Lok Sabha Election 2024: ಹಿಂದೂ ಧರ್ಮದ ಉಳಿವಿಗಾಗಿ ಮತ್ತೆ ಮೋದಿ ಬೆಂಬಲಿಸಿ: ಪ್ರಲ್ಹಾದ್‌ ಜೋಶಿ - Vistara News

ಹುಬ್ಬಳ್ಳಿ

Lok Sabha Election 2024: ಹಿಂದೂ ಧರ್ಮದ ಉಳಿವಿಗಾಗಿ ಮತ್ತೆ ಮೋದಿ ಬೆಂಬಲಿಸಿ: ಪ್ರಲ್ಹಾದ್‌ ಜೋಶಿ

Lok Sabha Election 2024: ದೇಶಾದ್ಯಂತ ನೇಹಾ ಹತ್ಯೆ ಪ್ರಕರಣ ಪ್ರತಿಧ್ವನಿಸಿದ್ದರಿಂದ ರಾಜ್ಯ ಸರ್ಕಾರ ಸದ್ಯ ಸಿಐಡಿಗೆ ವಹಿಸಿ ನೇಹಾ ಕುಟುಂಬದ ಕಣ್ಣೊರೆಸೋ ಕೆಲಸ ಮಾಡಿದೆ ಅಷ್ಟೇ. ನಿಜವಾಗಿಯೂ ಕಾಂಗ್ರೆಸ್ಸಿಗರಿಗೆ ಕರುಣೆ, ಕಾಳಜಿ ಎಂಬುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದ್ದಾರೆ.

VISTARANEWS.COM


on

Union Minister Pralhad Joshi Statement in Unakal
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹುಬ್ಬಳ್ಳಿ: ದೇಶದಲ್ಲಿ ನಮ್ಮ ಸನಾತನ ಹಿಂದೂ ಧರ್ಮದ ಉಳಿವಿಗಾಗಿ ಇಂದು ನರೇಂದ್ರ ಮೋದಿ ಅವರ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Lok Sabha Election 2024) ಪ್ರತಿಪಾದಿಸಿದರು.

ನಗರದ ಉಣಕಲ್‌ನಲ್ಲಿ ಬುಧವಾರ ರಾತ್ರಿ ಆಯೋಜಿಸಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ನೇಹಾ ಹಿರೇಮಠ್‌ಗೆ ಶ್ರದ್ಧಾಂಜಲಿ ಸಲ್ಲಿಸಿ, ಬಳಿಕ ಅವರು ಮಾತನಾಡಿದರು.

ಬಹುಸಂಖ್ಯಾತರ ದೇಶದಲ್ಲೇ ಇಂದು ಬಹುಸಂಖ್ಯಾತರಿಗೆ ಸುರಕ್ಷತೆ ಬೇಕಾಗಿದೆ. ಅವರವರ ಧರ್ಮಾಚರಣೆಗೆ ಸ್ವಾತಂತ್ರ್ಯ ಬೇಕಾಗಿದೆ ಎಂದು ಹೇಳಿದರು.

ಇದನ್ನೂ ಓದಿ: 2nd PUC Exam: ಏ.29ರಿಂದ ದ್ವಿತೀಯ ಪಿಯುಸಿ ಪರೀಕ್ಷೆ-2; ಪ್ರವೇಶ ಪತ್ರ ಬಿಡುಗಡೆ

ದೇಶವಾಸಿಗಳಲ್ಲಿ ಧಾರ್ಮಿಕ ನಂಬಿಕೆ ಉಳಿಸುವ ಕೆಲಸವಾಗಬೇಕಿದೆ. ಮತಾಂತರದಂತಹ ಅಹಿತಕರ ಚಟುವಟಿಕೆಗಳಿಂದ ಹಿಂದೂಗಳನ್ನು, ಹಿಂದೂ ಮಹಿಳೆಯರನ್ನು ರಕ್ಷಿಸುವ ಕಾರ್ಯ ಅವಶ್ಯವಾಗಿದೆ. ಧಾರ್ಮಿಕ ಅನುಸರಣೆಗೆ ಸ್ವಾತಂತ್ರ್ಯದ ಅಗತ್ಯವಿದೆ. ಇದಕ್ಕಾಗಿ ಮತ್ತೆ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರಲೇಬೇಕಿದೆ ಎಂದು ಹೇಳಿದರು

ಕಂಡಿರಲಿಲ್ಲ ಇಷ್ಟೊಂದು ಕ್ರೂರ ಹತ್ಯೆ

ನೇಹಾಳಷ್ಟು ಕ್ರೂರ ಹತ್ಯೆಯನ್ನು ಯಾವತ್ತೂ ಕಂಡಿರಲಿಲ್ಲ. ಆರೋಪಿ ಫಯಾಜ್ ಅಷ್ಟೊಂದು ಅಮಾನವೀಯವಾಗಿ ಆಕೆಗೆ 10-14 ಬಾರಿ ಚೂರಿ ಇರಿದು ಕೊಂದಿದ್ದಾನೆ. ಹಾಗಿದ್ದರೂ ರಾಜ್ಯ ಸರ್ಕಾರಕ್ಕೆ ಸ್ವಲ್ಪವೂ ಕನಿಕರವಿಲ್ಲ ಎಂದು ಸಚಿವ ಜೋಶಿ ವಾಗ್ದಾಳಿ ನಡೆಸಿದರು.

ದೇಶಾದ್ಯಂತ ನೇಹಾ ಹತ್ಯೆ ಪ್ರಕರಣ ಪ್ರತಿಧ್ವನಿಸಿದ್ದರಿಂದ ರಾಜ್ಯ ಸರ್ಕಾರ ಸದ್ಯ ಸಿಐಡಿಗೆ ವಹಿಸಿ ನೇಹಾ ಕುಟುಂಬದ ಕಣ್ಣೊರೆಸೋ ಕೆಲಸ ಮಾಡಿದೆ ಅಷ್ಟೇ. ನಿಜವಾಗಿಯೂ ಕಾಂಗ್ರೆಸ್ಸಿಗರಿಗೆ ಕರುಣೆ, ಕಾಳಜಿ ಎಂಬುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: Sachin Tendulkar Birthday: ಎಐ ತಂತ್ರಜ್ಞಾನದ ಮೂಲಕ ತೆಂಡೂಲ್ಕರ್​ಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಐಸಿಸಿ

ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇದ್ದರೆ ಮಾತ್ರ ಭಾರತ ವಿಶ್ವಗುರು ಆಗಲು ಸಾಧ್ಯ. ಜನರೂ ಇದನ್ನು ಮನಗಂಡಿದ್ದಾರೆ ಎಂದ ಸಚಿವರು, ಮತ್ತೆ ಕಮಲದ ಗುರುತಿಗೆ ಮತ ನೀಡುವ ಮೂಲಕ ಮೋದಿ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಪ್ರಚಾರ ಸಭೆಯ ಆರಂಭಕ್ಕೂ ಮುನ್ನ ಮತಾಂಧನಿಂದ ಹತ್ಯೆಯಾದ ನೇಹಾ ಹಿರೇಮಠ್‌ಗೆ ಶ್ರದ್ಧಾಂಜಲಿ ಅರ್ಪಿಸಿ, ಆತ್ಮಕ್ಕೆ ಶಾಂತಿ ಕೋರಲಾಯಿತು.

