Site icon Vistara News

VISTARA TOP 10 NEWS : ಚಂದ್ರ ಸ್ಪರ್ಶಕ್ಕೆ ಕ್ಷಣಗಣನೆ ಶುರು, ಎನ್‌ಇಪಿ ಜಟಾಪಟಿ ಜೋರು ಇತ್ಯಾದಿ ಪ್ರಮುಖ ಸುದ್ದಿಗಳಿವು

Top 10 news

1. Chandrayaan 3: ಚಂದ್ರನ ಕೂಗಳತೆ ದೂರದಿಂದ ಸೆರೆಸಿಕ್ಕವು ಫೋಟೊಗಳು; ಇತಿಹಾಸಕ್ಕೆ ಬಾಕಿ ಇವೆ ಕೆಲವೇ ಗಂಟೆಗಳು
ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್‌ ಮಾಡ್ಯೂಲ್‌ ಸಾಫ್ಟ್‌ ಲ್ಯಾಂಡ್‌ ಆಗುವುದನ್ನು ಕಣ್ತುಂಬಿಕೊಳ್ಳಲು ದೇಶಕ್ಕೆ ದೇಶವೇ ಕಾಯುತ್ತಿದೆ. ಚಂದ್ರಯಾನ 3 (Chandrayaan 3) ಯಶಸ್ವಿಯಾಗಲಿ ಎಂದು ಜನ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಚಂದ್ರನಿಂದ ಕೇವಲ 70 ಕಿಲೋಮೀಟರ್‌ ದೂರದಿಂದ ಲ್ಯಾಂಡರ್‌ ಮಾಡ್ಯೂಲ್‌ (Lander Module) ಫೋಟೊಗಳನ್ನು ತೆಗೆದು ಕಳುಹಿಸಿದೆ. ಫೋಟೊಗಳನ್ನು ಕೊಲಾಜ್‌ ಮಾಡಲಾದ ವಿಡಿಯೊವನ್ನು ಇಸ್ರೋ ಶೇರ್‌ ಮಾಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: Chandrayaan 3: ಚಂದ್ರಯಾನದ ಯಶಸ್ಸಿನಿಂದ ಭಾರತಕ್ಕೆ ಆಗುವ ಲಾಭಗಳೇನು?
ಈ ಸುದ್ದಿ ಓದಿ: Prakash Raj: ಚಂದ್ರಯಾನ-3 ಬಗ್ಗೆ ವ್ಯಂಗ್ಯಭರಿತ ಟ್ವೀಟ್‌ ಮಾಡಿದ ನಟ ಪ್ರಕಾಶ್‌ ರಾಜ್‌ ವಿರುದ್ಧ ದೂರು ದಾಖಲು

2. ಮಂಡ್ಯದಲ್ಲಿ ಮುಂದುವರಿದ ಕಾವೇರಿ ಕಿಚ್ಚು; ಹೆದ್ದಾರಿ ಬಂದ್‌ ಮಾಡಿದ ರೈತರು ಪೊಲೀಸರ ವಶಕ್ಕೆ
ಮಂಡ್ಯ: ಸಕ್ಕರೆ ನಾಡಿನಲ್ಲಿ ಕಾವೇರಿ ಕಿಚ್ಚು. ಮುಂದುವರಿದಿದೆ. ಕೆಆರ್‌ಎಸ್‌ ಡ್ಯಾಂನಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವುದನ್ನು (Cauvery Water Dispute) ಖಂಡಿಸಿ ಬಿಜೆಪಿ ಹೋರಾಟ ನಡೆಸಿದ ಬೆನ್ನಲ್ಲೇ ರಾಜ್ಯ ರೈತ ಸಂಘದಿಂದ ನಗರದಲ್ಲಿ ಮಂಗಳವಾರ ಬೃಹತ್‌ ಪ್ರತಿಭಟನೆ ನಡೆಸಲಾಯಿತು. ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಬಂದ್‌ ಮಾಡಿದ ರೈತರು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

