Site icon Vistara News

Karnataka Election 2023: ರಾಜ್ಯದ ಒಟ್ಟು ಮತದಾರರು ಎಷ್ಟು? ಮೊದಲ ಬಾರಿಗೆ ವೋಟ್‌ ಹಾಕುವವರೆಷ್ಟು?

How many voters are in Karnataka in this election

How many voters are in Karnataka in this election

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ (Karnataka Election 2023) ಕಾವು ದಿನೇದಿನೆ ಜಾಸ್ತಿಯಾಗುತ್ತಿದೆ. ಅಭ್ಯರ್ಥಿಗಳು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಆರೋಪ, ಪ್ರತ್ಯಾರೋಪ, ವ್ಯಂಗ್ಯ, ಟೀಕೆ, ಅಬ್ಬರದ ಭಾಷಣದಿಂದ ರಾಜಕೀಯ ವೈರಿಗಳ ವಿರುದ್ಧ ತೊಡೆತಟ್ಟುವ ಜತೆಗೆ, ಮತದಾರರನ್ನು ಓಲೈಸಲು ನೂರಾರು ಭರವಸೆಗಳನ್ನು ನೀಡುತ್ತಿದ್ದಾರೆ. ಇದರ ಬೆನ್ನಲ್ಲೇ, ರಾಜ್ಯ ಚುನಾವಣೆ ಆಯೋಗವು ಒಟ್ಟು ಮತದಾರರ ಸಂಖ್ಯೆ, ಮೊದಲ ಬಾರಿಗೆ ಮತದಾನ ಮಾಡುತ್ತಿರುವವರು ಎಷ್ಟು? ಚುನಾವಣೆ ಸಿದ್ಧತೆ ಹೇಗಿದೆ ಎಂಬುದು ಸೇರಿ ಹಲವು ಮಾಹಿತಿ ನೀಡಿದೆ.

ಒಟ್ಟು ಮತದಾರರು ಎಷ್ಟು?

ರಾಜ್ಯದಲ್ಲಿ 5,30,85,566 ಸಾಮಾನ್ಯ ಮತದಾರರಿದ್ದು, 47,488 ಸೇವಾ ಮತದಾರರು ಸೇರಿ ಒಟ್ಟು 5,31,33,054 ಮತದಾರರಿದ್ದಾರೆ. ಇವರಲ್ಲಿ ಪುರುಷರು 2,67,28,053 ಇದ್ದರೆ, ಮಹಿಳಾ ಮತದಾರರ ಸಂಖ್ಯೆ 2,64,00,074 ಇದೆ. ಒಟ್ಟು ಮತದಾರರ ಪೈಕಿ 571,281 ವಿಶೇಷ ಚೇತನರಿದ್ದರೆ, 3,35,387 ಪುರುಷರಿದ್ದರೆ, 2,35,833 ಮಹಿಳೆಯರಿದ್ದಾರೆ. ಇತರೆ 61 ಮತದಾರರಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಮತದಾನ ಮಾಡುವವರ ಸಂಖ್ಯೆ 11,71,558 ಇದೆ. ಇವರಲ್ಲಿ 6,45,140 ಯುವಕರಾದರೆ, 5,26,237 ಯುವತಿಯರಾಗಿದ್ದಾರೆ.

80 ವರ್ಷ ದಾಟಿದ ಮತದಾರರೆಷ್ಟು?

ಚುನಾವಣೆ ಆಯೋಗದ ಮಾಹಿತಿ ಪ್ರಕಾರ, ರಾಜ್ಯದಲ್ಲಿ 80 ವರ್ಷ ದಾಟಿದ 12,15,920 ಮತದಾರರಿದ್ದಾರೆ. ಇವರಲ್ಲಿ ಪುರುಷರು 5,46,487 ಇದ್ದರೆ, ಮಹಿಳೆಯರ ಸಂಖ್ಯೆ 6,69,417 ಇದೆ. ಹಾಗೆಯೇ, ಅನಿವಾಸಿ ಭಾರತೀಯ ಮತದಾರರ ಸಂಖ್ಯೆ 3,048 ಇದೆ. ರಾಜ್ಯದ ಮತದಾರರ ಚೀಟಿಯಲ್ಲಿ ಪ್ರತಿಯೊಬ್ಬರ ಫೋಟೊಗಳನ್ನು ಅಳವಡಿಸಲಾಗಿದೆ ಎಂದು ಚುನಾವಣೆ ಆಯೋಗ ಮಾಹಿತಿ ನೀಡಿದೆ. ಸಮರ್ಪಕ ಹಾಗೂ ಪಾರದರ್ಶಕ ಮತದಾನಕ್ಕಾಗಿ ರಾಜ್ಯಾದ್ಯಂತ 58,545 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ.

ಇದನ್ನೂ ಓದಿ: Karnataka Election: 2019ರ ಲೋಕಸಭಾ ಚುನಾವಣೆ ಸೋಲನ್ನು ನೆನೆದು ಎಚ್‌.ಡಿ ದೇವೇಗೌಡ ಭಾವುಕ

ರಾಜ್ಯದಲ್ಲಿ ಶಾಂತಿಯುತವಾಗಿ ಚುನಾವಣೆ ನಡೆಸಲು ಭಾರಿ ಪ್ರಮಾಣದ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ಚುನಾವಣೆ ಆಯೋಗ ತೀರ್ಮಾನಿಸಿದೆ. 54,682 ನಾಗರಿಕ ಪೊಲೀಸ್‌, 20 ಸಾವಿರ ಹೋಮ್‌ ಗಾರ್ಡ್ಸ್‌, 90 ಕೆಎಸ್‌ಆರ್‌ಪಿ ತುಕಡಿ, 5,037 ಡಿಎಆರ್‌ ಹಾಗೂ 650ಕ್ಕೂ ಅಧಿಕ ಸಿಎಪಿಎಫ್‌ ತುಕಡಿಗಳನ್ನು ನಿಯೋಜಿಸಲಾಗುತ್ತಿದೆ ಎಂದು ಚುನಾವಣೆ ಆಯೋಗ ಮಾಹಿತಿ ನೀಡಿದೆ.

Exit mobile version