Site icon Vistara News

ಇಸ್ಪೀಟ್ ಆಡಿದ್ದ ಇನ್ಸ್‌ಪೆಕ್ಟರ್‌ ಸೇರಿ ನಾಲ್ವರು ಪೊಲೀಸರು ಅಮಾನತು

ಇಸ್ಪೀಟ್ ಆಡಿದ್ದ ಪೊಲೀಸ್

ಹುಬ್ಬಳ್ಳಿ: ಇಸ್ಪೀಟ್ ಆಡುತ್ತಿದ್ದ ಪೊಲೀಸ್ ಇನ್‌ಸ್ಪೆಕ್ಟರ್‌ ಸೇರಿ ನಾಲ್ವರನ್ನು ಅಮಾನತು ಮಾಡಲಾಗಿದೆ. ಅಕ್ಷಯ ಕಾಲನಿಯ ಮನೆಯಲ್ಲಿ ಆರೋಪಿತರು ಇಸ್ಪೀಟ್ ಆಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಗೋಕುಲ ರಸ್ತೆ ಠಾಣೆ ಇನ್ಸ್‌ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ಶುಕ್ರವಾರ ರಾತ್ರಿ ದಾಳಿ ನಡೆಸಿದ್ದರು.

ಇದೀಗ ಆರೋಪಿಗಳನ್ನು ಅಮಾನತುಗೊಳಿಸುವುದಾಗಿ ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ್ ಆದೇಶ ನೀಡಿದ್ದಾರೆ.

ಹುಬ್ಬಳ್ಳಿ-ಧಾರವಾಡ ಸಿಎಆರ್ ರಿಸರ್ವ್ ಪೊಲೀಸ್ ಇನ್‌ಸ್ಪೆಕ್ಟರ್ ಸಂತೋಷ ಬೋಜಪ್ಪಗೋಳ, ಸಿಎಆರ್ ಹೆಡ್‌ ಕಾನ್‌ಸ್ಟೇಬಲ್‌ಗಳಾದ ಮುತ್ತಪ್ಪ ಕಾಟನಾಯಕ, ನವೀನ ತೋಪಲಕಟ್ಟಿ, ಪೂರ್ವ ಸಂಚಾರ ಠಾಣೆಯ ಕಾನ್‌ಸ್ಟೇಬಲ್‌ ಬಸವಣ್ಯಪ್ಪ ಬಾವಿಹಾಳ ಅಮಾನತುಗೊಂಡಿದ್ದಾರೆ.

ಇದನ್ನೂ ಓದಿ | Police Suspend | ಶಿರಾಡಿ ಘಾಟ್‌ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ಲೋಪ; 6 ಪೊಲೀಸರ ಅಮಾನತು

Exit mobile version