Site icon Vistara News

Karnataka Election Results: ವಿಧಾನಸೌಧದಲ್ಲಿ ನಾರಿ ಶಕ್ತಿ; ಚುನಾವಣೆಯಲ್ಲಿ ಗೆದ್ದ ಮಹಿಳೆಯರು ಎಷ್ಟು?

Karnataka Election Results

Karnataka Election Results

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ (Karnataka Election Results) ನಾರಿಶಕ್ತಿಯು ಕೂಡ ಮುನ್ನಡೆ ಸಾಧಿಸಿದ್ದು, ಈ ಬಾರಿ 10 ಮಹಿಳೆಯರು ಗೆಲುವು ಸಾಧಿಸಿದ್ದಾರೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ ಜತೆಗೆ ಜೆಡಿಎಸ್‌ ಹಾಗೂ ಪಕ್ಷೇತರವಾಗಿ ಸ್ಪರ್ಧಿಸಿದ ಮಹಿಳೆಯರೂ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನ ನಾಲ್ವರು, ಬಿಜೆಪಿಯ ಮೂವರು, ಜೆಡಿಎಸ್‌ನ ಇಬ್ಬರು ಹಾಗೂ ಒಬ್ಬ ಪಕ್ಷೇತರ ಮಹಿಳೆಯರು ಗೆದ್ದಿದ್ದಾರೆ.

ರಾಜ್ಯದಲ್ಲಿ 2,613 ಅಭ್ಯರ್ಥಿಗಳು ಕಣದಲ್ಲಿದ್ದರು. ಇವರಲ್ಲಿ 184 ಮಹಿಳೆಯರು ಕೂಡ ಇದ್ದರು. ಕಣದಲ್ಲಿದ್ದ 184 ಮಹಿಳೆಯರಲ್ಲಿ 10 ಮಹಿಳೆಯರು ಗೆಲುವು ಸಾಧಿಸಿದ್ದಾರೆ. ಅಂದರೆ, ಶೇ.6ರಷ್ಟು ಮಹಿಳೆಯರು ಗೆಲುವು ಸಾಧಿಸಿದಂತಾಗಿದೆ. ಕಳೆದ ಬಾರಿ ಆರು ಮಹಿಳೆಯರು ವಿಧಾನಸಭೆ ಪ್ರವೇಶಿಸಿದ್ದರು. ಈ ಬಾರಿ ಸಂಖ್ಯೆ ಹೆಚ್ಚಾಗಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ.

ಗೆದ್ದ ಮಹಿಳೆಯರು ಯಾರು?

  1. ರೂಪಕಲಾ ಎಂ (ಕಾಂಗ್ರೆಸ್‌): ಕೆಜಿಎಫ್‌
  2. ಕನೀಜ್‌ ಫಾತಿಮಾ (ಕಾಂಗ್ರೆಸ್‌): ಕಲಬುರಗಿ ಉತ್ತರ
  3. ಲಕ್ಷ್ಮೀ ಹೆಬ್ಬಾಳ್ಕರ್ (ಕಾಂಗ್ರೆಸ್‌): ಬೆಳಗಾವಿ ಗ್ರಾಮೀಣ
  4. ನಯನಾ ಮೋಟಮ್ಮ‌ (ಕಾಂಗ್ರೆಸ್‌): ಮೂಡಿಗೆರೆ
  5. ಶಶಿಕಲಾ ಜೊಲ್ಲೆ (ಬಿಜೆಪಿ): ನಿಪ್ಪಾಣಿ
  6. ಭಾಗೀರಥಿ ಮುರುಳ್ಯ (ಬಿಜೆಪಿ): ಸುಳ್ಯ
  7. ಮಂಜುಳಾ ಅರವಿಂದ್‌ ಲಿಂಬಾವಳಿ (ಬಿಜೆಪಿ): ಮಹದೇವಪುರ
  8. ಶಾರದಾ ಪೂರ್ಯಾ ನಾಯ್ಕ (ಜೆಡಿಎಸ್‌): ಶಿವಮೊಗ್ಗ ಗ್ರಾಮಾಂತರ
  9. ಜಿ. ಕರೆಮ್ಮ (ಜೆಡಿಎಸ್‌): ದೇವದುರ್ಗ
  10. ಲತಾ ಮಲ್ಲಿಕಾರ್ಜುನ (ಪಕ್ಷೇತರ): ಹರಪನಹಳ್ಳಿ

ಇದನ್ನೂ ಓದಿ: Karnataka Election Results: ಕೈ – ಕಮಲ ಅದಲು ಬದಲಾದ ಸ್ಥಿತಿ, ಯಾವ ವಲಯದಲ್ಲಿ ಯಾವ ಪಕ್ಷಕ್ಕೆ ಹೆಚ್ಚಿನ ಸ್ಥಾನ?

ಹೊಸ ಮುಖಗಳಿಗೆ ಮಣೆ

ರಾಜ್ಯದಲ್ಲಿ ಮತದಾರರು ಮೊದಲ ಬಾರಿ ಸ್ಪರ್ಧಿಸಿದ ಮಹಿಳೆಯರನ್ನು ಗೆಲ್ಲಿಸಿದ್ದಾರೆ. ಮೋಟಮ್ಮ ಪುತ್ರಿ ನಯನಾ ಮೋಟಮ್ಮ, ಲತಾ ಮಲ್ಲಿಕಾರ್ಜುನ್‌ ಹಾಗೂ ಮಂಜುಳಾ ಲಿಂಬಾವಳಿ ಅವರು ಮೊದಲ ಪ್ರಯತ್ನದಲ್ಲಿಯೇ ಗೆಲುವು ಸಾಧಿಸಿದ್ದಾರೆ. ಇನ್ನು ಕಾಂಗ್ರೆಸ್‌ನ ಅಂಜಲಿ ನಿಂಬಾಳ್ಕರ್‌, ಕೆ.ಪೂರ್ಣಿಮಾ, ಕುಸುಮಾ ಹಾಗೂ ಸೌಮ್ಯಾ ರೆಡ್ಡಿ ಅವರು ಸೋತ ಪ್ರಮುಖರಾಗಿದ್ದಾರೆ.

Exit mobile version