ಹುಬ್ಬಳ್ಳಿ: ನಗರದ ರಿಂಗ್ ರೋಡ್‌ನಲ್ಲಿ ನಿಂತಿದ್ದ ವಾಣಿಜ್ಯ ತೆರಿಗೆ ಇಲಾಖೆಯ ವಾಹನಕ್ಕೆ ಲಾರಿಯೊಂದು ಡಿಕ್ಕಿಯಾಗಿದ್ದು (Hubballi Accident), ವಾಹನ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆ ವಾಹನ ಚಾಲಕ ರಫೀಕ್ ನದಾಫ್ ಮೃತರು.
ರಸ್ತೆ ಬದಿ ವಾಹನ ನಿಲ್ಲಿಸಿ, ಸರಕು ಸಾಗಣೆ ವಾಹನಗಳನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದರು. ಒಂದು ಸರಕು ಸಾಗಣೆ ಲಾರಿಯೊಂದನ್ನು ತಪಾಸಣೆ ಮಾಡುವಾಗ ಹಿಂದಿನಿಂದ ಬಂದ ಮತ್ತೊಂದು ವಾಹನವು ಇಲಾಖೆ ವಾಹನಕ್ಕೆ ಡಿಕ್ಕಿಯಾಗಿದೆ.
ಅಪಘಾತದ ತೀವ್ರತೆಗೆ ವಾಣಿಜ್ಯ ತೆರಿಗೆ ಇಲಾಖೆ ವಾಹನ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇಬ್ಬರು ಅಧಿಕಾರಿಗಳಿಗಳು ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Road Accident : ಹುಬ್ಬಳ್ಳಿ APMC ಬಳಿ ಭೀಕರ ಅಪಘಾತ; ಬೈಕ್ ಸವಾರ, ಪಾದಚಾರಿ ಇಬ್ಬರೂ ಮೃತ್ಯು
ಬೈಕೊಂದು ರಸ್ತೆ ದಾಟುತ್ತಿದ್ದ ಪಾದಚಾರಿಯೊಬ್ಬರಿಗೆ ಡಿಕ್ಕಿ ಹೊಡೆದು (Road accident) ಸವಾರ ಮತ್ತು ಪಾದಚಾರಿ ಇಬ್ಬರೂ ಪ್ರಾಣ ಕಳೆದುಕೊಂಡ ದಾರುಣ ಘಟನೆ ಹುಬ್ಬಳ್ಳಿಯ ಎಪಿಎಂಸಿ (Hubballi News) ಬಳಿ ಶನಿವಾರ (ಆಗಸ್ಟ್ 19) ನಡೆದಿತ್ತು. ವೇಗವಾಗಿ ಬಂದ ಬೈಕ್ ಪಾದಚಾರಿಗೆ ಡಿಕ್ಕಿ ಹೊಡೆದ (Bike hits Road crosser) ಪರಿಣಾಮವಾಗಿ ಅವಘಡ ಸಂಭವಿಸಿತ್ತು. ಬೈಕ್ ಸವಾರ ಮಕ್ತುಂ ಹಾಗೂ ಪಾದಚಾರಿ ಬಸವರಾಜ್ ಮೃತಪಟ್ಟಿದ್ದಾರೆ.