ಮೈಸೂರು: ಇಲ್ಲಿನ ವಿಜಯನಗರ ಪೊಲೀಸರ ಬಲೆಗೆ ಹನಿಟ್ರ್ಯಾಪ್ (Honeytrap Case) ಜತೆಗೆ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಸವಿತಾ ಅಲಿಯಾಸ್ ಮಂಜುಳಾ ಯಾದವ್ ಬಂಧಿತ ಆರೋಪಿ.
ಮೂಲತಃ ಪಿರಿಯಾಪಟ್ಟಣದ ಆರೋಪಿ ಸವಿತಾ ಮೈಸೂರಿನಲ್ಲಿ ವಾಸವಿದ್ದು, ವ್ಯಾಟ್ಸ್‌ಆ್ಯಪ್ ಚಾಟಿಂಗ್ ಮಾಡುತ್ತಿದ್ದಳು. ನಗ್ನ, ಅರೆ ನಗ್ನ ಫೋಟೊಗಳನ್ನು ಕಳುಹಿಸುತ್ತಿದ್ದಳು. ಯುವಕರು ಈಕೆಯ ಮಾಯಾಜಾಲಕ್ಕೆ ಬಿದ್ದು, ವಿಡಿಯೊ ಕಾಲ್‌ನಲ್ಲಿ ಸಿಲುಕಿದರೆ ಮುಗಿಯಿತು. ಬ್ಲ್ಯಾಕ್ಮೇಲ್ ಮಾಡಿ ಲಕ್ಷ ಲಕ್ಷ ಹಣ ವಸೂಲಿ ಮಾಡುತ್ತಿದ್ದಳು.
ಹೀಗೆ ತನ್ನ ಮೈಮಾಟ ಪ್ರದರ್ಶನದ ವಿಡಿಯೊ ರೆಕಾರ್ಡ್ ಮಾಡಿ, ಮೈಸೂರಿನಲ್ಲಿ ಪರಿಚಯಸ್ಥ ದಂಪತಿಗೆ ಯಾಮಾರಿಸಿ ಲಕ್ಷ ಲಕ್ಷ ಹಣ ಪೀಕಿದ್ದಳು. ಬಳಿಕ ಕೊಟ್ಟ ಹಣವನ್ನು ವಾಪಸ್ ಕೇಳಿದ್ದಕ್ಕೆ ಹಲ್ಲೆ ಮಾಡಲು ಮುಂದಾಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ವಿಜಯನಗರ ಬಳಿ ಸ್ಪಾ ಸೆಂಟರ್ ಇಟ್ಟುಕೊಂಡು ವೇಶ್ಯವಾಟಿಕೆ ನಡೆಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ.
ಇದನ್ನೂ ಓದಿ | ಪ್ರೀತಿಸಿ ಮದುವೆಯಾದವಳ ಕೊಂದು, ಕೊಚ್ಚಿದ ಗಂಡ; ಅಪರಾಧ ಬಯಲಿಗೆಳೆದ ಬೀದಿ ನಾಯಿಗಳು!