ಬೆಂಗಳೂರು: ರಾಜಧಾನಿಯಲ್ಲಿ ದೇಶದ ಅತ್ಯಂತ ಎತ್ತರದ ವೀಕ್ಷಣಾ ಗೋಪುರ (Highest Sky Deck) ತಲೆ ಎತ್ತಲಿದೆ. ಸದ್ಯ ಇದು ಚಿಂತನೆಯ ಹಂತದಲ್ಲಿದೆ. ಶಾಂಘಾಯ್‌ನ ವೀಕ್ಷಣಾ ಗೋಪುರಗಳು ಇದಕ್ಕೆ ಮಾದರಿಯಾಗಿದೆ.
ಉನ್ನತ ಸ್ಕೈ ಡೆಸ್ಕ್ ಯೋಜನೆಯನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ಅವರು ಪರಿಶೀಲಿಸಿದ್ದಾರೆ. ವೀಕ್ಷಣಾ ಗೋಪುರ (observatory) ನಿರ್ಮಾಣಕ್ಕೆ ಜಾಗ ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಇದರ ಆರ್ಥಿಕ ಕಾರ್ಯಸಾಧ್ಯತೆಯನ್ನು ನಿರ್ಣಯಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಆಸ್ಟ್ರೀಯಾ ಮೂಲದ COOP HIMMELB(L)AU ಸಂಸ್ಥೆಯು ವರ್ಲ್ಡ್ ಡಿಸೈನ್ ಆರ್ಗನೈಸೇಶನ್ ಸಹಕಾರದೊಂದಿಗೆ ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ಕೈ ಡೆಸ್ಕ್ ಯೋಜನೆಯನ್ನು ಪರಿಶೀಲಿಸಿದೆ. ಇದು ನಿರ್ಮಾಣವಾದ ನಂತರ ದೇಶದಲ್ಲೇ ಅತಿ ಎತ್ತರದ ವೀಕ್ಷಣಾ ಗೋಪುರ ಎನ್ನುವ ಕೀರ್ತಿಗೆ ಪಾತ್ರವಾಗಲಿದೆ.
— DK Shivakumar (@DKShivakumar) October 17, 2023
ಯೋಜನೆಯ ಅನುಷ್ಠಾನಕ್ಕೆ ಸೂಕ್ತವಾದ 8-10 ಎಕರೆ… pic.twitter.com/s153kRzlqo
ಈ ಬಗ್ಗೆ ಡಿಸಿಎಂ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆಸ್ಟ್ರಿಯಾ ಮೂಲದ COOP HIMMELB(L)AU ಸಂಸ್ಥೆ ಹಾಗೂ ವರ್ಲ್ಡ್ ಡಿಸೈನ್ ಆರ್ಗನೈಸೇಶನ್ ಸಹಕಾರದೊಂದಿಗೆ ವೀಕ್ಷಣಾ ಗೋಪುರ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಇದು ನಿರ್ಮಾಣವಾದರೆ ದೇಶದಲ್ಲೇ ಅತಿ ಎತ್ತರದ ವೀಕ್ಷಣಾ ಗೋಪುರ ಎನ್ನುವ ಕೀರ್ತಿಗೆ ಪಾತ್ರವಾಗಲಿದೆ. ಯೋಜನೆಯ ಅನುಷ್ಠಾನಕ್ಕೆ 8-10 ಎಕರೆ ಭೂಮಿ ಅಗತ್ಯವಿದೆ ಎಂದು ಅವರು ಎಕ್ಸ್ (ಟ್ವಿಟರ್) ಪೋಸ್ಟ್ ಮಾಡಿದ್ದಾರೆ.
ಸದ್ಯ ಜಗತ್ತಿನಲ್ಲಿ ದುಬೈನ ಬುರ್ಜ್ ಖಲೀಫಾ (828 ಮೀಟರ್), ಶಾಂಘಾಯ್‌ನ ಶಾಂಘಾಯ್ ಟವರ್ (632 ಮೀಟರ್), ಚೀನಾದ ಶೆಂಜೆನ್‌ನ ಪಿಂಗ್ ಆನ್ ಫೈನಾನ್ಸ್ ಸೆಂಟರ್ (599 ಮೀಟರ್), ಚೀನಾದ ಗುಂವಾಂಗ್ಶುವಿನ ಕ್ಯಾಂಟನ್ ಟವರ್ (597 ಮೀಟರ್), ದಕ್ಷಿಣ ಕೊರಿಯಾದ ಲಾಟ್ಟೆ ವರ್ಲ್ಡ್ ಟವರ್ (555 ಮೀಟರ್)ಗಳು ವಿಶ್ವದ ಎತ್ತರದ ವೀಕ್ಷಣಾ ಗೋಪುರಗಳಾಗಿವೆ.
ಭಾರತದಲ್ಲಿ ರಾಮೇಶ್ವರಂ ಟಿವಿ ಟವರ್ (393 ಮೀಟರ್), ಮುಂಬಯಿ ಟಿವಿ ಟವರ್ (300 ಮೀಟರ್) ಪೀತಾಂಪುರ ಟಿವಿ ಟವರ್ (235 ಮೀಟರ್) ದೊಡ್ಡ ಗೋಪುರಗಳಾಗಿವೆ. ಆದರೆ ಇವುಗಳಲ್ಲಿ ಸಾರ್ವಜನಿಕರಿಗೆ ವೀಕ್ಷಣೆ ಲಭ್ಯವಿಲ್ಲ. ಗುಜರಾತ್‌ನ ಸರ್ದಾರ್ ಸರೋವರದ ಏಕತಾ ಪ್ರತಿಮೆಯ ಎತ್ತರ 182 ಮೀಟರ್‌ಗಳಿದ್ದು, ಇದರ ಮೇಲಿನಿಂದ ವೀಕ್ಷಣೆ ಲಭ್ಯವಿದೆ. ಬೆಂಗಳೂರಿನ ಗೋಪುರ 300 ಮೀಟರ್‌ಗಿಂತಲೂ ಎತ್ತರವಾಗಿರಲಿದೆಯೇ ಎಂಬುದನ್ನು ನೋಡಬೇಕಿದೆ.
ಇದನ್ನೂ ಓದಿ: Karwar Tunnel Route : ಕಾರವಾರ ರಾಷ್ಟ್ರೀಯ ಹೆದ್ದಾರಿ 66ರ ಸುರಂಗ ಮಾರ್ಗ ಕೊನೆಗೂ ಸಂಚಾರ ಮುಕ್ತ!