3. ಮಕ್ಕಳ ಭವಿಷ್ಯದ ಕುರಿತು ಚೆಲ್ಲಾಟ ಬೇಡ! ಕಾಂಗ್ರೆಸ್ ನಾಯಕರ ವಿರುದ್ದ ಧರ್ಮೇಂದ್ರ ಪ್ರಧಾನ್ ವಾಗ್ದಾಳಿ
ನವದೆಹಲಿ: ಕರ್ನಾಟಕದಲ್ಲಿ (Karnataka State) ಮುಂದಿನ ಶೈಕ್ಷಣಿಕ ವರ್ಷದಿಂದ (Academic Year) ರಾಷ್ಟ್ರೀಯ ಶಿಕ್ಷಣ ನೀತಿ (National Education Policy – NEP)ಯನ್ನು ರದ್ದು ಮಾಡಲಾಗುತ್ತಿದೆ ಎಂದು ಸರ್ಕಾರ (Government of Karnataka) ಘೋಷಣೆ ಮಾಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Union Education Minister Dharmendra Pradhan) ಅವರು, ರಾಜ್ಯದ ಈ ನಿರ್ಧಾರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡಬೇಡಿ ಎಂದು ಧರ್ಮೇಂದ್ರ ಪ್ರಧಾನ್ ಅವರು ರಾಜ್ಯ ಕಾಂಗ್ರೆಸ್ ನಾಯಕರಿಗೆ ತಿವಿದಿದ್ದಾರೆ. ಕರ್ನಾಟಕದ ಡಿಸಿಎಂ ಡಿ ಕೆ ಶಿವಕುಮಾರ್ (DCM D K Shivakumar) ವಿರುದ್ದ ಹರಿಹಾಯ್ದ ಪ್ರಧಾನ್ ಅವರು, ಎನ್ಇಪಿ ರದ್ದು (NEP Scrap) ಪಡಿಸುವ ಮಾತುಗಳನ್ನು ಒಪ್ಪಲಾಗುವುದಿಲ್ಲ. ಡಿ ಕೆ ಶಿವಕುಮಾರ್ ಮಾತುಗಳು ರಾಜಕಾರಣದಿಂದ ಕೂಡಿವೆ. ಅವರ ನೀತಿ ಭವಿಷ್ಯದೆಡೆಗೆ ನೋಡುವುದಿಲ್ಲ ಎಂದು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

4. ಎಸ್‌ಟಿ ಸೋಮಶೇಖರ್‌ಗೆ ಹೈಕಮಾಂಡ್‌ ಬುಲಾವ್‌; ಬಿ.ಎಲ್‌ ಸಂತೋಷ್‌ ಮಾತ್ರ ಅಲ್ಲ ಶಾ ಜತೆಗೂ ಚರ್ಚೆ
ಬೆಂಗಳೂರು: ರಾಜ್ಯದಲ್ಲಿ ಭಾರಿ ಚರ್ಚೆಯಲ್ಲಿರುವ ಆಪರೇಷನ್‌ ಹಸ್ತ (Operation Hasta) ಕಾರ್ಯಾಚರಣೆಯನ್ನು ಇದೇ ಮೊದಲ ಬಾರಿ ಬಿಜೆಪಿ ಹೈಕಮಾಂಡ್‌ (BJP High Command) ಗಂಭೀರವಾಗಿ ಪರಿಗಣಿಸಿದೆ. ಅದರಲ್ಲೂ ಮುಖ್ಯವಾಗಿ ಬಹುತೇಕ ಒಂದು ಕಾಲನ್ನು ಬಿಜೆಪಿಯಿಂದ ಹೊರಗಿಟ್ಟಿರುವ ಮಾಜಿ ಸಚಿವ ಎಸ್‌.ಟಿ. ಸೋಮಶೇಖರ್‌ (ST Somashekhar) ಅವರ ವಿಚಾರದಲ್ಲಿ ವಿಶೇಷ ಆಸಕ್ತಿಯನ್ನು ತಳೆದಿದೆ. ಸ್ವತಃ ಹೈಕಮಾಂಡ್‌ ಅವರನ್ನು ಮಾತುಕತೆಗೆ ಆಹ್ವಾನಿಸಿದೆ. ಹೀಗಾಗಿ ಸೋಮಶೇಖರ್‌ ಆ. 25ರಂದು ದಿಲ್ಲಿಗೆ ಹೋಗಬೇಕು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

