Site icon Vistara News

Hoskote Election Results : ಹೊಸಕೋಟೆಯಲ್ಲಿ ಮತ್ತೆ ಗೆದ್ದು ಬೀಗಿದ ಶರತ್​ ಬಚ್ಚೇಗೌಡ

Hoskote Election Results Sharath Bachegowda Winner

#image_title

ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಸೇರುವ ಹೊಸಕೋಟೆ ಭಾರಿ ಜಿದ್ದಾಜಿದ್ದಿನ ಕ್ಷೇತ್ರದಲ್ಲಿ ಕಾಂಗ್ರೆಸ್​​ ಪಕ್ಷದ ಶರತ್​ ಬಚ್ಚೇಗೌಡ (106769) ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಮಾಜಿ ಸಚಿವ ಎಂಟಿಬಿ ನಾಗರಾಜ್ (101597)​ ವಿರುದ್ಧ 5075 ಮತಗಳ ಅಂತರದಿಂದ ವಿಜಯ ಸಾಧಿಸಿದರು. 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಅವರನ್ನು ಸೋಲಿದ ಬಿ ಎನ್ ಬಚ್ಚೇಗೌಡರ ಮಗ ಶರತ್ ಬಚ್ಚಗೌಡ ಶಾಸಕರನ್ನಾಗಿ ಆಯ್ಕೆಯಾಗಿದ್ದರು.

2018ರಲ್ಲಿ ಎಂಟಿಬಿ ನಾಗರಾಜ್ ಮೂರನೇ ಬಾರಿಗೆ ಆಯ್ಕೆಯಾದರು. ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದರೂ ಆಪರೇಷನ್ ಕಮಲಕ್ಕೆ ಗುರಿಯಾಗಿ ಎಂಟಿಬಿ ನಾಗರಾಜ್ ಬಿಜೆಪಿ ಸೇರಿದರು. ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾದರು. ಇದು ಹಾಲಿ ವಿಧಾನಸಭಾ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಕ್ಷೇತ್ರ ಎನಿಸಿಕೊಂಡಿತ್ತು. ಶರತ್​ ಬಚ್ಚೇಗೌಡ ಹಾಗೂ ಎಂಟಿಬಿ ನಾಗರಾಜ್ ಅವರು ಕದನದ ಕಣವಾಗಿ ಮಾರ್ಪಟ್ಟಿತ್ತು.

ಇದನ್ನೂ ಓದಿ : Nelamangala Election Results : ನೆಲಮಂಗಲವನ್ನು ತೆಕ್ಕೆಗೆ ತೆಗೆದುಕೊಂಡ ಕಾಂಗ್ರೆಸ್​

ಕ್ಷೇತ್ರದಲ್ಲಿ ಜಾತಿವಾರು ಜನಸಂಖ್ಯೆ ನೋಡಿದರೆ, ಪರಿಶಿಷ್ಟ ಜಾತಿ/ಪಂಗಡದ 58883 ಮತದಾರರು ಇದ್ದರೆ. ಒಕ್ಕಲಿಗರು 45826, ಮುಸ್ಲಿಮರು 45642, ಕುರುಬರು 30132, ಲಿಂಗಾಯತರು 18442 ಇದ್ದಾರೆ ಎನ್ನಲಾಗಿದೆ.

Exit mobile version