ಹೊಸನಗರ: ತಾಲೂಕಿನ ಶ್ರೀ ನೀಲಕಂಠೇಶ್ವರ ಕೃಷಿ ಪತ್ತಿನ ಸಹಕಾರಿ ಸಂಘದ ಕಚೇರಿಯ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ.
ನಗರದ ಸೊಸೈಟಿ ವೃತ್ತದ ಕೃಷಿ ಪತ್ತಿನ ಸಂಘದ ಆಡಳಿತ ಕಚೇರಿಯಲ್ಲಿ ಬುಧವಾರ ರಾತ್ರಿ (ಡಿ. ೨೮) ಬಾಗಿಲಿನ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಕಳ್ಳರು 7-8 ಟೇಬಲ್ ಡ್ರಾವರ್ ಮುರಿದು ಎರಡು ಗಾಡ್ರೇಜ್ ಬೀರು ಹಾಗೂ ಖಜಾನೆಯ ಬಾಗಿಲು ಮುರಿದು ಹಣ ದೋಚಿದ್ದಾರೆ. ಜತೆಗೆ ಕಚೇರಿಯ ಸಿಸಿ ಕ್ಯಾಮೆರಾ, ಡಿವಿಆರ್ ಅನ್ನು ಸಹ ಹೊತ್ತೊಯ್ದಿದ್ದಾರೆ.
ಈ ಬಗ್ಗೆ ಸಂಸ್ಥೆಯ ಸಿಇಒ ಸಿ. ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ. ಸಂಸ್ಥೆಯ ವ್ಯವಹಾರಕ್ಕಾಗಿ ಮೀಸಲಿಡುವ 25-30 ಸಾವಿರ ರೂ. ನಗದು ಹಾಗೂ ಸಿಸಿ ಕ್ಯಾಮೆರಾಗಳ ಡಿವಿಆರ್ ಹಾಗೂ ಇತರ ವಸ್ತುಗಳು ಸೇರಿ ಒಟ್ಟು 50 ಸಾವಿರ ರೂ. ಮೊತ್ತದಷ್ಟು ಕಳ್ಳತನವಾಗಿದೆ. ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಡಿವೈಎಸ್‌ಪಿ ಗಜಾನನ ವಾಮನ ಸುತಾರ ಹಾಗೂ ಸ್ಥಳೀಯ ಠಾಣಾಧಿಕಾರಿ ನಾಗರಾಜ್, ಶಿವಮೊಗ್ಗದ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿದ್ದರು.
ಇದನ್ನೂ ಓದಿ | Amit Shah | ಮುಂದಿನ 3 ವರ್ಷದಲ್ಲಿ ದೇಶದ ಎಲ್ಲ ಪಂಚಾಯಿತಿಗಳಲ್ಲಿ ಡೇರಿ ಸ್ಥಾಪನೆ: ಸಚಿವ ಅಮಿತ್ ಶಾ ಭರವಸೆ