ಇದನ್ನೂ ಓದಿ: Road Accident: ಕಾರು ಟಯರ್‌ ಬ್ಲಾಸ್ಟ್ ಆಗಿ ಬೈಕ್‌ಗೆ ಡಿಕ್ಕಿ; ಇಬ್ಬರು ಸವಾರರ ದುರ್ಮರಣ

ಸಭೆಯಲ್ಲಿ ಬಿಜೆಪಿ ಪ್ರಮುಖರಾದ ರಾಜಣ್ಣ ಕೊರವಿ, ಉಮೇಶ್ ಗೌಡ ಕೌಜಗಿರಿ, ಮಹಾದೇವಪ್ಪ ಮೆಣಸಿನಕಾಯಿ, ಸೋಮನಗೌಡ ಪಾಟೀಲ್, ಪರಶುರಾಮ ಹೊಂಬಾಲ, ರಾಮಣ್ಣ ಕೊಕ್ಕಟಿ, ಶೇಕಣ್ಣ ಸೂರ್ಯವಂಶಿ, ಮೋಹನ್ ಬಡಿಗೇರ, ಯಲ್ಲಪ್ಪ ಕಡಪಟ್ಟಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : ಇಂದು ಮಳೆ ಬರುತ್ತಾ? ಯಾವ ಜಿಲ್ಲೆಗಳಲ್ಲಿದೆ ಹೀಟ್‌ ವೇವ್‌?

ರಾಜ್ಯಾದ್ಯಂತ ಹಲವೆಡೆ ಹಗುರದಿಂದ ಕೂಡಿದ ಮಳೆಯಾಗುವ (Rain News) ಸಾಧ್ಯತೆ ಇದೆ ಎನ್ನಲಾಗಿದೆ. ಇದರೊಟ್ಟಿಗೆ ಮೇ. 8ರವರೆಗೆ ಹೀಟ್‌ ವೇವ್‌ (Heat Wave) ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

VISTARANEWS.COM


on

By

karnataka Weather Forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ರಾಜ್ಯಾದ್ಯಂತ ಶುಷ್ಕ ವಾತಾವರಣ ಇದ್ದರೂ ಕೆಲವೆಡೆ ಸಾಧಾರಣ ಮಳೆಯಾಗುವ (Rain News) ಸಾಧ್ಯತೆ ಇದೆ. ಸೋಮವಾರದಂದು ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು, ಹಾಸನ, ಚಾಮರಾಜನಗರ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕೆಲವೆಡೆ ಸಾಧಾರಣ ಮಳೆಯೊಂದಿಗೆ ಗುಡುಗು ಸಾಥ್‌ (Karnataka Weather Forecast) ನೀಡಲಿದೆ.

ಈ ಜಿಲ್ಲೆಗಳಲ್ಲಿ ಬಿಸಿ ಬಿಸಿ ವಾತಾವರಣ

ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಶಾಖದ ಅಲೆಯ ವಾತಾವರಣವು ಹೆಚ್ಚಾಗುವ ಸಾಧ್ಯತೆ ಇದೆ. ಮುಂದಿನ 3 ದಿನಗಳವರೆಗೆ ಕರಾವಳಿಯಲ್ಲಿ ಬಿಸಿ ಮತ್ತು ಆರ್ದ್ರತೆಯ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ.

ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಸಂಜೆ ಅಥವಾ ರಾತ್ರಿಯಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 39 ಮತ್ತು 24 ಡಿ.ಸೆ ಇರಲಿದೆ.

ಇದನ್ನೂ ಓದಿ: Torn Jeans Styling Tips: ಟೊರ್ನ್‌ ಜೀನ್ಸ್‌ ಪ್ಯಾಂಟ್‌ ಪ್ರಿಯರು ನೆನಪಿನಲ್ಲಿಟ್ಟುಕೊಳ್ಳಬೇಕಾದ 5 ಪ್ರಮುಖ ಸಂಗತಿಗಳು

ಬಿಸಿಲ ಬೇಗೆ ತಣಿಸಿಕೊಳ್ಳಲು ಬೇಕು ನೆಲ್ಲಿಕಾಯಿ!

ದೇಹದ ಪ್ರತಿರೋಧಕ ಶಕ್ತಿಯನ್ನು ಕುಂದಿಸುವಂಥ ಹವಾಮಾನ ಯಾವುದೇ ದಿನಗಳಲ್ಲೂ ಎದುರಾಗಬಹುದು. ಅದಕ್ಕೇನು ಮಳೆಯೇ ಬೇಕು. ಚಳಿಯೇ ಇರಬೇಕು ಎಂದಿಲ್ಲ. ಈ ಬಿರು ಬೇಸಿಗೆಯಲ್ಲೂ ಕಾಟ ಕೊಡುವ ವೈರಸ್‌ಗಳು ತಪ್ಪುವುದಿಲ್ಲ. ಇದಕ್ಕಾಗಿ ಭದ್ರವಾದ ಪ್ರತಿರೋಧಕ ವ್ಯವಸ್ಥೆಯನ್ನ ನಮ್ಮ ದೇಹ ಹೊಂದಬೇಕಾಗುತ್ತದೆ. ಅದಿಲ್ಲದಿದ್ದರೆ ಬಿಸಿಲಾಘಾತ, ನಿರ್ಜಲೀಕರಣದಿಂದಲೂ ತಪ್ಪಿಸಿಕೊಳ್ಳುವುದಕ್ಕೆ ದೇಹ ಸೋಲುತ್ತದೆ. ಇಂಥ ದಿನಗಳಲ್ಲಿ ನಮ್ಮ ನೆರವಿಗೆ ಬರುವುದು ಹುಳಿ-ಸಿಹಿಯ ಬೆಟ್ಟದ ನೆಲ್ಲಿಕಾಯಿ. ವಿಟಮಿನ್‌ ಸಿ ಅಂಶವನ್ನು ಹೇರಳವಾಗಿ ತುಂಬಿಕೊಂಡಿರುವ ಈ ಪುಟ್ಟ ಕಾಯಿಗಳನ್ನು ಹಲವು ರೀತಿಯಲ್ಲಿ ಸೇವಿಸುವುದರಿಂದ ಬಿಸಿಲ ದಿನಗಳಲ್ಲಿ ದೇಹ ನಿತ್ರಾಣಗೊಳ್ಳದಂತೆ ಮತ್ತು ರೋಗನಿರೋಧಕ ಶಕ್ತಿ ಕುಂಠಿತವಾಗದಂತೆ (summer Health Tips) ಕಾಪಾಡಿಕೊಳ್ಳಬಹುದು. ಬಿಸಿಲಿನ ದಿನಗಳಿಗೆ ಪೂರಕವಾಗುವಂತೆ ನೆಲ್ಲಿಕಾಯಿಯನ್ನು ಬಳಸುವುದು ಹೇಗೆ?

