ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ (Love jihad) ಪ್ರಕರಣಗಳನ್ನು ನಿಗ್ರಹಿಸಲು ಕಠಿಣ ಲವ್ ಜಿಹಾದ್ ವಿರೋಧಿ ಕಾಯಿದೆ ಜಾರಿಗೆ ಆಗ್ರಹಿಸಿ ದೊಡ್ಡ ಮಟ್ಟದ ಆಂದೋಲನ ನಡೆಸಲು ಹಿಂದೂ ಜನಜಾಗೃತಿ ಸಮಿತಿ ಮುಂದಾಗಿದೆ.
ಎಲ್ಲ ಹಿಂದು ಸಂಘಟನೆಗಳ ಸಹಕಾರದೊಂದಿಗೆ ಡಿಸೆಂಬರ್ 11 ರಿಂದ ಡಿಸೆಂಬರ್ 17ರವರೆಗೆ ರಾಜ್ಯವ್ಯಾಪಿ ಆಂದೋಲನ ನಡೆಸಲಾಗುವುದು ಎಂದು ಹಿಂದೂ ಜನಜಾಗೃತಿ ಸಮಿತಿಯ ಮೋಹನ ಗೌಡ ಹೇಳಿದ್ದಾರೆ. ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲೇ ಈ ಕಾಯಿದೆ ಜಾರಿಗೆ ತರಲು ಒತ್ತಡ ಹೇರುವ ನಿಟ್ಟಿನಲ್ಲಿ ಈ ಹೋರಾಟ ನಡೆಯಲಿದೆ.
ಲವ್ ಜಿಹಾದ್ ವಿರುದ್ಧ ಹಿಂದು ಸಮಾಜದಲ್ಲಿ ಧರ್ಮ ಜಾಗೃತಿ ಮೂಡಿಸಲು ನೂರಕ್ಕೂ ಅಧಿಕ ಸ್ಥಳಗಳಲ್ಲಿ ಧರ್ಮ ಜಾಗೃತಿ ಮಾಡಲಾಗುವುದು, ಅದಕ್ಕಾಗಿ ರಾಜ್ಯದ ಎಲ್ಲ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ, ಕಾರ್ಯಕ್ರಮ ನಡೆಸುತ್ತೇವೆ ಎಂದು ಹಿಂದು ಮುಖಂಡ ಮೋಹನ್ ಗೌಡ ಹೇಳಿಕೆ ನೀಡಿದ್ದಾರೆ.
ಹಿಂದು ಹುಡುಗಿಯರನ್ನು ಮರುಳುಗೊಳಿಸಿ ಮದುವೆಯಾಗುವ ನೆಪದಲ್ಲಿ ಮತಾಂತರ ಮಾಡಿಕೊಂಡು ಬಳಿಕ ನಡು ಬೀದಿಯಲ್ಲಿ ಕೈಬಿಡುವ ಕುತಂತ್ರಗಳು ನಡೆಯುತ್ತಿವೆ. ಇದರ ಬಗ್ಗೆ ಎಚ್ಚರ ವಹಿಸಬೇಕಾದ ಅನಿವಾರ್ಯತೆ ಇದೆ ಎಂದು ಮೋಹನ ಗೌಡ ಹೇಳಿದ್ದಾರೆ.
ಈ ನಡುವೆ, ಈಗಾಗಲೇ ಹಲವು ಕಡೆ ಲವ್ ಜಿಹಾದ್ ಬಗ್ಗೆ ಆಗಲೇ ಜಾಗೃತಿ ಆರಂಭವಾಗಿದ್ದು ಪುತ್ತೂರಿನಲ್ಲಿ ಬಿಜೆಪಿ ನಾಯಕ ಎಂ.ಕೆ. ಪ್ರಸಾದ್ ಅವರು ಹೋರ್ಡಿಂಗ್ ಮಾಡಿಸಿ ಹಾಕಿದ್ದಾರೆ. ಹಿಂದು ಜನಜಾಗೃತಿ ಸಮಿತಿಯೇ ಕೆಲವು ಪುಸ್ತಕಗಳನ್ನು ಪ್ರಕಟಿಸಿದೆ.
ಇದನ್ನೂ ಓದಿ | Love Jihad | ಅಮಲು ಔಷಧ ಕುಡಿಸಿ ಹಿಂದು ಯುವತಿಗೆ ತಾಳಿ ಕಟ್ಟಿದ; ಖಾಸಗಿ ವಿಡಿಯೊ ಮಾಡಿ ಮುಸ್ಲಿಂ ಯುವಕನಿಂದ ಬ್ಲ್ಯಾಕ್‌ಮೇಲ್