ಹಾವೇರಿ: ಮುಸ್ಲಿಂ ವಿವಾಹಿತ ಮಹಿಳೆಯೊಂದಿಗೆ ಸಿಕ್ಕಿಬಿದ್ದ ಹಿಂದು ವ್ಯಕ್ತಿ ಮೇಲೆ ಯುವಕರ ಗುಂಪು ಹಲ್ಲೆ ಮಾಡಿರುವ ಘಟನೆ (Assault Case) ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ನಡೆದಿದೆ. ತಮ್ಮ ಕೋಮಿನ ಮಹಿಳೆಯೊಂದಿಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಯುವಕರ ಗುಂಪು, ಹೋಟೆಲ್ಗೆ ನುಗ್ಗಿ ಪುರುಷನ ಜತೆಗೆ ಮಹಿಳೆಯನ್ನೂ ಹಿಗ್ಗಾಮುಗ್ಗಾ ಥಳಿಸಿದೆ.
ಹಾನಗಲ್ 4ನೇ ಕ್ರಾಸ್ ಬಳಿಯ ಖಾಸಗಿ ಹೊಟೇಲ್ನಲ್ಲಿ ಮುಸ್ಲಿಂ ವಿವಾಹಿತ ಮಹಿಳೆಯೊಂದಿಗೆ ವ್ಯಕ್ತಿ ಇರುವ ಬಗ್ಗೆ ಮಾಹಿತಿ ಪಡೆದು ಯುವಕರ ಗುಂಪು ತೆರಳಿದೆ. ಬಾಗಿಲು ಬಡಿದು ರೂಮಲ್ಲಿ ನೀರು ಬರುತ್ತಿದ್ದೆಯೇ ಚೆಕ್ ಮಾಡಬೇಕು ಎಂದು ಹೇಳಿದ್ದಾರೆ. ಈ ವೇಳೆ ನೀರು ಬರುತ್ತಿದೆ, ಏನೂ ಸಮಸ್ಯೆ ಇಲ್ಲ ಎಂದು ಮಹಿಳೆ ಜತೆಗಿದ್ದ ವ್ಯಕ್ತಿ ಹೇಳಿದ್ದಾನೆ. ಬಾಗಿಲು ಓಪನ್ ಮಾಡಿದ್ದೇ ತಡ, ರೊಚ್ಚಿಗೆದ್ದ ಯುವಕರ ಗುಂಪು, ವ್ಯಕ್ತಿ ಹಾಗೂ ಮಹಿಳೆ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ.
ಬುರ್ಖಾ ಹಾಕಿಕೊಂಡು ಬಂದು ಮಲಗಿದ್ದೀಯಾ? ಎಂದು ಮಹಿಳೆಯನ್ನು ಥಳಿಸಿದ ಯುವಕರು, ನಿನಗೆ ನಮ್ ಹುಡುಗೀನೇ ಬೇಕಾ ಎಂದು ಆ ವ್ಯಕ್ತಿಗೂ ಹೊಡೆದಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಹಲ್ಲೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ | Killer CEO: ಗೃಹ ದೌರ್ಜನ್ಯಕ್ಕೆ ತುತ್ತಾಗಿದ್ದಳು ಹಂತಕಿ; ಗಂಡನಿಂದ ₹2.5 ಲಕ್ಷ ಜೀವನಾಂಶ ಅಪೇಕ್ಷಿಸಿದ್ದ ಸಿಇಒ
ಘಟನೆ ಸಂಬಂಧ ಒಬ್ಬ ಯುವಕನನ್ನು ಹಾನಗಲ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಮಹಿಳೆ ಮೇಲೆ ಮತ್ತೇನಾದರೂ ದೌರ್ಜನ್ಯ ನಡೆದಿದೆಯಾ ಎಂಬ ಬಗ್ಗೆ ತನಿಖೆ ಮಾಹಿತಿ ಪಡೆಯುತ್ತಿದ್ದಾರೆ. ಸದ್ಯ ಹಲ್ಲೆಗೊಳಗಾದ ಮಹಿಳೆಯನ್ನು ವೈದ್ಯಕೀಯ ತಪಾಸಣೆಗಾಗಿ ಹಾನಗಲ್ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಹಿಂದು ಯುವತಿಗೆ ಲವ್ ಪ್ರಪೋಸ್ ಮಾಡ್ತಿದ್ದ ಮುಸ್ಲಿಂ ಯುವಕನ ಮೇಲೆ ಹಲ್ಲೆ
ಚಿಕ್ಕಮಗಳೂರು: ಹಿಂದು ಯುವತಿಯೊಂದಿಗಿದ್ದ ಮುಸ್ಲಿಂ ಯುವಕ ಮತ್ತು ಅತನ ಸ್ನೇಹಿತನ ಮೇಲೆ ಹಲ್ಲೆ ನಡೆಸಿರುವ ಘಟನೆ (Moral Policing) ಜಿಲ್ಲೆಯ ಮೂಡಿಗೆರೆಯಲ್ಲಿ ನಡೆದಿದೆ. ಯುವತಿಗೆ ಚಾಕೋಲೆಟ್ ನೀಡಿ ಪ್ರೀತಿ ನಿವೇದನೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಯುವಕನ ಮೇಲೆ ನೈತಿಕ ಪೊಲೀಸ್ಗಿರಿ ನಡೆದಿದೆ.
ಇದನ್ನೂ ಓದಿ | Murder Case: ಗೋವಾದಲ್ಲಿ ನ್ಯೂ ಇಯರ್ ಪಾರ್ಟಿ ಮಾಡಲು ಹಣಕ್ಕಾಗಿ ಹೆಣ ಬೀಳಿಸಿದರು ಪರಿಚಿತರು
ಮೂಡಿಗೆರೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ. ಯುವತಿಗೆ ಲವ್ ಪ್ರಪೋಸ್ ಮಾಡುತ್ತಿದ್ದಾಗ ಯುವಕನಿಗೆ ಹಿಗ್ಗಾಮುಗ್ಗ ಥಳಿಸಲಾಗಿದೆ. ಹಲ್ಲೆ ನಡೆಸಿದವರು ಹಿಂದು ಸಂಘಟನೆಯಲ್ಲಿ ಗುರುತಿಸಿಕೊಂಡವರು ಎನ್ನಲಾಗಿದ್ದು, ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಲ್ಲೆಗೊಳಗಾದ ಮುನೀರ್, ಸಮೀರ್ನನ್ನು ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