ಹುಬ್ಬಳ್ಳಿ: ದೇಶದಲ್ಲಿ ನಮ್ಮ ಸನಾತನ ಹಿಂದೂ ಧರ್ಮದ ಉಳಿವಿಗಾಗಿ ಇಂದು ನರೇಂದ್ರ ಮೋದಿ ಅವರ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Lok Sabha Election 2024) ಪ್ರತಿಪಾದಿಸಿದರು.
ನಗರದ ಉಣಕಲ್‌ನಲ್ಲಿ ಬುಧವಾರ ರಾತ್ರಿ ಆಯೋಜಿಸಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ನೇಹಾ ಹಿರೇಮಠ್‌ಗೆ ಶ್ರದ್ಧಾಂಜಲಿ ಸಲ್ಲಿಸಿ, ಬಳಿಕ ಅವರು ಮಾತನಾಡಿದರು.
ಬಹುಸಂಖ್ಯಾತರ ದೇಶದಲ್ಲೇ ಇಂದು ಬಹುಸಂಖ್ಯಾತರಿಗೆ ಸುರಕ್ಷತೆ ಬೇಕಾಗಿದೆ. ಅವರವರ ಧರ್ಮಾಚರಣೆಗೆ ಸ್ವಾತಂತ್ರ್ಯ ಬೇಕಾಗಿದೆ ಎಂದು ಹೇಳಿದರು.
ಇದನ್ನೂ ಓದಿ: 2nd PUC Exam: ಏ.29ರಿಂದ ದ್ವಿತೀಯ ಪಿಯುಸಿ ಪರೀಕ್ಷೆ-2; ಪ್ರವೇಶ ಪತ್ರ ಬಿಡುಗಡೆ
ದೇಶವಾಸಿಗಳಲ್ಲಿ ಧಾರ್ಮಿಕ ನಂಬಿಕೆ ಉಳಿಸುವ ಕೆಲಸವಾಗಬೇಕಿದೆ. ಮತಾಂತರದಂತಹ ಅಹಿತಕರ ಚಟುವಟಿಕೆಗಳಿಂದ ಹಿಂದೂಗಳನ್ನು, ಹಿಂದೂ ಮಹಿಳೆಯರನ್ನು ರಕ್ಷಿಸುವ ಕಾರ್ಯ ಅವಶ್ಯವಾಗಿದೆ. ಧಾರ್ಮಿಕ ಅನುಸರಣೆಗೆ ಸ್ವಾತಂತ್ರ್ಯದ ಅಗತ್ಯವಿದೆ. ಇದಕ್ಕಾಗಿ ಮತ್ತೆ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರಲೇಬೇಕಿದೆ ಎಂದು ಹೇಳಿದರು
ಕಂಡಿರಲಿಲ್ಲ ಇಷ್ಟೊಂದು ಕ್ರೂರ ಹತ್ಯೆ
ನೇಹಾಳಷ್ಟು ಕ್ರೂರ ಹತ್ಯೆಯನ್ನು ಯಾವತ್ತೂ ಕಂಡಿರಲಿಲ್ಲ. ಆರೋಪಿ ಫಯಾಜ್ ಅಷ್ಟೊಂದು ಅಮಾನವೀಯವಾಗಿ ಆಕೆಗೆ 10-14 ಬಾರಿ ಚೂರಿ ಇರಿದು ಕೊಂದಿದ್ದಾನೆ. ಹಾಗಿದ್ದರೂ ರಾಜ್ಯ ಸರ್ಕಾರಕ್ಕೆ ಸ್ವಲ್ಪವೂ ಕನಿಕರವಿಲ್ಲ ಎಂದು ಸಚಿವ ಜೋಶಿ ವಾಗ್ದಾಳಿ ನಡೆಸಿದರು.
ದೇಶಾದ್ಯಂತ ನೇಹಾ ಹತ್ಯೆ ಪ್ರಕರಣ ಪ್ರತಿಧ್ವನಿಸಿದ್ದರಿಂದ ರಾಜ್ಯ ಸರ್ಕಾರ ಸದ್ಯ ಸಿಐಡಿಗೆ ವಹಿಸಿ ನೇಹಾ ಕುಟುಂಬದ ಕಣ್ಣೊರೆಸೋ ಕೆಲಸ ಮಾಡಿದೆ ಅಷ್ಟೇ. ನಿಜವಾಗಿಯೂ ಕಾಂಗ್ರೆಸ್ಸಿಗರಿಗೆ ಕರುಣೆ, ಕಾಳಜಿ ಎಂಬುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: Sachin Tendulkar Birthday: ಎಐ ತಂತ್ರಜ್ಞಾನದ ಮೂಲಕ ತೆಂಡೂಲ್ಕರ್ಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಐಸಿಸಿ
ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇದ್ದರೆ ಮಾತ್ರ ಭಾರತ ವಿಶ್ವಗುರು ಆಗಲು ಸಾಧ್ಯ. ಜನರೂ ಇದನ್ನು ಮನಗಂಡಿದ್ದಾರೆ ಎಂದ ಸಚಿವರು, ಮತ್ತೆ ಕಮಲದ ಗುರುತಿಗೆ ಮತ ನೀಡುವ ಮೂಲಕ ಮೋದಿ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಪ್ರಚಾರ ಸಭೆಯ ಆರಂಭಕ್ಕೂ ಮುನ್ನ ಮತಾಂಧನಿಂದ ಹತ್ಯೆಯಾದ ನೇಹಾ ಹಿರೇಮಠ್‌ಗೆ ಶ್ರದ್ಧಾಂಜಲಿ ಅರ್ಪಿಸಿ, ಆತ್ಮಕ್ಕೆ ಶಾಂತಿ ಕೋರಲಾಯಿತು.
ಇದನ್ನೂ ಓದಿ: Road Accident: ಕಾರು ಟಯರ್ ಬ್ಲಾಸ್ಟ್ ಆಗಿ ಬೈಕ್‌ಗೆ ಡಿಕ್ಕಿ; ಇಬ್ಬರು ಸವಾರರ ದುರ್ಮರಣ
ಸಭೆಯಲ್ಲಿ ಬಿಜೆಪಿ ಪ್ರಮುಖರಾದ ರಾಜಣ್ಣ ಕೊರವಿ, ಉಮೇಶ್ ಗೌಡ ಕೌಜಗಿರಿ, ಮಹಾದೇವಪ್ಪ ಮೆಣಸಿನಕಾಯಿ, ಸೋಮನಗೌಡ ಪಾಟೀಲ್, ಪರಶುರಾಮ ಹೊಂಬಾಲ, ರಾಮಣ್ಣ ಕೊಕ್ಕಟಿ, ಶೇಕಣ್ಣ ಸೂರ್ಯವಂಶಿ, ಮೋಹನ್ ಬಡಿಗೇರ, ಯಲ್ಲಪ್ಪ ಕಡಪಟ್ಟಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.