pudina gooseberry juice

ಪುದೀನಾ-ನೆಲ್ಲಿ ಪಾನಕ

ವಿಟಮಿನ್‌ ಸಿ, ಇ ಮತ್ತು ಎ, ನಾರು ಹಾಗೂ ವಿಟಮಿನ್‌ ಬಿ1 ಸತ್ವಗಳನ್ನು ಈ ಪಾನಕ ಭರಪೂರ ತುಂಬಿಕೊಂಡಿರುತ್ತದೆ. ಬೇಸಿಗೆಯಲ್ಲಿ ಕಾಡುವ ಜೀರ್ಣಾಂಗಗಳ ಸಮಸ್ಯೆಯಿಂದ ಮುಕ್ತಿ ನೀಡುವಂಥ ಪೇಯವಿದು. ಬೆಟ್ಟದ ನೆಲ್ಲಿಕಾಯಿಗೆ ಚಿಟಿಕೆ ಉಪ್ಪು ಮತ್ತು ಪುದೀನಾ ಎಲೆಗಳನ್ನು ಸೇರಿಸಿ ರುಬ್ಬಿ, ರಸ ತೆಗೆಯಿರಿ. ಇದಕ್ಕೆ ರುಚಿಗೆ ತಕ್ಕಷ್ಟು ಬೆಲ್ಲ ಸೇರಿಸಿ ಅಥವಾ ಹಾಗೆಯೇ ಕುಡಿಯುವವರು ಅಂತೆಯೇ ಕುಡಿಯಬಹುದು.

ನೆಲ್ಲಿ ಸ್ಮೂದಿ

ಇದಕ್ಕಾಗಿ ಮೊಸರು, ಬಾಳೆಹಣ್ಣು, ಕೊಂಚ ಪಾಲಕ್‌ ಎಲೆಗಳು ಮತ್ತು ನೆಲ್ಲಿಕಾಯಿಯನ್ನು ಬ್ಲೆಂಡರ್‌ಗೆ ಹಾಕಿ ತಿರುಗಿಸಿ. ಇದರನ್ನು ಸೋಸಬಾರದು. ಎಲ್ಲ ನಾರಿನಂಶ ಇರುವಂತೆಯೇ ಸೇವಿಸಬೇಕು. ಇದರಿಂದ ಬಾಳೆಹಣ್ಣಿನಲ್ಲಿರುವ ಶರ್ಕರಪಿಷ್ಟಗಳು, ಮೊಸರಿನಲ್ಲಿರುವ ಕೊಬ್ಬು ಮತ್ತು ಪ್ರೊಬಯಾಟಿಕ್‌ ಅಂಶಗಳು, ಪಾಲಕ್‌ನಲ್ಲಿರುವ ಖನಿಜಗಳು ಎಲ್ಲವೂ ನೆಲ್ಲಿ ಕಾಯಿಯ ಜೊತೆಗೆ ಹೊಟ್ಟೆ ಸೇರುತ್ತವೆ. ತೂಕ ಇಳಿಸುವವರು ಇದನ್ನು ಬೆಳಗಿನ ಉಪಹಾರವಾಗಿಯೂ ಸೇವಿಸಬಹುದು.

ನೆಲ್ಲಿ ಸಲಾಡ್‌

ಬೇಸಿಗೆಯಲ್ಲಿ ತಂಪಾದ ಸಲಾಡ್‌ಗಳು ಎಲ್ಲರಿಗೂ ಇಷ್ಟವಾಗುವಂಥವು. ಅದರಲ್ಲೂ ಹುಳಿ-ಸಿಹಿ ರುಚಿಯ ಸಲಾಡ್‌ಗಳು ಮತ್ತೂ ಇಷ್ಟವಾಗುತ್ತವೆ. ಇದಕ್ಕಾಗಿ ನೆಲ್ಲಿಕಾಯಿಯ ಜೊತೆ ಸೌತೇಕಾಯಿ, ದಾಳಿಂಬೆ, ಸೇಬು ಮತ್ತು ಮೊಳಕೆ ಬರಿಸಿದ ಹೆಸರು ಕಾಳುಗಳನ್ನು ತೆಗೆದುಕೊಳ್ಳಿ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಬೇಕಿದ್ದರೆ ಕೊಂಚ ಕಾಳುಮೆಣಸಿನ ಪುಡಿ ಸೇರಿಸಿ. ನಿಮ್ಮ ರುಚಿಕರ ಸಲಾಡ್‌ ಸಿದ್ಧ.

