Site icon Vistara News

ಬುದ್ಧಿಜೀವಿಗಳ ಬಾಯಿಗೆ ಲಕ್ವ ಹೊಡೆದಿದೆಯಾ?: ಗೃಹ ಸಚಿವ ಆರಗ ಜ್ಞಾನೇಂದ್ರ ಆಕ್ರೋಶ

ಆರಗ ಜ್ಞಾನೇಂದ್ರ

ಬೆಂಗಳೂರು: ದೇಶದಲ್ಲಿ ಬೇರೆ ಬೇರೆ ಘಟನೆಗಳು ನಡೆದಾಗ ಖಂಡಿಸುವ ಬುದ್ಧಿಜೀವಿಗಳ ಬಾಯಿಗೆ ಈಗ ಕನ್ಹಯ್ಯ ಲಾಲ್‌ ಹತ್ಯೆ ಸಂದರ್ಭದಲ್ಲಿ ಲಕ್ವ ಹೊಡೆದಿದೆಯೇ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “”ಇದು ಅತ್ಯಂತ ಕ್ರೂರ, ಅಮಾನವೀಯ ಘಟನೆ. ಅವರು ಮನುಷ್ಯರೇ ಅಲ್ಲ ಅನ್ನುವುದನ್ನು ತೋರಿಸಿದ್ದಾರೆ. ಈ ರೀತಿ ರಾಕ್ಷಸೀ ಕೃತ್ಯ ಮಾಡುವವರನ್ನು ಯಾವುದೇ ರೀತಿ ಕ್ಷಮಿಸಬಾರದು. ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಧರ್ಮ ಎಂದರೆ ಇದೇ ರೀತಿ ಎಂದು ಅವರು ತಿಳಿದಿದ್ದಾರೆ. ಇಡೀ ಜಗತ್ತಿನಲ್ಲಿ ಎಲ್ಲಿಯೂ ಅವರು ಸುಖವಾಗಿಲ್ಲ. ಜಗತ್ತು ಶಾಂತಿಯಿಂದ ಬದುಕುವುದಕ್ಕೂ ಅವರು ಬಿಡುತ್ತಿಲ್ಲ. ಎಲ್ಲ ಕಡೆ ಈ ರೀತಿ ಕೃತ್ಯ ನಡೆಸುತ್ತಿದ್ದಾರೆʼʼ ಎಂದು ಆರಗ ಹೇಳಿದರು.

“”ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಈ ರೀತಿಯ ಕ್ರೂರ ಜನರನ್ನು ಮಟ್ಟ ಹಾಕಲು ಆ ಸರ್ಕಾರ ವಿಫಲವಾಗಿದೆ. ಜನ ಸಮುದಾಯವೇ ಇದನ್ನು ಖಂಡಿಸಬೇಕು. ಆಗ ಮಾತ್ರ ಈ ರೀತಿಯ ದ್ರೋಹಿಗಳಿಗೆ ಕಡಿವಾಣ ಬೀಳುತ್ತದೆʼʼ ಎಂದವರು ಅಭಿಪ್ರಾಯಪಟ್ಟರು.

ʼʼಪ್ರಮೋದ್‌ ಮುತಾಲಿಕ್‌ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು “”ಅವರು ಏನು ಹೇಳುತ್ತಾರೆ ಎನ್ನುವುದು ಮುಖ್ಯವಲ್ಲ. ಈ ದೇಶದಲ್ಲಿ ಸಂವಿಧಾನ, ಕಾನೂನು, ಶಿಕ್ಷೆ ಎಲ್ಲವೂ ಇದೆ. ಈಗ ಕೊಲೆ ಮಾಡಿರುವವರು ತಾವೇ ಶಿಕ್ಷೆ ನೀಡುವವರು ಎಂದುಕೊಂಡು ಕೃತ್ಯ ಎಸಗಿದ್ದಾರೆ. ಆ ರೀತಿ ಮಾಡಲು ಆಗುವುದಿಲ್ಲ. ಎಲ್ಲವನ್ನೂ ಕಾನೂನಿನ ಚೌಕಟ್ಟಿನಲ್ಲಿ ಮಾಡಬೇಕು. ಇದು ಜಂಗಲ್ ರಾಜ್ಯ ಅಲ್ಲ ಎಂಬ ಸಂದೇಶವನ್ನು ಮತಾಂಧರಿಗೆ ನೀಡಬೇಕಿದೆʼʼ ಎಂದರು.

Exit mobile version