Site icon Vistara News

VIstara Top 10 News : ಮಹಿಳೆಯರಿಗೆ ಮೋದಿಯ ಕೊಡುಗೆ, ಸಿಎಂ ಸಿದ್ದರಾಮಯ್ಯ ನ್ಯಾಯದ ಅಭಯ ಇತ್ಯಾದಿ ಪ್ರಮುಖ ಸುದ್ದಿಗಳು

Vistara top 10

1. Independence Day 2023: ವಿಶ್ವಕರ್ಮ ಯೋಜನೆ, ಮಹಿಳಾ ಸ್ವಸಹಾಯ ಸಂಘ ಘೋಷಿಸಿದ ಮೋದಿ; ಏನಿವು? ಯಾರಿಗೆ ಉಪಯೋಗ?
ನವದೆಹಲಿ: ದೇಶದ 77ನೇ ಸ್ವಾತಂತ್ರ್ಯೋತ್ಸವದ (Independence Day 2023) ಹಿನ್ನೆಲೆಯಲ್ಲಿ ಕೆಂಪು ಕೋಟೆಯಲ್ಲಿ ನಿಂತು ಭಾಷಣ ಮಾಡುವ ವೇಳೆ ನರೇಂದ್ರ ಮೋದಿ ಅವರು ದೇಶದ ಏಳಿಗೆಯನ್ನು ಬಣ್ಣಿಸಿದರು. ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಜತೆಗೆ ದೇಶದ ಏಳಿಗೆಗೆ ಕಾರಣರಾದ, ಕಾರಣರಾಗುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದರು. ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ಬಡವರ ಏಳಿಗೆಗಾಗಿ ನೂತನ ವಿಶ್ವಕರ್ಮ ಯೋಜನೆ ಘೋಷಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Independence Day 2023:‌ ದೆಹಲಿಯಲ್ಲಿ ಸ್ವಾತಂತ್ರ್ಯ ಸಂಭ್ರಮ ಹೇಗಿತ್ತು? ಇಲ್ಲಿವೆ ಮನಮೋಹಕ ಫೋಟೊಗಳು

2. PM Speech: ಪರಿವಾರವಾದದ ವಿರುದ್ಧ ಮೋದಿ ಗುಡುಗು; ಕೆಂಪು ಕೋಟೆ ಮೇಲೆ ನಿಂತು ಪ್ರತಿಪಕ್ಷಗಳಿಗೆ ವಾಗ್ಬಾಣ
ನವದೆಹಲಿ: ಕೆಂಪು ಕೋಟೆ ಮೇಲೆ ನಿಂತು ಒಂದೂವರೆ ಗಂಟೆ ಸ್ವಾತಂತ್ರ್ಯೋತ್ಸವದ (Independence Day 2023) ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ (PM Speech), ಅಭಿವೃದ್ಧಿ ವಿಷಯಗಳು, ಭಾರತದ ದೂರದೃಷ್ಟಿ, 2014ರಿಂದ ನೀಡಿದ ಆಡಳಿತ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು. ಇನ್ನು ಭಾಷಣದ ಮಧ್ಯೆ ಪರಿವಾರವಾದದ ವಿರುದ್ಧ ಗುಡುಗಿದ ಅವರು ಪ್ರತಿಪಕ್ಷಗಳಿಗೆ ಸಂದೇಶವನ್ನೂ ರವಾನಿಸಿದರು. ಅದರಲ್ಲೂ ಪರಿವಾರವಾದದ ಹೆಸರು ಉಲ್ಲೇಖಿಸಿ ಕಾಂಗ್ರೆಸ್‌ಗೆ ಪರೋಕ್ಷವಾಗಿ ಚಾಟಿ ಬೀಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.
ಈ ಸುದ್ದಿಯನ್ನೂ ಓದಿ : Mallikarjun Kharge: ಕೆಂಪುಕೋಟೆಯಲ್ಲಿ ಕುರ್ಚಿ ಮೀಸಲಿಟ್ಟರೂ ಖರ್ಗೆ ಪಾಲ್ಗೊಳ್ಳದಿರಲು ಕಾರಣವೇನು? ವಿವಾದ ಏಕೆ?

3. Independence day 2023 : ಸರ್ವರಿಗೂ ನ್ಯಾಯ, ರಾಜ್ಯದ ಅಭ್ಯುದಯ; ಸಿಎಂ ಸಿದ್ದರಾಮಯ್ಯ ಭಾಷಣದ TOP 14 ವಿಶೇಷ
ಬೆಂಗಳೂರು: ಬೆಂಗಳೂರಿನ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ (Independence day 2023) ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳಿಂದ ಆಗಿರುವ ಕ್ರಾಂತಿಯನ್ನು ಬಣ್ಣಿಸಿದರು. ಕಳೆದ ಎರಡು ತಿಂಗಳಲ್ಲಿ ರಾಜ್ಯದಲ್ಲಿ ಹಲವು ಕಂಪನಿಗಳು ನೆಲೆಯೂರಲು ಮುಂದಾಗಿರುವ ಸಂಗತಿ ತೆರೆದಿಟ್ಟರು. ಅಭಿವೃದ್ಧಿಯನ್ನು ರಾಜ್ಯದ ಎಲ್ಲ ಭಾಗಗಳಿಗೆ ವಿಸ್ತರಿಸುವ ಕ್ರಮಗಳನ್ನು ಚರ್ಚಿಸಿದರು. ಹೀಗೆ ಸುಮಾರು 14 ವಿಚಾರಗಳನ್ನು ಪ್ರಮುಖವಾಗಿ ಉಲ್ಲೇಖಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.

