Site icon Vistara News

Book On Narendra Modi : ದಿ ಮೇಕರ್‌ ಆಫ್‌ ನ್ಯೂ ಇಂಡಿಯಾ; ಮೋದಿ ಬಗ್ಗೆ ಬ್ರೈಲ್‌ ಲಿಪಿ ಪುಸ್ತಕ ಬಿಡುಗಡೆ

Book on Narendra Modi in Brail Script

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಮತ್ತು ಸಾಧನೆ ಕುರಿತು ಬ್ರೈಲ್‌ ಲಿಪಿಯಲ್ಲಿ ಬರೆಯಲಾದ (Book on Narendra Modi) ‘ಎ ಪ್ರಾಮಿಸ್ಡ್ ನೇಷನ್ ಹಾನರೇಬಲ್‌ ಶ್ರೀ ನರೇಂದ್ರ ಮೋದಿ- ದಿ ಮೇಕರ್ ಆಫ್ ನ್ಯೂ ಇಂಡಿಯಾ’ (A Promised Nation Hon’ble Shri Narendra Modi- the Maker of New India) ಪುಸ್ತಕವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಡುಗಡೆ ಮಾಡಿದರು. ವಿಜಯ ಸಂಕೇಶ್ವರ್‌ ಮಾಲೀಕತ್ವ ಮತ್ತು ಆನಂದ ಸಂಕೇಶ್ವರ್‌ ಸಾರಥ್ಯದಲ್ಲಿ ಮುನ್ನಡೆಯುತ್ತಿರುವ ವಿಆರ್‌ಎಲ್‌ ಲಾಜಿಸ್ಟಿಕ್ಸ್‌ (VRL Logistics) ಪ್ರಕಾಶನದಲ್ಲಿ ಪ್ರಕಟವಾದ ಪುಸ್ತಕ ಇದಾಗಿದೆ. ಈ ಪುಸ್ತಕದ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಅವರು ಸಂತಸ ವ್ಯಕ್ತಪಡಿಸಿ ಇದು ಹುಬ್ಬಳ್ಳಿಗೆ ಹಿರಿಮೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಹತ್ತು ವರ್ಷಗಳಲ್ಲಿ ನಮ್ಮ ನಾಗರಿಕತೆಯ ಮೌಲ್ಯಗಳನ್ನು, ಸಾಂಸ್ಕೃತಿಕ ಮೌಲ್ಯಗಳನು ಪುನಶ್ಚೇತನಗೊಳಿಸುವ ಮೂಲಕ ನವಭಾರತ ನಿರ್ಮಾಣದ ಝಲಕ್‌ ತೋರಿಸಿದ್ದಾರೆ. ಈ ಪುಸ್ತಕವು ಮೋದಿ ಅವರ ಬದುಕಿನ ಪಯಣ ಮತ್ತು ಅವರು ಮಾಡಿರುವ ಕ್ರಾಂತಿಕಾರಿ ಬದಲಾವಣೆಗಳನ್ನು ಕಣ್ಣಿಲ್ಲದವರೂ ಓದಿ ಅರ್ಥೈಸಿಕೊಳ್ಳಲು ಸಾಧ್ಯವಾಗಿಸುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು. ಇದನ್ನೇ ಅವರು ತಮ್ಮ ಟ್ವಿಟರ್‌ನಲ್ಲೂ ಬರೆದುಕೊಂಡಿದ್ದಾರೆ. ಈ ಪುಸ್ತಕದ ಪ್ರಕಾಶಕರಿಗೆ ಶುಭಾಶಯಗಳು ಎಂದು ಹೇಳಿದ್ದಾರೆ.

Book on Narendra Modi: ಹುಬ್ಬಳ್ಳಿಯ ಹೆಮ್ಮೆ ಎಂದ ಸಚಿವ ಪ್ರಲ್ಹಾದ್‌ ಜೋಶಿ

ಪ್ರಧಾನಿ ನರೇಂದ್ರ ಮೋದಿ ಜೀವನ ಮತ್ತು ಕೃತಿಗಳ ಕುರಿತು ಬ್ರೈಲ್ ಲಿಪಿಯಲ್ಲಿ ಬರೆಯಲಾದ ಕೃತಿಯ ಪ್ರಕಾಶಕರು ಹುಬ್ಬಳ್ಳಿಯವರು ಎಂಬುದೇ ನಮಗೆ ಹೆಮ್ಮೆಯ ಸಂಗತಿ. ಈ ಪುಸ್ತಕವನ್ನು ನಮ್ಮ ಹುಬ್ಬಳ್ಳಿಯ ವಿಆರ್‌ಎಲ್‌ ಲಾಜಿಸ್ಟಿಕ್ಸ್ ಲಿಮಿಟೆಡ್ (VRL Logistics Ltd) ಪ್ರಕಟಿಸಿದೆ ಎಂದು ಧಾರವಾಡ ಸಂಸದರೂ ಆಗಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟ್ವೀಟರ್ ನಲ್ಲಿ ಅಭಿಮಾನ ವ್ಯಕ್ತಪಡಿಸಿದ್ದಾರೆ.

ಬ್ರೈಲ್ ಲಿಪಿಯಲ್ಲಿ ಬರೆಯಲಾಗಿರುವ ಈ ಪುಸ್ತಕವು ದೃಷ್ಟಿಹೀನ ಜನರಿಗೆ ಮೋದಿ ಅವರ ಜೀವನ ಪಯಣದ ಬಗ್ಗೆ ತಿಳಿಯಲು ಸಹಾಯ ಮಾಡುತ್ತದೆ. ಈ ಮಹತ್ತರ ಹೆಜ್ಜೆಯಲ್ಲಿ ನಮ್ಮ ಹುಬ್ಬಳ್ಳಿಯೂ ಒಂದು ಭಾಗವಾಗಿರುವುದು ಹೆಮ್ಮೆಯ ವಿಚಾರ ಎಂದು ಪ್ರಹ್ಲಾದ ಜೋಶಿ ಸಂತಸ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : Pralhad Joshi : ರಾಜ್ಯಕ್ಕೆ ಹೆಚ್ಚುವರಿ ರಾ.ಹೆ. ಪ್ರಾದೇಶಿಕ ಕಚೇರಿ;‌ ಗಡ್ಕರಿ ಮುಂದೆ ಪ್ರಲ್ಹಾದ್‌ ಜೋಶಿ ಬೇಡಿಕೆ

Exit mobile version