Site icon Vistara News

ಭಾವೈಕ್ಯ ಗಣೇಶ | ದುರ್ಗೆಯ ಪುತ್ರನಿಗೆ ದರ್ಗಾದಲ್ಲೂ ನಡೆಯಿತು ಪೂಜೆ

ganesha in dargah

ಬೆಳಗಾವಿ: ಪಾರ್ವತಿ ಪುತ್ರ ಗಣೇಶನನ್ನು ಪೂಜಿಸುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ‌ಪಟ್ಟಣ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ದರ್ಗಾವೊಂದರಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಗಿದ್ದು, ಹಿಂದೂ- ಮುಸ್ಲಿಂ ಬಾಂಧವರು ಭಕ್ತಿ ಪ್ರೀತಿಗಳಿಂದ ಪೂಜೆಯಲ್ಲಿ ಭಾಗವಹಿಸಿದ್ದಾರೆ.

ಹಿಂದೂ-ಮುಸ್ಲಿಂ ಧರ್ಮಿಯರು ಸೇರಿ ಬೈಲಹೊಂಗಲ ಪಟ್ಟಣದ ಕಂಠಿಗಲ್ಲಿಯ ಆಲಕಟ್ಟಿಯ ಫಕ್ಕೀರಸ್ವಾಮಿ ದರ್ಗಾದಲ್ಲಿ ವಿನಾಯಕನನ್ನು ಕೂರಿಸಿದ್ದಾರೆ. ಹಿಂದೂ-ಮುಸ್ಲಿಂ ಧರ್ಮಿಯರಿಂದ ನಿತ್ಯ ವಿಘ್ನನಿವಾರಕನ ಪೂಜೆ ನಡೆಯುತ್ತಿದೆ. ಗಣಪನಿಗೆ ಹೂಮಾಲೆ ಹಾಕಿ, ಆರತಿ ಬೆಳಗಿ ಉಭಯ ಧರ್ಮೀಯರಿಂದ ಪೂಜೆ ನಡೆದಿದೆ. ಇಲ್ಲಿನ ಮುಸ್ಲಿಂ ಬಾಂಧವರು ಮಂತ್ರ ಘೋಷಗಳನ್ನು ಭಕ್ತಿಯಿಂದ ನುಡಿಯುತ್ತಾರೆ. ಸ್ವಾತಂತ್ರ್ಯಪೂರ್ವದಿಂದಲೂ ಇಲ್ಲಿ ಸ್ಥಳೀಯರಿಂದ ಮೋಹರಂ, ಚೌತಿ ಆಚರಣೆ ನಡೆಯುತ್ತಿದ್ದು, ಉಭಯ ಮತೀಯರ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ | Viral Photo | ಕೈಲಾಸ ಪರ್ವತದ ಟಾಪ್​ ಫ್ಲೋರ್​​ನಲ್ಲಿ ಹುಟ್ಟಿದ ಗಣೇಶನ ಆಧಾರ್​ ಕಾರ್ಡ್​ ಇದು !

Exit mobile version