Site icon Vistara News

Heggadadevankote Election Results : ಎಚ್​​ಡಿ ಕೋಟೆಯಲ್ಲಿ ಕಾಂಗ್ರೆಸ್​ನ ಅನಿಲ್​ ಚಿಕ್ಕಮಾದುಗೆ ಗೆಲುವು

Heggadadevankote Election Results Anil Chikkamadu Winner

#image_title

ಮೈಸೂರು: ಮೀಸಲು ಕ್ಷೇತ್ರವಾಗಿರುವ ಹೆಚ್​​​ಡಿ ಕೋಟೆಯಲ್ಲಿ.ಕಾಂಗ್ರೆಸ್​ ಪಕ್ಷದ ಅನಿಲ್ ಚಿಕ್ಕಮಾದು (84359) ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಕೃಷ್ಣ ನಾಯಕ (49420) ವಿರುದ್ಧ 34939 ಮತಗಳ ಅಂತರದಿಂದ ವಿಜಯ ಸಾಧಿಸಿದ್ದಾರೆ. 2018ರಲ್ಲಿ ಕಾಂಗ್ರೆಸ್‌ನ ಸಿ ಅನಿಲ್‌ ಕುಮಾರ್‌ 76,652 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಅವರ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರಿದ್ದ ಚಿಕ್ಕಣ್ಣ 54,559 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.

2008ರ ಚುನಾವಣೆ ಸಮಯದಲ್ಲಿ ನಡೆದ ಕ್ಷೇತ್ರ ಮರುವಿಂಗಡಣೆಯಲ್ಲಿ ಎಚ್‌ ಡಿ ಕೋಟೆ ಕ್ಷೇತ್ರವು ಎಸ್‌ಟಿ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟಿತು. 2008ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಚಿಕ್ಕಣ್ಣ 43,222 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಬಿಜೆಪಿಯ ಕೆ ಚಿಕ್ಕವೀರನಾಯಕ 30,680 ಮತಗಳನ್ನು ಪಡೆದು ಸೋಲುಂಡರು. 2013ರ ಚುನಾವಣೆಯಲ್ಲಿ ಜೆಡಿಎಸ್‌ನ ಎಸ್‌ ಚಿಕ್ಕಮಾದು 48,606 ಮತಗಳನ್ನು ಪಡೆದು ಗೆದ್ದರೆ, ಕಾಂಗ್ರೆಸ್‌ನ ಚಿಕ್ಕಣ್ಣ 36,108 ಮತ ಪಡೆದು ಸೋತಿದ್ದರು.

ಇದನ್ನೂ ಓದಿ : Hunsur Election Results : ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್​ನ ಹರೀಶ್​ ಗೌಡಗೆ ಗೆಲುವು

ಮೈಸೂರು ಜಿಲ್ಲೆಯಲ್ಲಿದ್ದ ಪಶ್ಚಿಮ ಘಟ್ಟಗಳೊಂದಿಗೆ ಬೆರೆತುಹೋಗಿರುವ ಕ್ಷೇತ್ರ ಎಚ್‌ಡಿ ಕೋಟೆ. ಈ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತಿ ಪರಿಶಿಷ್ಟ ಪಂಗಡಗಳ ಮತದಾರರ ಸಂಖ್ಯೆ ಸಮಬಲ ಹೊಂದಿದೆ. ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಇರುವ ಕ್ಷೇತ್ರದಲ್ಲಿ ದಲಿತರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಕ್ಷೇತ್ರದಲ್ಲಿ ಸುಮಾರು 2,15,094 ಮತದಾರರಿದ್ದಾರೆ. ಅವರಲ್ಲಿ 91 ಸಾವಿರ ದಲಿತರು, 86 ಸಾವಿರ ಪರಿಶಿಷ್ಟ ಪಂಗಡದವರು, 15 ಸಾವಿರ ಮುಸ್ಲಿಮರು ಮತ್ತು ಇತರ ಜಾತಿಗಳ 22 ಸಾವಿರ ಮಂದಿ ಮತದಾರರಿದ್ದಾರೆ ಎಂದು ಅಂದಾಜಿಸಲಾಗಿದೆ.

Exit mobile version