1. ರಾಜ್ಯಕ್ಕೆ ಸುಪ್ರೀಂ ಕೋರ್ಟಲ್ಲೂ ಶಾಕ್; ಕಾವೇರಿ ಪ್ರಾಧಿಕಾರ ಆದೇಶವೇ ಸರಿ ಎಂದ ಪೀಠ, ನ್ಯಾಯ ಎಲ್ಲಿದೆ?
ಕಾವೇರಿ ಜಲ ವಿವಾದಕ್ಕೆ (Cauvery dispute) ಸಂಬಂಧಿಸಿ ರಾಜ್ಯಕ್ಕೆ ಸುಪ್ರೀಂಕೋರ್ಟ್ (Supreme Court) ಕೂಡಾ ನ್ಯಾಯ ಕೊಡಲಿಲ್ಲ. ತಮಿಳುನಾಡಿಗೆ ಪ್ರತಿ ದಿನ 5000 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕು ಎಂಬ ಕಾವೇರಿ ನೀರು ನಿಯಂತ್ರಣ ಮಂಡಳಿ ಆದೇಶ ಮತ್ತು ಅದನ್ನು ಎತ್ತಿ ಹಿಡಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಗುರುವಾರ ನಡೆದ ಮಹತ್ವದ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಜತೆಗೆ ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿ ದಿನವೂ 5000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಆದೇಶ ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: ಕಾವೇರಿ ಕೊಳ್ಳದಲ್ಲಿ ಭುಗಿಲೆದ್ದ ಆಕ್ರೋಶ; ಕೆಆರ್‌ಎಸ್‌ಗೆ ನುಗ್ಗಲು ಯತ್ನಿಸಿದ ರೈತರು ವಶಕ್ಕೆ, ಸೆ.23ಕ್ಕೆ ಮಂಡ್ಯ ಬಂದ್
ಹೆಜ್ಜೆ ಹೆಜ್ಜೆಗೂ ತಪ್ಪು, ನಿರ್ಲಕ್ಷ್ಯ, ಸ್ವಾರ್ಥ ರಾಜಕಾರಣ; ಕಾವೇರಿ ಹಿನ್ನಡೆಗೆ ಕಾರಣ ಪಟ್ಟಿ ಮಾಡಿದ HDK
2. ಕೆನಡಾದಲ್ಲಿ ಮತ್ತೊಬ್ಬ ಭಾರತ ವಿರೋಧಿ ಖಲಿಸ್ತಾನಿ ಉಗ್ರನ ಹತ್ಯೆ
ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಕೈವಾಡ ಇದೆ ಎಂದು ಕೆನಡಾ ಸರ್ಕಾರ ಆರೋಪಿಸಿದ ಬೆನ್ನಲ್ಲೇ ಕೆನಡಾದಲ್ಲಿ ಮತ್ತೊಬ್ಬ ಭಾರತ ವಿರೋಧಿ ಖಲಿಸ್ತಾನಿ ಉಗ್ರನನ್ನು (Khalistani Terrorist) ಹತ್ಯೆಯಾಗಿದೆ. ಪಂಜಾಬ್ ಮೂಲದ ಗ್ಯಾಂಗ್‌ಸ್ಟರ್ ಸುಖ್‌ದೂಲ್ ಸಿಂಗ್‌ನನ್ನು (Sukha Duneke) (ಸುಖಾ ದುನೆಕೆ ಎಂದೇ ಖ್ಯಾತಿ) ಬುಧವಾರ (ಸೆಪ್ಟೆಂಬರ್ 20) ರಾತ್ರಿ ಹತ್ಯೆ ಮಾಡಿರುವುದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : ಕೆನಡಾಗೆ ಭಾರತ ಮತ್ತೊಂದು ಗುದ್ದು; ವೀಸಾ ಸೇವೆಯೇ ರದ್ದು
ಕೆನಡಾದ ಜಸ್ಟಿನ್ ಟ್ರುಡೋ ಸರ್ಕಾರ ಖಲಿಸ್ತಾನಿಗಳಿಗೆ ಬೆಂಬಲ ನೀಡುತ್ತಿರುವುದೇಕೆ? ಇಲ್ಲಿದೆ ಇನ್‌ಸೈಡ್ ಸ್ಟೋರಿ!
3.ಮೈತ್ರಿ ಮಾತುಕತೆಗೆ ವೇದಿಕೆ ರೆಡಿ; ಆ ಆರು ಕ್ಷೇತ್ರ ಕೇಳಲು ಮುಂದಾದ ಜೆಡಿಎಸ್; ಬಿಜೆಪಿ ಒಪ್ಪುತ್ತಾ?
