Site icon Vistara News

Hit and Run Case : ಬೆಂಗಳೂರಿನಲ್ಲಿ ಮತ್ತೊಂದು ಹಿಟ್ ಆ್ಯಂಡ್ ರನ್ ಪ್ರಕರಣ; ಕಾರು ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಾಯ

Hit and Run Case

ಬೆಂಗಳೂರು: ವೃದ್ಧರೊಬ್ಬರನ್ನು ಬೈಕ್‌ನೊಂದಿಗೆ ಎಳೆದೊಯ್ದ ಪ್ರಕರಣ, ಯುವಕನನ್ನು ಕಾರಿನ ಬಾನೆಟ್‌ ಮೇಲೆ ಮಹಿಳೆ ಎಳೆದೊಯ್ದ ಘಟನೆ ಬೆನ್ನಲ್ಲೇ ಮತ್ತೊಂದು ಹಿಟ್ ಆ್ಯಂಡ್‌ ರನ್ ಪ್ರಕರಣ (Hit and Run Case) ನಗರದಲ್ಲಿ ನಡೆದಿದೆ. ರಾಜಾಜಿ ನಗರದಲ್ಲಿ ಫಾರ್ಚುನರ್ ಕಾರು ಬೈಕ್‌ಗೆ ಡಿಕ್ಕಿಯಾಗಿ ಸವಾರ ಗಾಯಗೊಂಡಿದ್ದಾರೆ.

ರಾಜಾಜಿ ನಗರದ ಮಧುಲೋಕ ಬಾರ್ ಬಳಿ ಅಪಘಾತ ನಡೆದಿದೆ. ಕಾರು ಗುದ್ದಿದ ರಭಸಕ್ಕೆ ಸವಾರ ಸುಮಾರು ದೂರ ಹಾರಿಬಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಬೈಕ್‌ಗೆ ಡಿಕ್ಕಿ ಹೊಡೆದು ನಂತರ ಅಲ್ಲಿಂದ ಕಾರು ನಿಲ್ಲಿಸದೇ ಚಾಲಕ ಎಸ್ಕೇಪ್ ಆಗಿದ್ದಾನೆ. ಈ ವೇಳೆ ಕಾರನ್ನು ತಡೆಯಲು ಪ್ರಯತ್ನಿಸಿದ ಸಾರ್ವಜನಿಕರ ಮೇಲೂ ಕಾರು ಹತ್ತಿಸುವ ಪ್ರಯತ್ನವನ್ನು ಚಾಲಕ ಮಾಡಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ | Car Accident : ಜೋಯಿಡಾದಲ್ಲಿ ರಸ್ತೆ ಪಕ್ಕ ಹೋಗುತ್ತಿದ್ದವರ ಮೇಲೆ ಕಾರು ಹರಿದು ಮೂವರ ಸಾವು, ಒಬ್ಬರಿಗೆ ಗಾಯ

Exit mobile version