ಬೆಂಗಳೂರು, ಕರ್ನಾಟಕ: ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರವು ರಾಜ್ಯದ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ. ಬಿಜೆಪಿಯ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ಕಮಲದ ಅಭ್ಯರ್ಥಿ ಅರವಿಂದ್ ಬೆಲ್ಲದ್ ಅವರು ಮತ್ತೆ ಗೆಲುವು ಸಾಧಿಸಿದ್ದಾರೆ. 101410 ಮತಗಳನ್ನು ಪಡೆದುಕೊಂಡಿರುವ ಬೆಲ್ಲದ್, ತಮ್ಮ ಪ್ರತಿಸ್ಫರ್ಧಿ ಕಾಂಗ್ರೆಸ್‌ನ ದೀಪಕ್ ಚಿಂಚೋರೆ ಅವರನ್ನು 62,717 ಮತಗಳ ಭಾರೀ ಅಂತರಿಂದ ಸೋಲಿಸಿದ್ದಾರೆ. ಇದರೊಂದಿಗೆ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರವು ಬಿಜೆಪಿಯ ಭದ್ರಕೋಟೆ ಎಂಬುದು ಮತ್ತೆ ಸಾಬೀತಾಗಿದೆ. ಜೆಡಿಎಸ್ ಅಭ್ಯರ್ಥಿ ಗುರುರಾಜ್ ಹುಣಸಿಮರದ್ ಅವರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಠೇವಣಿ ಕಳೆದುಕೊಂಡಿದ್ದಾರೆ(Hubli-Dharwad-West Results).
2023ರ ಚುನಾವಣೆಯ ಅಭ್ಯರ್ಥಿಗಳು
ಹಾಲಿ ಶಾಸಕ ಬಿಜೆಪಿಯ ಅರವಿಂದ್ ಬೆಲ್ಲದ್ ಅವರು ಮತ್ತೆ ಕಣದಲ್ಲಿದ್ದರು, ಕಾಂಗ್ರೆಸ್‌ನಿಂದ ಈ ಬಾರಿ ದೀಪಕ್ ಚಿಂಚೋರೆ ಮತ್ತು ಜೆಡಿಎಸ್‌ನಿಂದ ಗುರುರಾಜ್ ಹುಣಸಿಮರದ್ ಅವರು ಕಣದಲ್ಲಿದ್ದರು.
ಇದನ್ನೂ ಓದಿ : Karnataka Election Results Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ; ಖರ್ಗೆ ನಿವಾಸದಲ್ಲಿ ಮಹತ್ವದ ಸಭೆ
2018ರ ಚುನಾವಣೆಯ ಫಲಿತಾಂಶ ಏನಾಗಿತ್ತು?
ಅರವಿಂದ್ ಬೆಲ್ಲದ್ ಕುಟುಂಬಕ್ಕೆ ಹಲವು ವರ್ಷಗಳಿಂದ ಆಶೀರ್ವಾದ ಮಾಡುತ್ತ ಬಂದಿರುವ ಕ್ಷೇತ್ರ ಅಂದ್ರೆ ಅದು ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ. 2008ರಿಂದಲೂ ಬಿಜೆಪಿಯು ಈ ಕ್ಷೇತ್ರವನ್ನು ಗೆಲ್ಲುತ್ತಾ ಬಂದಿದೆ. 2008ರಲ್ಲಿ ಚಂದ್ರಕಾಂತ್ ಬೆಲ್ಲದ್ ಅವರು ಗೆದ್ದರೆ, 2013 ಮತ್ತು 2018ರಲ್ಲಿ ಅವರ ಪುತ್ರ ಅರವಿಂದ್ ಬೆಲ್ಲದ್ ಅವರು ಜಯ ಸಾಧಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಅರವಿಂದ್ ಬೆಲ್ಲದ್ ಅವರು 96462 ಮತಗಳನ್ನು ಪಡೆದುಕೊಂಡು, ಕಾಂಗ್ರೆಸ್‌ನ ಅಭ್ಯರ್ಥಿ ಮೊಹಮ್ಮದ್ ಇಸ್ಮಾಯಿಲ್ ತಮಟಗಾರ್ ಅವರನ್ನು 40487 ಮತಗಳ ಅಂತರದಿಂದ ಸೋಲಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ 55,975 ಮತಗಳನ್ನು ಪಡೆದುಕೊಂಡಿದ್ದರು.