Site icon Vistara News

Gruha Lakshmi: ಗೃಹಲಕ್ಷ್ಮಿ ಹಣ ಯಾರಿಗೆ ಬಂತು? ತಿಳಿಯುವ ಸರಳ ಉಪಾಯ ಇಲ್ಲಿದೆ!

gruha lakshmi scheme with women in traditional dress

ಬೆಂಗಳೂರು: ಕಾಂಗ್ರೆಸ್‌ ಗ್ಯಾರಂಟಿ (Congress Guarantee Scheme) ಯೋಜನೆಗಳಲ್ಲೊಂದಾಗಿರುವ ಗೃಹಲಕ್ಷ್ಮಿ ಯೋಜನೆಯ (Gruha Lakshmi scheme) 2 ಸಾವಿರ ರೂಪಾಯಿಯ ಲಾಭವನ್ನು ಇಂದು ಲಕ್ಷಾಂತರ ಮಹಿಳೆಯರು ಪಡೆದುಕೊಳ್ಳುತ್ತಿದ್ದಾರೆ. ಈಗಾಗಲೇ ಗೃಹಲಕ್ಷ್ಮಿ ಯೋಜನೆ ಸೌಲಭ್ಯ ಪಡೆಯಲು ಅರ್ಹತೆ ಹೊಂದಿ ನಾಲ್ಕು ಕಂತು ಜಮೆಯಾಗಿದ್ದು, ಐದನೇ ಕಂತಿನ ಹಣ ಜಮೆಯಾಗುತ್ತಿದೆ. ಆದರೆ, ಕೆಲವರಿಗೆ ತಮ್ಮ ಖಾತೆಗೆ ಹಣ ಬಂದಿದೆಯೇ? ಇಲ್ಲವೇ? ಎಂಬುದನ್ನು ತಿಳಿಯಲು ಸಾಧ್ಯವಾಗುತ್ತಿಲ್ಲ. ನೆಟ್‌ ಬ್ಯಾಂಕಿಂಗ್‌, ಮೊಬೈಲ್‌ ಬ್ಯಾಂಕಿಂಗ್‌ ವ್ಯವಸ್ಥೆಗಳನ್ನು ಇಟ್ಟುಕೊಳ್ಳದ ಕೆಲವರು ಇದರ ಬಗ್ಗೆ ಮಾಹಿತಿ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಈ ಸಂಬಂಧ ಆಗಾಗ ಬ್ಯಾಂಕ್‌ಗೆ ಹೋಗಿ ಬರುವವರೂ ಇದ್ದಾರೆ. ಇಂಥವರಿಗೆ ತಮ್ಮ ಖಾತೆಗೆ ಗೃಹ ಲಕ್ಷ್ಮಿ ಹಣ ಜಮೆಯಾಗಿದೆಯೇ ಎಂಬುದನ್ನು ಸುಲಭವಾಗಿ ನೋಡಲು ಇಲ್ಲಿ ಸರಳ ವಿಧಾನವನ್ನು ನೀಡಲಾಗಿದೆ.

ಇನ್ನೂ ಖಾತೆಗೆ ಹಣ ಬರದೇ ಇದ್ದರೆ ಏನು ಮಾಡಬೇಕು?

ಮಹಿಳಾ ಫಲಾನುಭವಿಗಳು ಗೃಹ ಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಲು ಅರ್ಹರಿದ್ದೂ ಈವರೆಗೆ ಒಂದು ಕಂತೂ ಸಹ ಸಿಗದೇ ಇದ್ದರೆ, ನೀವು ಕೊಟ್ಟಿರುವ ಬ್ಯಾಂಕ್‌ ಖಾತೆಗೆ ಮತ್ತೊಮ್ಮೆ ಕೆವೈಸಿ ಮಾಡಿಸಬೇಕು. ಅಂದರೆ, ಬ್ಯಾಂಕ್‌ ಖಾತೆಗೆ ಮತ್ತೊಮ್ಮೆ ಆಧಾರ್‌ ಸೀಡಿಂಗ್‌ ಅನ್ನು ಮಾಡಿಸಿಕೊಳ್ಳಿ ಆಗ ಹಣ ಜಮೆಯಾಗಲಿದೆ. ಉಳಿದಂತೆ ಜಮೆಯಾಗುತ್ತಿರುವವರಿಗೆ ಪ್ರತಿ ತಿಂಗಳು 13ನೇ ತಾರೀಖಿನಿಂದ 20ನೇ ತಾರೀಖಿನ ಒಳಗೆ ಗೃಹ ಲಕ್ಷ್ಮಿ ಹಣ ಜಮೆ ಆಗುತ್ತದೆ.

ಗೃಹ ಲಕ್ಷ್ಮಿ ಹಣ ಬಂದಿದೆಯೇ ಎಂದು ತಿಳಿಯೋದು ಹೇಗೆ?