Image Of Gooseberry Benefits

ನೆಲ್ಲಿ ಪಾಪ್ಸಿಕಲ್‌

ತಂಪಾದ ಏನನ್ನು ಕೊಟ್ಟರೂ ಕೈಯೊಡ್ಡುವಂಥ ಸ್ಥಿತಿ ಈ ಬೇಸಿಗೆಯಲ್ಲಿ. ಅದರಲ್ಲೂ ಫ್ರೋಜನ್‌ ತಿಂಡಿಗಳು ಮತ್ತೂ ಇಷ್ಟವಾಗುತ್ತವೆ. ಪಾಪ್ಸಿಕಲ್‌ ರೂಪದಲ್ಲಿ ನಮಗೆ ಪ್ರಿಯವಾದ್ದನ್ನು ಸವಿಯುವುದು ಬೇರೆಯದೇ ಸೊಗಸನ್ನು ನೀಡುತ್ತದೆ. ನೆಲ್ಲಿಕಾಯನ್ನು ರುಬ್ಬಿ ರಸ ತೆಗೆಯಿರಿ. ಇದಕ್ಕೆ ಕೊಂಚ ಜೇನುತುಪ್ಪ ಮತ್ತು ಸಿಹಿ ಮೊಸರು ಬೆರೆಸಿ. ಈ ಮಿಶ್ರಣವನ್ನು ಪಾಪ್ಸಿಕಲ್‌ ಅಚ್ಚಿಗೆ ಸುರಿಯಿರಿ. ಫ್ರೀಜ್‌ ಮಾಡಿ ತೆಗೆದು ಬಾಯಿ ಚಪ್ಪರಿಸಿದರಾಯಿತು.

ಡಿಟಾಕ್ಸ್‌ ನೀರು

ಬರೀ ನೀರು ಕುಡಿಯುವುದಕ್ಕೆ ಸಾಧ್ಯವಿಲ್ಲ ಎನಿಸಿದರೆ, ಐದು ಲೀ ಪಾತ್ರೆಯಲ್ಲಿ ಹತ್ತಿಪ್ಪತ್ತು ಪುದೀನಾ ಎಲೆಗಳು, ಸೌತೆಕಾಯಿ ಗಾಲಿಗಳು ಮತ್ತು ನೆಲ್ಲಿಯ ತುಂಡುಗಳನ್ನು ಧಾರಾಳವಾಗಿ ಸೇರಿಸಿ. ಒಂದೆರಡು ತಾಸು ಹಾಗೆಯೇ ಬಿಡಿ. ನಂತರ ದಿನವಿಡೀ ಈ ನೀರು ಕುಡಿದು ಸಂತೃಪ್ತಿಯಿಂದಿರಿ. ಇದರಿಂದ ಜೀರ್ಣಾಂಗಗಳ ಕ್ಷಮತೆ ಹೆಚ್ಚುತ್ತದೆ.

indian gooseberry

ನೆಲ್ಲಿ ಐಸ್‌ ಟೀ

ಆರೆಂಟು ಪುದೀನಾ ಚಿಗುರುಗಳ ಜೊತೆಗೆ ನೆಲ್ಲಿ ಕಾಯಿಯ ತುಣುಕುಗಳನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ಇದು ಆರಿದ ಮೇಲೆ ಕೊಂಚ ಜೇನುತುಪ್ಪ ಸೇರಿಸಿ, ಫ್ರಿಜ್‌ನಲ್ಲಿಡಿ. ಬೇಕಾದಾಗ ಈ ಈ ಪೇಯವನ್ನು ತೆಗೆದು, ಕುಡಿದು ಸಂಭ್ರಮಿಸಿ. ನೆಲ್ಲಿಕಾಯಿಯನ್ನು ಅತಿಯಾಗಿ ಸೇವಿಸುವುದೂ ಸಮಸ್ಯೆಗಳನ್ನು ತರಬಹುದು. ಈಗಾಗಲೇ ತೂಕ ಕಡಿಮೆ ಇರುವವರು ಇನ್ನೂ ತೂಕ ಇಳಿದ ನಿದಾರ್ಶನಗಳಿವೆ. ಹಾಗಾಗಿ ತೂಕ ಇಳಿಸುವವರು ಇದನ್ನು ಸೇವಿಸಿದಷ್ಟು, ಕಡಿಮೆ ತೂಕದವರಿಗೆ ಬೇಕಾಗುವುದಿಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Pralhad Joshi: ಕಾಂಗ್ರೆಸ್‌ನಿಂದ ಮೋದಿ ಎಂಬ ಆಕಾಶಕ್ಕೆ ಉಗುಳೋ ಕೃತ್ಯ: ಪ್ರಲ್ಹಾದ್ ಜೋಶಿ

Pralhad Joshi: ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ದೇಶದಲ್ಲಿ ಕಾಂಗ್ರೆಸ್ ಪಕ್ಷ ಧೂಳಿಪಟವಾಗಿದೆ. ರಾಹುಲ್ ಗಾಂಧಿ ಅಧಿಕೃತ ವಿರೋಧ ಪಕ್ಷದ ನಾಯಕರಾಗಲೂ ಶಕ್ತವಾಗಲಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹರಿಹಾಯ್ದಿದ್ದಾರೆ.

VISTARANEWS.COM


on

Pralhad Joshi
Koo

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಆಕಾಶ ಇದ್ದ ಹಾಗೆ. ಕಾಂಗ್ರೆಸಿಗರು ಆಕಾಶಕ್ಕೆ ಉಗುಳೋ ಕೃತ್ಯ ಮಾಡುತ್ತಿದ್ದಾರೆ. ಆಕಾಶಕ್ಕೆ ಮುಖ ಮಾಡಿ ಉಗುಳಿದರೆ ಅದು ತಮ್ಮ ಮುಖಕ್ಕೇ ಸಿಡಿಯುತ್ತದೆ ಎಂಬುದನ್ನು ಅರಿತುಕೊಳ್ಳಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಹರಿಹಾಯ್ದರು.

ಕಲಘಟಗಿಯಲ್ಲಿ ಭಾನುವಾರ ಬೃಹತ್ ರೋಡ್ ಶೋ ವೇಳೆ ಕಾಂಗ್ರೆಸ್ ನಾಯಕರ ವಿರುದ್ಧ ಅಬ್ಬರಿಸಿದ ಜೋಶಿ, ಸಂತೋಷ್ ಲಾಡ್ ಮೋದಿಗೆ ಬೈದರೆ ತಾವು ದೊಡ್ಡ ವ್ಯಕ್ತಿ ಆಗಬಹುದು ಎಂದುಕೊಂಡಿದ್ದಾರೆ. ಹಾಗಾಗಿ ಲಾಡ್ ಮತ್ತು ಸಿಎಂ ಸಿದ್ದರಾಮಯ್ಯ ಇಬ್ರೂ ಮೋದಿ ವಿರುದ್ಧ ಗುಡುಗುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಧೂಳಿಪಟ

ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ದೇಶದಲ್ಲಿ ಕಾಂಗ್ರೆಸ್ ಪಕ್ಷ ಧೂಳಿಪಟವಾಗಿದೆ. 2014ರಲ್ಲಿ 44 ಕ್ಷೇತ್ರ ಹಾಗೂ 2019ರಲ್ಲಿ 52 ಸೀಟುಗಳನ್ನಷ್ಟೇ ಗೆದ್ದುಕೊಂಡ ರಾಹುಲ್ ಗಾಂಧಿ ಅಧಿಕೃತ ವಿರೋಧ ಪಕ್ಷದ ನಾಯಕರಾಗಲೂ ಶಕ್ತವಾಗಲಿಲ್ಲ ಎಂದು ಹೇಳಿದರು.