4.Karnataka Politics : ಬಿಜೆಪಿ ವರ್ಸಸ್‌ ಕಾಂಗ್ರೆಸ್‌; ಕರ್ನಾಟಕದಲ್ಲಿ ಆಪರೇಷನ್ ಪಾಲಿಟಿಕ್ಸ್!
ಬೆಂಗಳೂರು: ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆ (Assembly elections) ನಡೆದು 135 ಸ್ಥಾನಗಳೊಂದಿಗೆ ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದೆ. ಆದರೆ, ಆ ನಂತರದ ರಾಜಕೀಯ ಬೆಳವಣಿಗೆಗಳು (Karnataka Politics) ಸಾಕಷ್ಟು ಕುತೂಹಲವನ್ನು ಉಂಟು ಮಾಡಿದೆ. ಇಷ್ಟಿದ್ದರೂ ಕಾಂಗ್ರೆಸ್‌ ನಿರ್ಭೀತಿಯಿಂದ ಆಡಳಿತ ನಡೆಸುತ್ತಿಲ್ಲ ಎಂಬುದು ಗೋಚರಿಸುತ್ತಿದೆ. ಪಕ್ಷದ ಆಂತರಿಕ ಭಿನ್ನಮತ, ಶಾಸಕರ ಅಸಮಾಧಾನ ಸೇರಿದಂತೆ ಪ್ರತಿಪಕ್ಷಗಳ ನಡೆ ಆಡಳಿತ ಪಕ್ಷದೊಳಗೆ ತಲ್ಲಣವನ್ನುಂಟು ಮಾಡುವಂತೆ ಮಾಡಿದೆ. ಈ ಕಾರಣಕ್ಕೆ ರಾಜ್ಯದಲ್ಲಿ “ಆಪರೇಷನ್ ವರ್ಸಸ್ ಆಪರೇಷನ್” ಪಾಲಿಟಿಕ್ಸ್ (Operation Politics) ಶುರುವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.

5. HD Kumaraswamy : 2 ದಿನ ಕಾಯಿರಿ, ಬಿಬಿಎಂಪಿ ಕರ್ಮಕಾಂಡ ಮುಂದಿಡುತ್ತೇನೆ: ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರು: ಇನ್ನು ಎರಡು ದಿನ ಕಾಯಿರಿ, ಬಿಬಿಎಂಪಿಯಲ್ಲಿ (BBMP) ಏನು ನಡೆಯುತ್ತಿದೆ ಎಂಬುದನ್ನು ನಿಮ್ಮ ಮುಂದೆ ಇಡುತ್ತೇನೆ. ಆದರೆ, ಯಾವುದೇ ದಾಖಲೆ ಬಿಡುಗಡೆ ಮಾಡುವುದಿಲ್ಲ. ನಾನು ಪೆನ್‌ಡ್ರೈವ್ ಬಿಡುಗಡೆ ಮಾಡಿದರೆ ನಕಲಿ ಅಂತಾರೆ. ಸಿಒಡಿಯನ್ನು ಜತೆಯಲ್ಲಿಯೇ ಇಟ್ಟುಕೊಂಡಿದ್ದಾರೆ. ದಾಖಲೆ ಬಿಡುಗಡೆ ಮಾಡಿದರೆ ಸಿಒಡಿ ತನಿಖೆ (COD investigation) ಅಂತಾರೆ. ಅಧಿಕಾರಿಗಳು ಇವರು ಹೇಳಿದ ಹಾಗೆ ವರದಿ ಕೊಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

6. SS Mallikarjun: ಜಾತಿ ನಿಂದನೆ; ಉಪೇಂದ್ರ ಆಯ್ತು, ಈಗ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ವಿರುದ್ಧ ದೂರು

7. Weather Report : ಮುನಿಸಿಕೊಂಡ ವರುಣ; ನಾಳೆ ಬೆರಳೆಣಿಕೆ ಜಿಲ್ಲೆಯಲ್ಲಿ ಮಾತ್ರ ಮಳೆ

8. lalbagh flower show 2023 : ಲಾಲ್‌ಬಾಗ್‌ ಕಾರ್ಮಿಕನಿಗೆ ತಪ್ಪಾಯ್ತಣ್ಣಾ ಎಂದ ರಚಿತಾ ರಾಮ್‌

9. Ponniyin Selvan | ಸಲ್ಮಾನ್‌ ಖಾನ್‌ ಸಿನಿಮಾ ರಿಲೀಸ್‌ ಆದ ಸಮಯದಲ್ಲೇ ʻಪೊನ್ನಿಯನ್‌ ಸೆಲ್ವನ್‌-2ʼ ರಿಲೀಸ್‌

10. Viral Video : ಸೈಕಲ್‌ ಓಡಿಸುತ್ತಲೇ ಐ ಲವ್‌ ಮೈ ಇಂಡಿಯಾ ಹಾಡಿಗೆ ನೃತ್ಯ ಮಾಡಿದ ಯುವತಿ!

ಇನ್ನಷ್ಟು ವೈರಲ್​ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Exit mobile version