ಗೃಹಲಕ್ಷ್ಮಿ ಯೋಜನೆಯಲ್ಲಿ ಫಲಾನುಭವಿಗಳು ಪ್ರತಿ ತಿಂಗಳು 2,000 ರೂಪಾಯಿಯನ್ನು ಪಡೆಯುತ್ತಾರೆ. ಇಲ್ಲಿ ಅವರ ಖಾತೆಗೆ ನೇರವಾಗಿ ಹಣ ಜಮೆಯಾಗಲಿದೆ. ಕೆಲವೊಮ್ಮೆ ಖಾತೆಗೆ ಹಣ ಜಮೆಯಾಗಿದ್ದರ ಬಗ್ಗೆ ಮೊಬೈಲ್‌ಗೆ ಎಸ್‌ಎಂಎಸ್‌ ಬರುತ್ತದೆ. ಹಲವು ಬಾರಿ ಎಸ್‌ಎಂಎಸ್‌ ಬರುವುದಿಲ್ಲ. ಇಂತಹ ಸಮಯದಲ್ಲಿ ಮನೆಯಲ್ಲೇ ಕುಳಿತು ಚೆಕ್‌ ಮಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ತಿಳಿದುಕೊಳ್ಳಬಹುದು.

ಅವರು ಪಡೆದ ಅಥವಾ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೋ ಎಂದು ಅವರಿಗೆ ತಿಳಿಯುದಿಲ್ಲ. ಇದೀಗ ರಾಜ್ಯ ಸರ್ಕಾರ ಆ ಒಂದು ಸಮಸ್ಯೆಯನ್ನು ಪರಿಹರಿಸಿದೆ. ನಿಮ್ಮ ಮೊಬೈಲ್ ಮೂಲಕವೇ ರೇಷನ್ ಕಾರ್ಡ್ ನಂಬರ್ ( Ration Card Number ) ಬಳಸಿ ಹಣ ಜಮಾ ಅಥವಾ ಅರ್ಜಿ ಸಲ್ಲಿಸಿದ ವಿವರ ತಿಳಿಯಬಹುದು.

gruha lakshmi scheme website

ಹಣ ಜಮೆಯ ಬಗ್ಗೆ ಹೀಗೆ ತಿಳಿಯಿರಿ

ಮೊದಲಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಆಗ ರಾಜ್ಯ ಸರ್ಕಾರದ ಅಧಿಕೃತ ಇ- ಆಡಳಿತ ವಿಭಾಗದ ಮಾಹಿತಿ ಕಣಜ‌ ವೆಬ್‌ಸೈಟ್‌ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಎಡಭಾಗದಲ್ಲಿ “ಗೃಹಲಕ್ಷ್ಮಿ ಅಪ್ಲಿಕೇಶನ್ ಸ್ಥಿತಿ” ಎಂಬ ಆಯ್ಕೆ ಇದ್ದು, ಅದರ ಮೇಲೆ ಕ್ಲಿಕ್‌ ಮಾಡಿ.

ಬಳಿಕ ಅರ್ಜಿದಾರರ ರೇಷನ್ ಕಾರ್ಡ್ ನಂಬ‌ರ್ (ಇದು 12 ಅಂಕಿ ಇರುತ್ತದೆ) ಅನ್ನು ಸರಿಯಾಗಿ ನಮೂದಿಸಬೇಕು. ಬಳಿಕ ಅಲ್ಲೇ ಇರುವ “Submit” ಬಟನ್ ಮೇಲೆ ಕ್ಲಿಕ್ ಮಾಡಿ.

ಆಗ ಇನ್ನೊಂದು ಪುಟ ತೆರೆದುಕೊಳ್ಳಲಿದ್ದು, ಅಲ್ಲಿ ನೀವು ಅರ್ಜಿ ಸಲ್ಲಿಸಿದ ದಿನಾಂಕ (Applied date), ನಿಮ್ಮ ಅರ್ಜಿ ಸ್ಥಿತಿ (Status), ಅರ್ಜಿ ಅನುಮೋದನೆಗೊಂಡ ದಿನಾಂಕ (Approved date) ಮತ್ತು ಕೊನೆಯದಾಗಿ ಯಾವ ದಿನ ಹಣ ವರ್ಗಾವಣೆ ಆಗಿದೆ ಎಂವ ವಿವರ (Payment date and amount) ಎಂದು ತೋರಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ “Details” ಬಟನ್ ಮೇಲೆ ಕ್ಲಿಕ್ ಮಾಡಿ.

ಆಗ ಗೃಹಲಕ್ಷ್ಮಿ ಯೋಜನೆಯಡಿ ಯಾವ ಯಾವ ತಿಂಗಳು ಯಾವ ದಿನಾಂಕಕ್ಕೆ 2000 ರೂಪಾಯಿ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂಬ ಮಾಹಿತಿಯು ತೋರಿಸುತ್ತದೆ. ಈ ಮೂಲಕ ನೀವು ಗೃಹ ಲಕ್ಷ್ಮಿ ಯೋಜನೆ ಅಡಿ ಖಾತೆಗೆ ಹಣ ಬಂದಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

Exit mobile version