Site icon Vistara News

Hijab Verdict | ಇದು ದೇಶದ ವಿಚಾರ, ತೀರ್ಪಿನ ಲಿಖಿತ ಪ್ರತಿ ನೋಡಿ ಉತ್ತರಿಸುವೆ: ಸಿಎಂ ಬೊಮ್ಮಾಯಿ

ವಿಜಯನಗರ: ಹಿಜಾಬ್‌ ನಿಷೇಧ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಇಬ್ಬರು ನ್ಯಾಯಮೂರ್ತಿಗಳಿಂದ ಭಿನ್ನ ತೀರ್ಪು (Hijab Verdict) ಬಂದಿದೆ. ಇದು ನ್ಯಾಯಾಂಗ ವಿಚಾರವಾಗಿದೆ. ಹೀಗಾಗಿ ನಾನು ತೀರ್ಪು ನೋಡದೇ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ತೀರ್ಪಿನ ಲಿಖಿತ ಪ್ರತಿ ನೋಡಿ ಮಾತನಾಡುವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು.

ವಿಜಯನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ದೇಶದ ವಿಚಾರವಾಗಿದೆ. ವಿದ್ಯಾರ್ಥಿಗಳ ಬೇಡಿಕೆ, ನಮ್ಮ ವಿಚಾರಗಳು ಸೇರಿದಂತೆ ಹತ್ತು ಹಲವು ವಿಚಾರಗಳು ಹಿಜಾಬ್‌ ಪ್ರಕರಣದಲ್ಲಿ ಅಡಗಿದೆ. ಇಬ್ಬರು ನ್ಯಾಯಮೂರ್ತಿಗಳ ತೀರ್ಪಿನ ಪ್ರತಿ ನನ್ನ ಕೈಸೇರಿಲ್ಲ. ಅದನ್ನು ಪರಿಶೀಲನೆ ನಡೆಸಿದ ಬಳಿಕವೇ ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದರು.

ಆರ್‌ಎಸ್‌ಎಸ್‌ನವರಿಗೆ ಹಲ್ಲೆ ಮಾಡಿದವರ ಬಗ್ಗು ಬಡಿಯುತ್ತೇವೆ
ಹಾವೇರಿಯಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರ ಮೇಲೆ ಮುಸ್ಲಿಂ ಯುವಕರು ಹಲ್ಲೆ ಮಾಡಿರುವುದು ಖಂಡನೀಯ. ಪಥ ಸಂಚಲನದ ರೂಟ್‌ ಮ್ಯಾಪ್‌ ನೋಡಲು ಹೋದವರ ಮೇಲೆ ಹಲ್ಲೆ ಮಾಡಿದ್ದಾರೆ. ಶಾಂತಿ-ಸುವ್ಯವಸ್ಥೆಯನ್ನು ಕದಡುವ ಕೆಲಸವನ್ನು ಈ ಮೂಲಕ ಮಾಡಲಾಗಿದೆ. ಈಗಾಗಲೇ 20ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ. ತಪ್ಪಿತಸ್ಥರನ್ನು ಬಗ್ಗು ಬಡಿಯುವ ಕೆಲಸ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

Exit mobile version