ ಪ್ರಮಾಣದ ಭತ್ತ, ಅಡಿಕೆ ಸೇರಿದಂತೆ ಹಲವು ಬೆಳೆಗಳು ನಾಶಗೊಂಡಿದೆ. ಅಪಾರ ಪ್ರಮಾಣದ ಭತ್ತ, ಅಡಿಕೆ ಸೇರಿದಂತೆ ಹಲವು ಬೆಳೆಗಳು ನಾಶಗೊಂಡಿದೆ. ಇದರಿಂದಾಗಿ ಬೆಳೆ ಹಾನಿಯಾದ ಪ್ರದೇಶಕ್ಕೆ ಸಚಿವ ಬಿ. ಸಿ. ಪಾಟೀಲ್ ಭೇಟಿ ನೀಡಲಿದ್ದಾರೆ.

ವಿಜಯಪುರ ತಾಲೂಕಿನ ತಾಜಪುರ ಗ್ರಾಮದಲ್ಲಿಮಲ್ಲಪ್ಪ ಬಿದರಿ ಎಂಬುವರಿಗೆ ಸೇರಿದ 3 ಎಕರೆಯಷ್ಟು ಬಾಳೆ ತೋಟ ಜಲಾವೃತಗೊಂಡಿದೆ. ₹6 ಲಕ್ಷ ಮೌಲ್ಯದ ಬಾಳೆ ಬೆಳೆ ಆಗಿದ್ದು, ಎಕರೆಗೆ ₹70 ಸಾವಿರದಂತೆ ಖರ್ಚು ಮಾಡಿ ಬೆಳೆದಿರುವ ಬೆಳೆ ಆಗಿದೆ. ಸುತ್ತಲೂ ಕೆಸರು ಆಗಿದ್ದು, ರೈತ ಹೊರಬಾರದೇ ಕಂಗಾಲಾಗಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಚಂದಗಿರಿಕೊಪ್ಪಲು ಗ್ರಾಮದಲ್ಲಿ ಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಳ ಹಿನ್ನೆಲೆಯಲ್ಲಿ ಹಳ್ಳದ ಬಳಿ‌ ಇದ್ದ ತೆಂಗು, ಹಲಸು, ಸೇರಿದಂತೆ ಮೊದಲಾದ ಮರಗಳು ಹಳ್ಳಕ್ಕೆ ಬಿದ್ದಿದೆ.

ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕಿನಾದ್ಯಂತ ಅಕಾಲಿಕ ಮಳೆ ಹೊಡೆತಕ್ಕೆ ಒಣಗಿಸಲು ಹಾಕಿದ್ದ ಮೆಕ್ಕೆಜೋಳದ ರಾಶಿ ಸಂಪೂರ್ಣ ಹಾನಿಯಾಗಿದೆ. ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯ ರಭಸಕ್ಜೆ ಮೆಕ್ಕೆಜೋಳ ತೆನೆ ನಷ್ಟವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಗಮನಹರಿಸಿ ರೈತರಿಗೆ ಸೂಕ್ತವಾದ ಪರಿಹಾರ ಒದಗಿಸಬೇಕೆಂದು ರೈತ ಸಂಘ ಹಾಗೂ ಕರವೇ ಕಾರ್ಯಕರ್ತರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಶಾಲಾ ಕಾಲೇಜಿಗೆ ರಜೆ :

ದಾವಣಗೆರೆಯಲ್ಲಿ‌ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಯಿಂದಾಗಿ ಶುಕ್ರವಾರ 1 ರಿಂದ 10 ನೇ ತರಗತಿ ವರೆಗೂ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಜಿಲ್ಲಾಧ್ಯಂತ ರಜೆ ಘೋಷಣೆ ಮಾಡಿದ್ದಾರೆ. ಉಡುಪಿಯಲ್ಲಿಯೂ ಕೂಡ ಹವಾಮಾನ ಇಲಾಖೆ ರೆಡ್ ಎಲರ್ಟ್ ಘೋಷಿಸಿರುವ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಜಿಲ್ಲಾಧಿಕಾರಿ ಕೂರ್ಮರಾವ್ರ ರಜೆ ಘೋಷಿಸಿದ್ದಾರೆ. ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಹಾಗೂ ಅಂಗನವಾಡಿಗಳಿಗೆ ರಜೆ ಘೋಷಿಸಿದ್ದಾರೆ. ಹಾವೇರಿಯಲ್ಲಿಯೂ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ  ಸಂಜೆಯ ಶೆಟ್ಟಣ್ಣನವರ್ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿಯೂ ಕೂಡ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.

ತುಮುಕೂರಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಮಳೆ ರಭಸಕ್ಕೆ ಸರ್ಕಾರಿ ಶಾಲೆಯ ಮೇಲ್ಚಾವಣಿ ಕುಸಿದಿದೆ. ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ನೇರಳೆಕೆರೆಯಲ್ಲಿ ಘಟನೆ ಸಂಭವಿಸಿದ್ದು, ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಕೂದಲೆಳೆ ಅಂತರದಲ್ಲಿ ಭಾರಿ ದುರಂತ ತಪ್ಪಿದೆ.

ಶಾಲೆಯ ಮೇಲ್ಚಾವಣಿ ಕುಸಿದ ದೃಶ್ಯ

ಅದೃಷ್ಟವಶಾತ್ ಆಗಷ್ಟೇ ಶಾಲೆಯಿಂದ ಮಕ್ಕಳು ಹೊರಗೆ ಹೋಗಿದ್ದು, ಯಾವುದೇ ಅವಾಂತರ ಆಗಿಲ್ಲ. 50 ವರ್ಷ ಇತಿಹಾಸ ಹೊಂದಿರುವ ಈ ಶಾಲೆಯಲ್ಲಿ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರು ಹಿಂದೇಟು ಹಾಕುತ್ತಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸುವಂತೆ ನೇರಳೆಕೆರೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ರಾಜ್ಯದೆಲ್ಲೆಡೆ ಧಾರಾಕಾರ ಮಳೆ: ಮನೆಗೆ ನುಗ್ಗಿದ ನೀರು, ಶಾಲೆ ಗೋಡೆ ಕುಸಿತ, ತುಂಬಿದ ಜಲಾಶಯ

Exit mobile version