ಹಾವೇರಿ: ಹಾವೇರಿ ಜಿಲ್ಲೆಯ ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಸಚಿವ, ಬಿಜೆಪಿ ಅಭ್ಯರ್ಥಿ ಬಿ.ಸಿ ಪಾಟೀಲ್ ಸೋತಿದ್ದಾರೆ. ಇಲ್ಲಿ ಕಾಂಗ್ರೆಸ್‌ನ ಯು.ಬಿ ಬಣಕಾರ್ ಗೆದ್ದಿದ್ದಾರೆ.
ಈ ಬಾರಿ ಇಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಜಯಾನಂದ ಜವಣ್ಣವರ್, ಬಿಜೆಪಿ ಅಭ್ಯರ್ಥಿಯಾಗಿ ಬಿ.ಸಿ ಪಾಟೀಲ್, ಕಾಂಗ್ರೆಸ್‌ನಿಂದ ಯು.ಬಿ ಬಣಕಾರ್, ಆಪ್‌ನಿಂದ ರಾಜಶೇಖರ ದೂಡಿಹಳ್ಳಿ ಕಣದಲ್ಲಿದ್ದರು.
2019ರಲ್ಲಿ ನಡೆದ ವಿಧಾನಸಭೆ ಉಪ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಬಿ.ಸಿ ಪಾಟೀಲ್ 85,562 ಮತ ಪಡೆದು ಗೆಲುವು ಸಾಧಿಸಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಬಿ. ಎಚ್ ಬನ್ನಿಕೋಡ್ 29,067 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.
2018ರ ಚುನಾವಣೆಯಲ್ಲಿ ಬಿ.ಸಿ ಪಾಟೀಲ್ ಕಾಂಗ್ರೆಸ್‌ನಲ್ಲಿದ್ದರು. ಆಗ ಗೆಲುವು ಸಾಧಿಸಿದ್ದರು. ನಂತರ ಆಪರೇಶನ್ ಕಮಲದ ಸಂದರ್ಭದಲ್ಲಿ ಬಿಜೆಪಿಯತ್ತ ಬಂದಿದ್ದರು. ಇದರಿಂದಾಗಿ 2019ರಲ್ಲಿ ಉಪಚುನಾವಣೆ ನಡೆದಿತ್ತು. ಆ ಸಂದರ್ಭದಲ್ಲಿ ಬಿ.ಸಿ ಪಾಟೀಲ್ ಗೆದ್ದಿದ್ದರು. ಆದರೆ ಈ ಬಾರಿ ಮತದಾರರು ಬಿ.ಸಿ ಪಾಟೀಲ್ ಮೇಲೆ ಮುನಿಸಿಕೊಂಡಿದ್ದಾರೆ.
ಇಲ್ಲಿ ಇರುವ ಒಟ್ಟು ಮತಗಳು 197,190. ಪುರುಷರು 101,682 ಹಾಗೂ ಸ್ತ್ರೀಯರು 95,504.
Read more : VijayNagar Election Results : ವಿಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಎಂ ಕೃಷ್ಣಪ್ಪ ಗೆಲುವಿನ ನಾಗಾಲೋಟ