ಬೆಂಗಳೂರು, ಕರ್ನಾಟಕ: ಧಾರವಾಡ ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿರುವ ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಕೈ ಅಭ್ಯರ್ಥಿ ಅಬ್ಬಯ್ಯ ಪ್ರಸಾದ್ ಅವರು ಕಳೆದ ಬಾರಿಗಿಂತಲೂ ಹೆಚ್ಚಿನ ಮತಗಳನ್ನು ಪಡೆದುಕೊಂಡು ಜಯಶಾಲಿಯಾಗಿದ್ದಾರೆ. ಬಿಜೆಪಿಯ ಅಭ್ಯರ್ಥಿ ಡಾ. ಕ್ರಾಂತಿ ಕಿರಣ್ ಅವರು 52877 ಮತಗಳನ್ನು ಪಡೆದುಕೊಂಡರೆ, ಗೆಲುವಿನ ನಗೆ ಬೀರಿರುವ ಅಬ್ಬಯ್ಯ ಪ್ರಸಾದ್ ಅವರ ಬುಟ್ಟಿಗೆ 85181 ಮತಗಳು ಬಂದಿವೆ. ಅಂದರೆ, ಕಾಂಗ್ರೆಸ್ ಅಭ್ಯರ್ಥಿ ಅವರು 32304 ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ(Hubli-Dharwad East Results).
2023ರ ಚುನಾವಣೆಯ ಅಭ್ಯರ್ಥಿಗಳು
ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅಬ್ಬಯ್ಯ ಪ್ರಸಾದ್ ಸ್ಪರ್ಧಿಸಿದ್ದರು. ಬಿಜೆಪಿಯಿಂದ ಕ್ರಾಂತಿಕಿರಣ್ ಮತ್ತು ಜೆಡಿಎಸ್‌ನಿಂದ ವೀರಭದ್ರಪ್ಪ ಹಾಲಹರವಿ ಅವರು ಕಣದಲ್ಲಿದ್ದರು.
ಇದನ್ನೂ ಓದಿ: Karnataka Election Results Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ; ಖರ್ಗೆ ನಿವಾಸದಲ್ಲಿ ಮಹತ್ವದ ಸಭೆ
2018ರ ಚುನಾವಣೆಯ ಫಲಿತಾಂಶ ಏನಾಗಿತ್ತು?
ಕ್ಷೇತ್ರ ಪುನರ್ವಿಂಗಡನೆ ವೇಳೆ ರಚನೆಯಾದ ಹೊಸ ಕ್ಷೇತ್ರವಿದು. 2008ರಲ್ಲಿ ಈ ಕ್ಷೇತ್ರವನ್ನು ಭಾರತೀಯ ಜನತಾ ಪಾರ್ಟಿಯ ವೀರಭದ್ರಪ್ಪ ಹಾಲಹರವಿ ಅವರು ಗೆದ್ದರೆ 2013 ಮತ್ತು 2018ರಲ್ಲಿ ಕಾಂಗ್ರೆಸ್‌ನ ಅಬ್ಬಯ್ಯ ಪ್ರಸಾದ್ ಅವರು ಗೆದ್ದಿದ್ದಾರೆ. 2018ರಲ್ಲಿ ಅಬ್ಬಯ್ಯ ಪ್ರಸಾದ್ ಅವರ ವಿರುದ್ಧ ಬಿಜೆಪಿಯಿಂದ ಚಂದ್ರಶೇಖರ್ ಗೋಕಾಕ್ ಅವರು ಸ್ಪರ್ಧಿಸಿದ್ದರು. ಆದರೆ, ಅಬ್ಬಯ್ಯ ಪ್ರಸಾದ್ ಅವರು 77,080 ಮತಗಳನ್ನು ಪಡೆದುಕೊಂಡು 21467 ಮತಗಳ ಅಂತದರಿಂದ ಬಿಜೆಪಿಯ ಗೋಕಾಕ್ ಅವರನ್ನು ಸೋಲಿಸಿದರು. ಬಿಜೆಪಿಯ ಅಭ್ಯರ್ಥಿಯು 55,613 ಮತಗಳನ್ನು ಪಡೆಯಲು ಮಾತ್ರವೇ ಸಾಧ್ಯವಾಯಿತು.