ಆಸ್ತಿ ಸರ್ವೆ ಏಕೆ?

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಆಸ್ತಿ ಸರ್ವೇ ಪ್ರಕಟಿಸಿದೆ. ಅರ್ಧದಷ್ಟು ಆಸ್ತಿಯನ್ನು ವಶಕ್ಕೆ ಪಡೆದು ಹೆಚ್ಚು ಮಕ್ಕಳಿರುವ ಮುಸ್ಲಿಂರಿಗೆ ಹಂಚಲಿದೆ. ಈಗಲೇ ಎಚ್ಚರ ವಹಿಸಿ ಎಂದ ಜೋಷಿ ಅವರು, 2014ರಿಂದ ಮೋದಿ ನೇತೃತ್ವದಲ್ಲಿ ಆದ ದೇಶದ ಅಭಿವೃದ್ಧಿಯನ್ನು ಜಗತ್ತೇ ಗಮನಿಸಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಾದ ಅಭಿವೃದ್ಧಿ ಏನೆಂಬುದೂ ಕ್ಷೇತ್ರದ ಜನತೆಗೆ ಮನದಟ್ಟಾಗಿದೆ ಎಂದು ಹೇಳಿದರು.

ಇದನ್ನೂ ಓದಿ | Prajwal Revanna Case: ಪ್ರಜ್ವಲ್‌ಗೆ ವೋಟ್‌ ಹಾಕಿ ಎಂಬ ಸಿದ್ದರಾಮಯ್ಯ ಟ್ವೀಟ್‌; ಬಿಜೆಪಿಯಿಂದ ಫುಲ್‌ ಕ್ಲಾಸ್‌!

ಬಹಿರಂಗ ಪ್ರಚಾರ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ್ ಛಬ್ಬಿ, ಬಿಜೆಪಿ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಪ್ರಮುಖರಾದ ಶಶಿಧರ ನಿಂಬಣ್ಣವರ, ಐ.ಸಿ.ಗೋಕುಲ, ಸೀತಪ್ಪ ಪಾಟೀಲ, ವೀರಣ್ಣ ಜಡಿ, ಬಸವರಾಜ ಕರಡಿಕೊಪ್ಪ, ಪುಟ್ಟಪ್ಪ ಕಲ್ಲಪ್ಪ ಪುಟ್ಟಪ್ಪನವರು, ಮಾಂತೇಶ ತಹಸಿಲ್ದಾರ, ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Continue Reading

ಮಳೆ

Karnataka Weather :ಮಳೆಯ ಕಣ್ಣಾ ಮುಚ್ಚಾಲೆ ಆಟ; ವರುಣ ದೇವನ ತಲೆ ಮೇಲೆ ಹೊತ್ತು ತಿರುಗಿದ ಗ್ರಾ.ಪಂ ಪಿಡಿಒ

Karnataka Weather Forecast : ರಾಜ್ಯದಲ್ಲಿ ಆಗಾಗ ಮಳೆಯು (Rain News) ದರ್ಶನ ಕೊಡುತ್ತಿದ್ದರೂ, ಸೂರ್ಯನ ಶಾಖಕ್ಕೆ ಭೂಮಿ ಕಾದ ಕೆಂಡವಾಗುತ್ತಿದೆ. ಬಿಸಿಲ ಧಗೆಯು ಹೆಚ್ಚಾಗುತ್ತಲೇ ಇದ್ದು, ಮಳೆಗಾಗಿ ತಾವರೆಕೆರೆ ಗ್ರಾ.ಪಂ ಪಿಡಿಓ ವರುಣ ದೇವನನ್ನು ಪ್ರತಿಷ್ಠಾಪಿಸಿ ತಲೆ ಮೇಲೆ ಹೊತ್ತು ಪೂಜೆ ಸಲ್ಲಿಸಿದ್ದಾರೆ.

VISTARANEWS.COM


on

By

Karnataka Weather Forecast
ದೇವರ ಮೊರೆ ಹೋದ ತಾವರೆಕೆರೆ ಗ್ರಾ.ಪಂ ಪಿಡಿಒ
Koo

ತುಮಕೂರು/ಬೆಂಗಳೂರು: ಬಿಸಿಲ ಬೇಗೆಗೆ ಬೇಸತ್ತ ಜನರು ಮಳೆಗಾಗಿ (Rain News) ದೇವರ ಮೊರೆ ಹೋಗುತ್ತಿದ್ದಾರೆ. ಮಳೆರಾಯನ (Karnataka Weather Forecast) ಕಣ್ಣಾಮುಚ್ಚಾಲೆ ಆಟ ನಿಲ್ಲಿಸಲೆಂದು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ಮಳೆಗಾಗಿ ಪೂಜೆ ನಡೆದಿದೆ.

ತಾವರೆಕೆರೆ ಗ್ರಾ.ಪಂ ಪಿಡಿಒ ನಾಗರಾಜ್ ಅವರು ಸ್ವತಃ ಮಳೆರಾಯನ ಹೊತ್ತು ಜಲಾಭಿಷೇಕ ಮಾಡಿ ಪ್ರಾರ್ಥನೆ ಸಲ್ಲಿಸಿದರು. ವರುಣ ದೇವನನ್ನು ಪ್ರತಿಷ್ಠಾಪಿಸಿ ನಂತರ ತಲೆ ಮೇಲೆ ಹೊತ್ತು ಮನೆ ಮನೆಗೆ ಹೋಗಿ ಪ್ರಾರ್ಥನೆ ಸಲ್ಲಿಸಿದರು. ಭೀಕರ ಬರಗಾಲ ಹಿನ್ನೆಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿದರು.