5. ಇನ್ನು 100 ದಿನಗಳಲ್ಲಿ ಎತ್ತಿನಹೊಳೆ ಯೋಜನೆಯಲ್ಲಿ ನೀರು ಹರಿಯೋದು ಗ್ಯಾರಂಟಿ ಎಂದ ಡಿಕೆಶಿ
ಸಕಲೇಶಪುರ: “ಮುಂದಿನ 100 ದಿನಗಳ ಒಳಗಾಗಿ ಎತ್ತಿನಹೊಳೆ ಮೊದಲ ಹಂತದ ಯೋಜನೆಯಲ್ಲಿ (Yethinahole project) ನೀರು ಪಂಪ್ ಮಾಡಿ ಹರಿಸಲಾಗುವುದು” ಎಂದು ಡಿಸಿಎಂ ಹಾಗೂ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದ್ದಾರೆ. ಎತ್ತಿನಹೊಳೆ ಯೋಜನೆ ಸಂಬಂಧ ಹಾಸನ ಜಿಲ್ಲೆಯ ಸಕಲೇಶಪುರದ ಹೆಬ್ಬನಹಳ್ಳಿ ಪವರ್ ಸಬ್ ಸ್ಟೇಷನ್ ಮತ್ತು ದೊಡ್ಡನಾಗರ ಪಂಪ್ ಹೌಸ್‌ಗೆ ಮಂಗಳವಾರ ಭೇಟಿ ನೀಡಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಶಿವಕುಮಾರ್ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

6. Generative AI: ಜನರೇಟಿವ್ ಕೃತಕ ಬುದ್ಧಿಮತ್ತೆಯಿಂದ ಉದ್ಯೋಗ ನಷ್ಟವಾಗಲ್ಲ, ಹೆಚ್ಚಾಗುತ್ತವೆ!

7.Bharat NCAP: ಭಾರತದಲ್ಲೇ ಇನ್ನು ಕಾರು ಸುರಕ್ಷತೆ ಟೆಸ್ಟ್;‌ ಏನಿದು ಭಾರತ್‌ ಎನ್‌ಸಿಎಪಿ? ಜನರಿಗೆ ಹೇಗೆ ಅನುಕೂಲ?

8. Chess Tournament : ಪ್ರಜ್ಞಾನಂದ ಸಾಧನೆಗೆ ತಾಯಿ ಪ್ರೀತಿಯೇ ಶಕ್ತಿ ಎಂದ ರಷ್ಯನ್ ಗ್ರ್ಯಾಂಡ್​ ಮಾಸ್ಟರ್​​

9. Dutee Chand: ಡೋಪಿಂಗ್‌ ಟೆಸ್ಟ್‌ನಲ್ಲಿ ಸೋತ ದ್ಯುತಿ ಚಂದ್‌ ಕ್ಯಾನ್ಸರ್‌ ವಿರುದ್ಧ ಗೆದ್ದರು; ಇಲ್ಲಿದೆ ಕರುಣಾಜನಕ ಕತೆ

10. Love affair : ಡಿವೋರ್ಸ್‌ ಕೊಡೋವರ್ಗೂ ಕಾಪಾಡಿ ಪ್ಲೀಸ್!‌ ಒಲ್ಲದ ಗಂಡನ ಬಿಟ್ಟು, ನಲ್ಲನ ಜತೆ ಓಡಿ ಬಂದಳು
ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ:

Exit mobile version