Site icon Vistara News

Honey Trap | ಕರೆ ಮಾಡಿ ಖಾಸಗಿ ಅಂಗ ತೋರಿಸಿದಳು, ತಕ್ಷಣವೇ ಕರೆ ಕಟ್‌ ಮಾಡಿದೆ: ಶಾಸಕ ತಿಪ್ಪಾರೆಡ್ಡಿ

honey trap

ಚಿತ್ರದುರ್ಗ: ನನಗೆ ಅಪರಿಚಿತ ನಂಬರ್‌ನಿಂದ ವಿಡಿಯೊ ಕಾಲ್‌ ಬಂದಿದೆ. ಶಾಸಕನಾಗಿದ್ದರಿಂದ ಕರೆಯನ್ನು ಸ್ವೀಕರಿಸಿದೆ. ಆದರೆ, ಆ ಕಡೆಯಿಂದ ಯುವತಿಯೊಬ್ಬಳು ಬೆತ್ತಲಾಗಿದ್ದಾಳೆ. ಖಾಸಗಿ ಅಂಗವನ್ನು ತೋರಿಸಿದ್ದಾಳೆ. ತಕ್ಷಣವೇ ನಾನು ಕಾಲ್‌ ಕಟ್‌ ಮಾಡಿದೆ ಎಂದು ಹನಿ ಟ್ರ್ಯಾಪ್‌ (Honey Trap) ವಿಷಯವಾಗಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ “ವಿಸ್ತಾರ ನ್ಯೂಸ್‌”ಗೆ ಸ್ಪಷ್ಟೀಕರಣ ನೀಡಿದ್ದಾರೆ.

ತಮ್ಮ ಮೇಲೆ ಹನಿ ಟ್ರ್ಯಾಪ್‌ ಯತ್ನ ನಡೆದಿದ್ದು, ಯುವತಿ ಖಾಸಗಿ ಅಂಗ ತೋರಿಸುತ್ತಿದ್ದಂತೆ ಕರೆ ಕಟ್‌ ಮಾಡಿ ಮೊಬೈಲ್‌ ಅನ್ನು ಪಕ್ಕಕ್ಕೆ ಇಟ್ಟಿದ್ದೇನೆ. ಆದರೆ, ಆ ಬಳಿಕ ಅದೇ ನಂಬರ್‌ನಿಂದ ನನ್ನ ವಾಟ್ಸ್‌ಆ್ಯಪ್‌ ನಂಬರ್‌ಗೆ ವಿಡಿಯೊವನ್ನು ಕಳುಹಿಸಿದ್ದಾರೆ. ಅದನ್ನು ಡಿಲೀಟ್‌ ಮಾಡಿ ಬಳಿಕ ಕರೆ ಬಂದಿದ್ದ ನಂಬರ್‌ ಅನ್ನು ಬ್ಲಾಕ್‌ ಮಾಡಿಸಿದ್ದೇನೆ. ದೂರನ್ನೂ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.

ತಿಪ್ಪಾರೆಡ್ಡಿ ಅವರು ಹೇಳಿದ್ದೇನು?
ನಾನು ಪತ್ರಿಕೆಯನ್ನು ಓದುತ್ತಿದ್ದೆ. ಆಗ ನನಗೆ ವಾಟ್ಸ್‌ಆ್ಯಪ್ ಕರೆ ಬಂತು, ರಿಸೀವ್ ಮಾಡಿದೆ. ಅವರು ಹಿಂದಿಯಲ್ಲಿ ಮಾತನಾಡುತ್ತಿದ್ದರು? ಏನು ಹೇಳುತ್ತಿದ್ದಾರೆ ಎಂದು ಅರ್ಥ ಆಗಲಿಲ್ಲ. ಯಾರು ಎಂದು ಹಿಂದಿಯಲ್ಲಿ ಕೌನ್ ಎಂದು ಕೇಳಿದೆ. ಇಂಗ್ಲಿಷ್‌ನಲ್ಲಿ ಹು ಈಸ್‌ ದೇರ್‌ (who is there) ಎಂದು ಕೇಳಿದೆ. ಆದರೂ ಹೇಳಲಿಲ್ಲ. ಹಾಗಾಗಿ ಕರೆ ಕಟ್ ಮಾಡಿದ್ದೆ. ಆದಾದ ಮೇಲೆ ಮತ್ತೆ ವಿಡಿಯೊ ಕರೆ ಬಂತು, ಸ್ಕ್ರೀನ್‌ ನೋಡಿದೆ, ಆಗ ನಗ್ನ ಚಿತ್ರ ತೋರಿಸಿದರು. ನಾನು ಕೂಡಲೇ ಕರೆ ಕಟ್‌ ಪಕ್ಕಕ್ಕೆ ತೆಗದು ಇಟ್ಟೆ. ನಂಬರ್ ಬ್ಲಾಕ್ ಮಾಡಿದೆ. ಲಾ ಆ್ಯಂಡ್‌ ಆರ್ಡರ್‌ ಇನ್ಸ್‌ಪೆಕ್ಟರ್‌ ಜತೆ ಮಾತನಾಡಿದೆ. ಆಗ ಅವರು ಇದು ಸೈಬರ್ ಕ್ರೈಮ್ ವಿಭಾಗಕ್ಕೆ ಬರುತ್ತದೆ ಅಂದರು. ಹೀಗಾಗಿ ಎಸ್‌ಪಿ ಜತೆ ಮಾತನಾಡಿದೆ. ಅವರು ಎಫ್ಐಆರ್ ದಾಖಲು‌ ಮಾಡಿಕೊಂಡರು ಎಂದು ಬಿಜೆಪಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ “ವಿಸ್ತಾರ ನ್ಯೂಸ್‌”ಗೆ ಹೇಳಿದ್ದಾರೆ.