ಇನ್ನೂ‌ ಶನಿವಾರದಂದು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಚಾಮರಾಜನಗರದ ಎಂ.ಎಂ ಹಿಲ್ಸ್‌ನಲ್ಲಿ 4 ಸೆಂ.ಮೀ ಮಳೆಯಾಗಿರುವ ವರದಿ ಆಗಿದೆ. ಉಳಿದಂತೆ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣ ಹವೆ ಇತ್ತು. ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶವು 44.7 ಡಿ.ಸೆ ದಾಖಲಾಗಿತ್ತು.

ಇದನ್ನೂ ಓದಿ: Heat Wave: ಬಿಸಿಲಿನ ಬೇಗೆಗೆ ಹೈರಾಣಾದ ದೇಶ; ಹಲವು ಭಾಗಗಳಲ್ಲಿ ಏಪ್ರಿಲ್‌ನಲ್ಲಿ ಗರಿಷ್ಠ ತಾಪಮಾನ ದಾಖಲು

ಮತ್ತಷ್ಟು ದಿನ ಬಿಸಿಲ ತಾಪ

ರಣಬಿಸಿಲು, ಉಷ್ಣಗಾಳಿ ಹೊಡೆತಕ್ಕೆ ಜನರು ಈಗಾಗಲೇ ತತ್ತರಿಸಿ ಹೋಗಿದ್ದಾರೆ. ಮತ್ತಷ್ಟು ದಿನ ಬಿಸಿಲ ತಾಪ ಹೆಚ್ಚಾಗಲಿದ್ದು, ಆರೋಗ್ಯದ ಕಾಳಜಿ ವಹಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಉಷ್ಣತೆಯು ಇದ್ದಕ್ಕಿದ್ದಂತೆ ತೀಕ್ಷ್ಣವಾಗಿ ಮೇಲೇರಿ, ತನ್ನ ಸಾಮಾನ್ಯ ಮಟ್ಟವನ್ನು ಮೀರುವುದನ್ನು ಶಾಖದ ಅಲೆಗಳು ಅಥವಾ ಹೀಟ್‌ವೇವ್‌ ಎನ್ನಲಾಗುತ್ತದೆ. ಸದ್ಯ ಸಾಮಾನ್ಯ ಮಟ್ಟವನ್ನು ಮೀರಿ, ಉಷ್ಣತೆ ಮೇಲೇರುವುದರಿಂದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಬಹುದು. ಸುಸ್ತು, ಆಯಾಸ, ಎಚ್ಚರ ತಪ್ಪುವುದು ಆಗಲಿದೆ. ಹೀಗಾಗಿ ಕಾಳಜಿ ವಹಿಸುವಂತೆ ಸೂಚಿಸಲಾಗಿದೆ.

ಮೇ.8ರವೆರೆಗೆ ಹೀಟ್‌ ವೇವ್‌ ಅಲರ್ಟ್‌ ನೀಡಲಾಗಿದೆ. ಉತ್ತರ ಒಳನಾಡಿನ ಬೀದರ್‌, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ ಮತ್ತು ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಗಳಲ್ಲಿ ಶಾಖದ ಅಲೆಯ ವಾತಾವರಣವು ಹೆಚ್ಚಾಗಲಿದೆ.

ಮಳೆ ಸೂಚನೆ ಇದ್ಯಾ?

ರಾಜ್ಯದ ಬಹುತೇಕ ಕಡೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಇದರ ಹೊರತಾಗಿಯೂ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಮಲೆನಾಡಿನ ಕೊಡಗು, ಹಾಸನದಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಜತೆಗೆ ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರಿನಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ರಾಜಧಾನಿ ಬೆಂಗಳೂರಲ್ಲಿ ಮತ್ತೆ ತಾಪಮಾನ ಏರಿಕೆ

ರಾಜಧಾನಿ ಬೆಂಗಳೂರಿನಲ್ಲಿ ತಾಪಮಾನ ಏರಿಕೆ ಆಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ನಿರ್ಮಲ ಆಕಾಶ ಇರಲಿದ್ದು, ಗರಿಷ್ಠ ಉಷ್ಣಾಂಶವು 39ರ ಗಡಿ ದಾಟಲಿದೆ.‌ ಜತೆಗೆ ಆಗಾಗ ಗಾಳಿ ವೇಗವು ಇರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

Lok Sabha Election 2024

Vijay Sankeshwar: 2014ರಲ್ಲಿ ಮೋದಿ ಕೈಗೆ ಮೌನಿ ಬಾಬಾ ಖಾಲಿ ಚೊಂಬು ಕೊಟ್ಟಿದ್ದರು; ಉದ್ಯಮಿ ವಿಜಯ ಸಂಕೇಶ್ವರ ವಾಗ್ದಾಳಿ

Vijay Sankeshwar: ಹುಬ್ಬಳ್ಳಿಯ ವರೂರಿನ ವಿಆರ್‌ಎಲ್ ಸಂಸ್ಥೆ ಆವರಣದಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಸಂಸದ, ಉದ್ಯಮಿ, ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್‌ಮನ್‌ ವಿಜಯ ಸಂಕೇಶ್ವರ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 2014ರಲ್ಲಿ ಪ್ರಧಾನಿಯಾದ ನರೇಂದ್ರ ಮೋದಿ ಅವರ ಕೈಗೆ ಮೌನಿ ಬಾಬಾ (ಡಾ. ಮನಮೋಹನ ಸಿಂಗ್) ಖಾಲಿ ಚೊಂಬನ್ನೇ ಕೊಟ್ಟಿದ್ದರು ಎಂದು ಹೇಳಿದ್ದಾರೆ.

VISTARANEWS.COM


on

Vijay Sankeshwar
Koo

ಹುಬ್ಬಳ್ಳಿ: 2014ರಲ್ಲಿ ಪ್ರಧಾನಿಯಾದ ನರೇಂದ್ರ ಮೋದಿ (Narendra Modi) ಅವರ ಕೈಗೆ ಮೌನಿ ಬಾಬಾ (ಡಾ. ಮನಮೋಹನ ಸಿಂಗ್) ಖಾಲಿ ಚೊಂಬನ್ನೇ ಕೊಟ್ಟಿದ್ದರು ಎಂದು ಮಾಜಿ ಸಂಸದ, ಉದ್ಯಮಿ, ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್‌ಮನ್‌ ವಿಜಯ ಸಂಕೇಶ್ವರ (Vijay Sankeshwar) ಟೀಕಿಸಿದರು.

