Site icon Vistara News

Karnataka Election Results: ಲಿಂಗಾಯತ ಮತಗಳನ್ನು ಕಾಂಗ್ರೆಸ್‌ ಸೆಳೆದಿದ್ದು ಹೇಗೆ? ಬಿಜೆಪಿ ಎಡವಿದ್ದೆಲ್ಲಿ?

How Congress Bagged More Lingayat Votes In Karnataka

How Congress Bagged More Lingayat Votes In Karnataka

ಬೆಂಗಳೂರು: ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದ ಮತಗಳೇ (Karnataka Election Results) ನಿರ್ಣಾಯಕವಾಗಿದ್ದು, ಈ ಬಾರಿ ಬಿಜೆಪಿಯು ಲಿಂಗಾಯತ ನಾಯಕರನ್ನು ಕಡೆಗಣಿಸಿದ್ದಕ್ಕೇ ಅದಕ್ಕೆ ಮುಳುವಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ ಲಿಂಗಾಯತರ ಮತಗಳನ್ನು ಸೆಳೆಯುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿದ್ದು, ಬಿಜೆಪಿಯ ಘಟಾನುಘಟಿ ಲಿಂಗಾಯತ ನಾಯಕರೇ ಸೋಲನುಭವಿಸಿದ್ದಾರೆ.

ಲಿಂಗಾಯತ ನಾಯಕರನ್ನು ಕಡೆಗಣಿಸಿದ್ದೇ ಬಿಜೆಪಿಗೆ ಮುಳುವು?

ರಾಜ್ಯ ರಾಜಕಾರಣದಲ್ಲಿ ಲಿಂಗಾಯತ ಸಮುದಾಯದ ಪ್ರಭಾವ ನಿರ್ಣಾಯಕ. ಆದರೆ ಸಿಎಂ ಹುದ್ದೆಯಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ದು; ಆ ಬಳಿಕ ಜಗದೀಶ್‌ ಶೆಟ್ಟರ್‌, ಲಕ್ಷ್ಮಣ ಸವದಿಯಂಥ ಹಿರಿಯ ನಾಯಕರಿಗೆ ಟಿಕೆಟ್‌ ನಿರಾಕರಿಸಿದ್ದು, ಮೀಸಲು ಹೋರಾಟ ಇತ್ಯಾದಿ ಕಾರಣಗಳಿಂದ ರಾಜ್ಯದ ಲಿಂಗಾಯತ ಸಮುದಾಯದವರು ಬಿಜೆಪಿ ಬಗ್ಗೆ ಮುನಿಸಿಕೊಂಡು ಕಾಂಗ್ರೆಸ್‌ ಕಡೆ ದೃಷ್ಟಿ ಹರಿಸುವಂತಾಯಿತು.

ಈ ಬಾರಿ ಕಾಂಗ್ರೆಸ್‌ನಿಂದ 30 ಲಿಂಗಾಯತರು ಗೆದ್ದಿರುವುದು ಇದಕ್ಕೆ ಸಾಕ್ಷಿ. ಬಿಜೆಪಿಯ 56 ಲಿಂಗಾಯತ ಅಭ್ಯರ್ಥಿಗಳಲ್ಲಿ 18 ಮಂದಿಯಷ್ಟೇ ಗೆಲುವು ಸಾಧಿಸಿರುವುದು ಇದಕ್ಕೆ ನಿದರ್ಶನವಾಗಿದೆ. ವೀರಣ್ಣ ಚರಂತಿಮಠ, ಸಿ.ಸಿ. ಪಾಟೀಲ್‌, ಅಮೃತ್‌ ದೇಸಾಯಿ, ರೇಣುಕಾಚಾರ್ಯ, ಸೋಮಣ್ಣ ಸೇರಿ ಹಲವು ಲಿಂಗಾಯತ ನಾಯಕರು ಸೋಲನುಭವಿಸಿದ್ದಾರೆ. ಇದರಿಂದ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ.

ಅನೇಕ ವರ್ಷಗಳಿಂದ ಬಿಜೆಪಿ ಬೆನ್ನಿಗೆ ನಿಂತಿದ್ದ ಲಿಂಗಾಯತ ಸಮುದಾಯ ಬಿಜೆಪಿಯಿಂದ ಹೊರನಡೆದಿರುವ ಸ್ಪಷ್ಟ ಸೂಚನೆ ನೀಡಿದೆ. ರಾಮಕೃಷ್ಣ ಹೆಗಡೆ ಮೂಲಕ ಬಿಜೆಪಿಗೆ ಆಗಮಿಸಿದ್ದ ಲಿಂಗಾಯತ ಸಮುದಾಯ ಮತ್ತೆ ಕಾಂಗ್ರೆಸ್‌ಗೆ ಹೋಗಿದೆ. ಇದು ಬಿಜೆಪಿಯನ್ನು ದೀರ್ಘಕಾಲಿಕವಾಗಿ ಬಾಧಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಲಿಂಗಾಯತ ನಾಯಕರ ವಿಷಯದಲ್ಲಿ ಒಡೆದ ಮನೆಯಂತಾದ ಬಿಜೆಪಿಯ ಲೋಪವನ್ನು ಕಾಂಗ್ರೆಸ್‌ ಸರಿಯಾಗಿ ಬಳಸಿಕೊಂಡಿತು. ಜಗದೀಶ್‌ ಶೆಟ್ಟರ್‌, ಲಕ್ಷ್ಮಣ ಸವದಿ ಅವರಿಗೆ ಮಣೆ ಹಾಕಿ, ಬಿಜೆಪಿಯು ಲಿಂಗಾಯತರಿಗೆ ಅವಮಾನ ಮಾಡಿತು ಎಂಬುದಾಗಿ ಬಿಂಬಿಸಿದರು. ಇದು ಬಿಜೆಪಿ ಮೇಲೆ ಲಿಂಗಾಯತರು ಕೆಂಗಣ್ಣು ಬೀರಲು ಕಾರಣವಾಯಿತು ಎನ್ನಲಾಗಿದೆ.

ಇದನ್ನೂ ಓದಿ: Karnataka Election Results: ಮೈತ್ರಿ ಸರ್ಕಾರ ಕೆಡವಿ ಬಿಜೆಪಿ ಸೇರಿದ ‘ಬಾಂಬೆ ಬಾಯ್ಸ್‌’ಗಳಲ್ಲಿ ಗೆದ್ದವರಾರು? ಸೋತವರಾರು?

Exit mobile version