ಪೊಲೀಸರು ನನಗೆ ಕರೆ ಬಂದಿದ್ದ ನಂಬರ್ ಸ್ಕ್ರೀನ್ ಶಾಟ್ ಮಾಡಿಕೊಂಡರು. ಪೊಲೀಸ್ ಹೇಳುವ ಪ್ರಕಾರ ಒರಿಸ್ಸಾ, ರಾಜಸ್ಥಾನ, ಬಂಗಾಳದ ಕಡೆಯ ನಂಬರ್ ಎಂದು ಹೇಳುತ್ತಿದ್ದಾರೆ. ಮೂರು ಬಾರಿ ಒಂದೇ ನಂಬರ್‌ನಿಂದ ಕರೆ ಬಂದಿತ್ತು. ಮಾರನೇ ದಿನ ಬಂದಿದ್ದು ಬೇರೆ ನಂಬರ್, ಹಾಗಾಗಿ ನನ್ನ ಗನ್ ಮ್ಯಾನ್ ಆಫ್ ಮಾಡಿದ್ದ. ನನಗೆ ಕರೆ ಬಂದಿದ್ದು ಇದೇ ಮೊದಲು. ಈ ರೀತಿಯ ಘಟನೆಗಳು ತುಂಬ ಆಗುತ್ತಿವೆ ಎಂದು ಪೊಲೀಸರು ಹೇಳುತ್ತಿದ್ದಾರೆ. ದಿನನಿತ್ಯ ಸೈಬರ್‌ಗೆ ಈ ರೀತಿ ದೂರುಗಳು ಬರುತ್ತಿರುವುದು ಹೆಚ್ಚುತ್ತಿವೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಮಾತ್ರವಲ್ಲ, ಎಲ್ಲ ಕಡೆ ಪ್ರಕರಣಗಳು ಹೆಚ್ಚಾಗಿವೆ. ಈ ರೀತಿ ಆಗದಂತೆ ಸರ್ಕಾರ ಕ್ರಮ ಜರುಗಿಸಬೇಕು. ಈ ಬಗ್ಗೆ ಗೃಹ ಸಚಿವರ ಜತೆ ಮಾತನಾಡುತ್ತೇನೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಒರಿಸ್ಸಾದಿಂದ ಬಂದ ಕರೆ
ಹನಿಟ್ರ್ಯಾಪ್ ಪ್ರಕರಣದ ತನಿಖೆ ಚುರುಕುಕೊಂಡಿದೆ. ವಿಡಿಯೊ ಕಾಲ್‌ ಬಂದಿರುವ ಲೊಕೇಶನ್‌ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಈ ನಡುವೆ ಒರಿಸ್ಸಾ ಭಾಗದಿಂದ ವಿಡಿಯೊ ಕಾಲ್‌ ಬಂದಿರುವ ಬಗ್ಗೆ ಗೊತ್ತಾಗಿದೆ. ಒಂದೇ ನಂಬರಿಂದ ಮೂರು ಸಾರಿ ಕರೆ ಬಂದಿದ್ದು, ಸುನಂದಾ ಮಲಿಕ್ ಎಂಬ ಮಹಿಳೆಯಿಂದ ಕರೆ ಬಂದಿರುವ ಬಗ್ಗೆ ತಿಳಿದುಬಂದಿದೆ. ತನಿಖೆಗೆ ಪಿಎಸ್‌ಐ ನೇತೃತ್ವದ ನಾಲ್ವರ ತಂಡವನ್ನು ರಚನೆ ಮಾಡಲಾಗಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಇದನ್ನೂ ಓದಿ | ಗಣ್ಯರ ಮೇಲೆ ಹನಿ‌ ಟ್ರ್ಯಾಪ್‌ ಬಲೆ | ಸ್ವಾಮೀಜಿಗಳಾಯ್ತು, ಈಗ ಶಾಸಕರ ಸರದಿ !

Exit mobile version