ಹುಬ್ಬಳ್ಳಿಯ ವರೂರಿನ ವಿಆರ್‌ಎಲ್ ಸಂಸ್ಥೆ ಆವರಣದಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, 2014ರಲ್ಲಿ ಇನ್ನೊಂದೇ ತಿಂಗಳು ಕಳೆದಿದ್ದರೂ ಯುಪಿಎ ಕೈಯಲ್ಲಿ ದೇಶ ಅಧೋಗತಿಗೆ ಹೋಗುತ್ತಿತ್ತು ಎಂದು ಹೇಳಿದರು.

ಯುಪಿಎ ಆಡಳಿತದ ಕೊನೇ ಗಳಿಗೆಯಲ್ಲಿ ದೇಶದ ತೈಲ ಸಂಗ್ರಹ ಮುಗಿದೇ ಹೋಗಿತ್ತು. ಸರ್ಕಾರದ ಮೇಲೆ ಸಾಲದ ಹೊರೆ ಬಿದ್ದಿತ್ತು. ಈ ರೀತಿ ನರೇಂದ್ರ ಮೋದಿ ಅವರ ಕೈಗೆ ಅಂದು ಕಾಂಗ್ರೆಸ್ ಖಾಲಿ ಚೊಂಬನ್ನೇ ಕೊಟ್ಟಿದ್ದು ಎಂದರು. ನರೇಂದ್ರ ಮೋದಿ ಅವರು ಪ್ರಧಾನಿಯಾಗುತ್ತಲೇ ತೈಲ ರಾಷ್ಟ್ರಗಳಿಗೆ ದಯವಿಟ್ಟು ಪೆಟ್ರೋಲಿಯಂ ಉತ್ಪನ್ನ ನಿಲ್ಲಿಸಬೇಡಿ ಎಂದು ಮನವಿ ಮಾಡಿದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಅಂಥ ದಯನೀಯ ಸ್ಥಿತಿ ದೇಶಕ್ಕಿಲ್ಲ ಎಂದು ಹೇಳಿದರು.

ಅನೇಕ ಸುಧಾರಣೆಗಳ ಮೂಲಕ ದೇಶದಲ್ಲಿ ಶಾಂತಿ ನೆಲೆಸುವಂತೆ ಮೋದಿ ಮಾಡಿದ್ದಾರೆ. ಆದರೆ ಯುಪಿಎ ಕಾಲದ ಇಟಲಿ ಮೇಡಂ, ಮೌನಿ ಬಾಬಾ ಆಡಳಿತದಲ್ಲಿ ಭಾರತದಲ್ಲಿ ಯಾವುದೇ ಸಾಧನೆ ಆಗಲಿಲ್ಲ ಎಂದರು. ನರೇಂದ್ರ ಮೋದಿ ಆಡಳಿತದಲ್ಲಿ ಭಾರತ ಬಲಿಷ್ಠ ರಾಷ್ಟ್ರವಾಗಿ ಬೆಳೆಯುತ್ತಿದೆ. ಮೋದಿ ನಮ್ಮ ಪ್ರಧಾನಿ ಮಾತ್ರವಲ್ಲ, ಜಗತ್ತಿನ ನಾಯಕರಾಗಿ ಎತ್ತರಕ್ಕೆ ಬೆಳೆದಿದ್ದಾರೆ ಎಂದು ಸಂಕೇಶ್ವರ ಬಣ್ಣಿಸಿದರು. ಈ ಲೋಕ ಕದನವನ್ನು ವಿಶ್ವದ ರಾಷ್ಟ್ರಗಳು ಬಹಳ ಕುತೂಹಲದಿಂದ ನೋಡುತ್ತಿವೆ. ಹಾಗಾಗಿ ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ಕರ್ತವ್ಯ ಪಾಲಿಸಬೇಕು ಎಂದು ಕರೆ ನೀಡಿದರು.

ಸಂವಿಧಾನ ಬದಲಾವಣೆ ಇಲ್ಲ

ತಮ್ಮ ಜೀವಿತಾವಧಿಯಲ್ಲಿ ಸಂವಿಧಾನ ಬದಲಾವಣೆ ಮಾಡುವುದಿಲ್ಲ ಎಂದು ಸ್ವತಃ ಮೋದಿ ಅವರೇ ಹೇಳಿದ್ದಾರೆ. ಆದರೂ ಚುನಾವಣೆ ಬಂದಾಗ ರಾಹುಲ್​ ಗಾಂಧಿಯಂತವರು ಅಪಪ್ರಚಾರ ಮಾಡಿ ಜನರ ದಿಕ್ಕು ತಪ್ಪಿಸುತ್ತಾರೆ ಎಂದು ವಿಜಯ ಸಂಕೇಶ್ವರ ವಾಗ್ದಾಳಿ ನಡೆಸಿದರು.

ದೇಶದಲ್ಲಿ ಕಾಂಗ್ರೆಸ್ ಸಂವಿಧಾನದ ವಿರುದ್ಧವಾಗಿ ಬರೋಬ್ಬರಿ 82 ಸರ್ಕಾರಗಳನ್ನು ಕೆಡವಿದೆ. ಆದರೆ ಅಟಲ್​ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ ಅವರು ಒಂದೇ ಒಂದು ಸರ್ಕಾರವನ್ನು ಉರುಳಿಸುವ ಕೆಲಸ ಮಾಡಿಲ್ಲ ಎಂದರು. ದೇಶದ ಹಲವು ರಾಜ್ಯಗಳಲ್ಲಿ ಈಗಲೂ ಅರಾಜಕತೆ ಇದೆ. ಹಾಗಿದ್ದರೂ ಮೋದಿ ಅವರು ಚುನಾಯಿತ ಸರ್ಕಾರ ಕೆಡವದೇ ಸಂವಿಧಾನಕ್ಕೆ ಗೌರವ ತೋರುವ ಔದಾರ್ಯ ತೋರಿದ್ದಾರೆ ಎಂದು ಅಭಿಮಾನ ವ್ಯಕ್ತಪಡಿಸಿದರು.

49 ವರ್ಷಗಳ ಕಾಲ ಧಾರವಾಡ ಕ್ಷೇತ್ರದಲ್ಲಿ ಕಾಂಗ್ರೆಸ್​ ಆಡಳಿತವೇ ಇತ್ತು. 3 ಬಾರಿ ಜನ ನನಗೆ ಆಶೀರ್ವಾದ ಮಾಡಿದರು. 4ನೇ ಬಾರಿ ಪ್ರಲ್ಹಾದ ಜೋಶಿ ಅವರನ್ನು ಗೆಲ್ಲಿಸಿದ್ದಾರೆ. ಈ ಬಾರಿಯೂ ಗೆಲುವು ಅವರದ್ದೇ ಆಗಬೇಕು ಎಂದು ಕೋರಿದರು.