ಬಹುಸಮಯದಿಂದ ಸುದ್ದಿ ಮಾಡುತ್ತಿದ್ದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ (BJP-JDS Alliance) ಈಗ ನನಸಾಗುವ ಕಾಲ ಸನ್ನಿಹಿತವಾಗಿದೆ. 2024ರ ಲೋಕಸಭಾ ಚುನಾವಣೆಯನ್ನು (Parliament Elections 2024) ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್‌ನ್ನು ಮಣಿಸುವ ಉದ್ದೇಶದಿಂದ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದು ಖಚಿತ ಎಂಬ ಬಗ್ಗೆ ಹಲವು ಸಮಯದಿಂದ ಕಾಣುತ್ತಿದ್ದ ಸಂಜ್ಞೆಗಳು ಈಗ ನಿಜವಾಗಿದೆ. ಮೈತ್ರಿ ಮತ್ತು ಸೀಟು ಹಂಚಿಕೆಯ ಮಹತ್ವದ ಮಾತುಕತೆಗಾಗಿ ವೇದಿಕೆ ಅಣಿಯಾಗಿದ್ದು, ಬಿಜೆಪಿ ಕಡೆಯಿಂದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಮತ್ತು ಹಿರಿಯ ನಾಯಕ ಅಮಿತ್ ಶಾ (Amit Shah), ಜೆಡಿಎಸ್ ಕಡೆಯಿಂದ ಎಚ್.ಡಿ ದೇವೇಗೌಡರು (HD Devegowda) ಮತ್ತು ಎಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಮಾತುಕತೆ ನಡೆಸಲಿದ್ದಾರೆ. ಗುರುವಾರ ರಾತ್ರಿಯೇ ಈ ಮಾತುಕತೆ ನಡೆದು ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿ ನಡೆಯುವ ಸಾಧ್ಯತೆ ಇದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. ರಾಜ್ಯಸಭೆಯಲ್ಲಿ ‘ಮೀಸಲು’ ಭಾರೀ ಚರ್ಚೆ; ಖರ್ಗೆ-ನಡ್ಡಾ ಮಧ್ಯೆ ಜಟಾಪಟಿ
ಲೋಕಸಭೆಯಲ್ಲಿ (Lok Sabha) ಭಾರೀ ಮತಗಳೊಂದಿಗೆ ಅಂಗೀಕಾವಾದ, ‘ನಾರಿ ಶಕ್ತಿ ವಂದನ್ ಅಧಿನಿಯಮ್’ ಎಂದು ಕರೆಯಲಾಗುವ ಮಹಿಳಾ ಮೀಸಲು ವಿಧೇಯಕವನ್ನು (Women’s Reservation Bill) ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು ಗುರುವಾರ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ (Rajya Sabha) ಮಂಡಿಸಿದರು. ರಾಜ್ಯಸಭೆಯಲ್ಲೂ ಈ ವಿಧೇಯಕದ ಕುರಿತು ಕಾಂಗ್ರೆಸ್ ಸಂಸದ, ಪ್ರತಿ ಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikarjun Kharge), ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ (JP Nadda) ಸೇರಿದಂತೆ ಪ್ರಮುಖ ನಾಯಕರು ಮಾತನಾಡಿದ್ದಾರೆ. ಈ ಮಧ್ಯೆ, ಖರ್ಗೆ ಮತ್ತು ನಡ್ಡಾ ಮಧ್ಯೆ ವಾಗ್ವಾದ ಕೂಡ ನಡೆಯಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. ಚಂದ್ರನ ಮೇಲೆ ಬೆಳಗಾಯಿತು; ನಿದ್ರೆಯಿಂದ ಏಳುವುದೇ ಲ್ಯಾಂಡರ್, ರೋವರ್?
ಚಂದ್ರನ ಮೇಲೆ ರಾತ್ರಿ (moon night) ಮುಗಿದು (ಭೂಮಿಯ ಹದಿನಾಲ್ಕು ದಿನ, ಚಂದ್ರನ ಒಂದು ದಿನಕ್ಕೆ ಸಮ) ಬುಧವಾರ ಮುಂಜಾನೆಯಾಗಿದೆ. ಸೂರ್ಯನ ಬೆಳಕಿನ ಅನುಪಸ್ಥಿತಿಯಲ್ಲಿ ಕಾರ್ಯಾಚರಣೆ ನಿಲ್ಲಿಸಿದ್ದ ಇಸ್ರೋದ (ISRO) ಚಂದ್ರಯಾನ- 3 (Chandrayaan 3) ಮಿಷನ್‌ನ ಲ್ಯಾಂಡರ್ ಮತ್ತು ರೋವರ್ ಮಾಡ್ಯೂಲ್‌ಗಳು ಮತ್ತೆ ಕಾರ್ಯಾರಂಭಿಸಲಿವೆಯೇ ಎಂಬ ಕುತೂಹಲ ಎದುರಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. ಕರ್ನಾಟಕ ಮುಕ್ತ ವಿವಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಒಂದು ದಿನ ಮೊದಲೇ ಮಾರಾಟ!
7. ಆಸ್ಟ್ರೇಲಿಯಾ ವಿರುದ್ಧ ಸರಣಿ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲವು ಸಂಗತಿಗಳು ಇಲ್ಲಿವೆ
8. ಕರ್ನಾಟಕದ ‘ಅಕ್ರಮ’ ಅದಿರು ಗಣಿಗಳಿಗೆ ಹೊಸ ಲೀಸ್! ಒಪ್ಪಿಗೆ ನೀಡಿದ ಕೇಂದ್ರ ಅರಣ್ಯ ಸಲಹಾ ಸಮಿತಿ
9. ಭಾರತೀಯ ವೈದ್ಯಕೀಯ ಪದವೀಧರರು ಇನ್ನು ಅಮೆರಿಕ, ಆಸ್ಟ್ರೇಲಿಯದಲ್ಲೂ ಪ್ರಾಕ್ಟೀಸ್ ಮಾಡಬಹುದು!
10. ವ್ಹೀಲ್ ಇರುವ ಬ್ಯಾಗ್ ತಲೆಮೇಲೆ ಹೊತ್ತು ತಿರುಗಿದ ರಾಹುಲ್ ಗಾಂಧಿ; ಭಾರಿ ಟ್ರೋಲ್’
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.