ಸರಳ ವ್ಯಕ್ತಿ ಜೋಶಿ

ಪ್ರಲ್ಹಾದ ಜೋಶಿ ಕೇಂದ್ರದಲ್ಲಿ ದೊಡ್ಡ ಮಂತ್ರಿಯಾಗಿದ್ದರೂ ಯಾವುದೇ ಹಮ್ಮು-ಬಿಮ್ಮು ಇಲ್ಲದ ಸರಳ ವ್ಯಕ್ತಿ ಆಗಿದ್ದಾರೆ. ಎಲ್ಲ ಕಾರ್ಯಕರ್ತರು ಮತ್ತು ಜನರೊಂದಿಗೆ ಬೆರೆಯುವ ವ್ಯಕ್ತಿತ್ವದವರು ಎಂದು ಹೊಗಳಿದರು. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸತತ 5ನೇ ಬಾರಿ ಕಣಕ್ಕಿಳಿದ ಬಿಜೆಪಿಯ ಈ ನಿಷ್ಠಾವಂತ ನಾಯಕ ಪ್ರಲ್ಹಾದ ಜೋಶಿ ಅವರನ್ನು ಈ ಬಾರಿ 3.5 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಡಾ. ಸಂಕೇಶ್ವರ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಇದನ್ನೂ ಓದಿ: Lok Sabha Election : ಚುನಾವಣೆ ಖರ್ಚಿಗೆ ಹಣ ಕೊಡದ್ದಕ್ಕೆ ಟಿಕೆಟ್​ ವಾಪಸ್​ ಕೊಟ್ಟ ಕಾಂಗ್ರೆಸ್​ ಅಭ್ಯರ್ಥಿ!

ಎಪಿಎಂಸಿ ಮಾಜಿ ಸದಸ್ಯ ಚನ್ನು ಹೊಸಮನಿ, ಜಿಪಂ ಮಾಜಿ ಅಧ್ಯಕ್ಷ ಟಿ.ಜಿ. ಬಾಳಣ್ಣವರ, ಶಾಸಕ ಎಂ.ಆರ್​.ಪಾಟೀಲ, ವಿಆರ್​ಎಲ್​ ಸಂಸ್ಥೆ ಅಧಿಕಾರಿ-ಸಿಬ್ಬಂದಿ ಉಪಸ್ಥಿತರಿದ್ದರು.

Continue Reading
Advertisement
Namma Metro
ಬೆಂಗಳೂರು12 mins ago

Namma Metro : ದೆಹಲಿ ನಂತರ ನಮ್ಮ ಮೆಟ್ರೋದಲ್ಲೂ ಯುವಕ-ಯುವತಿಯ ಡಿಂಗ್‌ ಡಾಂಗ್‌!

Prajwal Revanna Case Who leaked the pen drive Devaraje Gowda gives evidence to SIT
ಕ್ರೈಂ46 mins ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸಲ್ಲಿ ಎಚ್‌ಡಿಡಿ, ಎಚ್‌ಡಿಕೆ ಹೆಸರು ಬಳಸಂಗಿಲ್ಲ; ಕೋರ್ಟ್‌ ತಡೆಯಾಜ್ಞೆ

ICSE Results 202
ಶಿಕ್ಷಣ47 mins ago

CISCE Results 2024: ಸಿಐಎಸ್‌ಸಿಇಯ 10 & 12ನೇ ತರಗತಿಯ ಫಲಿತಾಂಶ ಪ್ರಕಟ; ಹೀಗೆ ಪರಿಶೀಲಿಸಿ

MS Dhoni
ಕ್ರಿಕೆಟ್50 mins ago

MS Dhoni: ಧೋನಿಯ ಕ್ಲೀನ್​ ಬೌಲ್ಡ್​ ಕಂಡು ಬೇಸರಗೊಂಡ ಅಭಿಮಾನಿಗಳು; ವಿಡಿಯೊ ವೈರಲ್​

Viral News
ವೈರಲ್ ನ್ಯೂಸ್1 hour ago

Viral News: ಅವಳಿ-ತ್ರಿವಳಿ ಅಲ್ಲ.. ಏಕಕಾಲದಲ್ಲಿ ಐದು ಮಕ್ಕಳಿಗೆ ಜನ್ಮಕೊಟ್ಟ ಮಹಾತಾಯಿ

Kanyakumari Tour
ಪ್ರವಾಸ1 hour ago

Kanyakumari Tour: ತುಂಬಾ ದುಬಾರಿ ಏನಿಲ್ಲ, ನೀವೂ ಮಾಡಬಹುದು ಕನ್ಯಾಕುಮಾರಿ ಪ್ರವಾಸ

Cauvery Theatre bengaluru another single screen close
ಸಿನಿಮಾ1 hour ago

Cauvery Theatre: ಬೆಂಗಳೂರಿನಲ್ಲಿ ಪ್ರದರ್ಶನ ನಿಲ್ಲಿಸಿದ ʻಕಾವೇರಿʼ ಥಿಯೇಟರ್! ಮುಂದೇನು?

Bomb Threat
ದೇಶ1 hour ago

Bomb Threat: ದೆಹಲಿ ಬಳಿಕ ಇದೀಗ ಅಹಮದಾಬಾದ್​ನ ಶಾಲೆಗಳಿಗೂ ಬಾಂಬ್​ ಬೆದರಿಕೆ

Lok Sabha Elections-2024
Lok Sabha Election 20241 hour ago

Lok Sabha Election 2024: ಘಟಾನುಘಟಿಗಳ ಸ್ಪರ್ಧೆ; ಮೇ 7ರ ಮೂರನೇ ಹಂತದ ಪೈಪೋಟಿಯ ಚಿತ್ರಣ ಇಲ್ಲಿದೆ

ICC Women’s T20 World Cup 2024
ಕ್ರೀಡೆ1 hour ago

ICC Women’s T20 World Cup 2024: ಮಹಿಳಾ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆದ ಶ್ರೀಲಂಕಾ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ9 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ18 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ20 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ20 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ4 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

ಟ್ರೆಂಡಿಂಗ್‌