Site icon Vistara News

Murder case | ಕಾಲಿಗೆ ಹಗ್ಗ ಕಟ್ಟಿ ಕೆರೆಗೆ ಎಸೆದು ಯುವಕನ ಕೊಲೆ: ಮಾನವ ಹಕ್ಕು ಹೋರಾಟಗಾರನಾ?

Raju BN death

ರಾಮನಗರ: ಬಿಡದಿಯ ನಲ್ಲಿಗುಡ್ಡೆ ಕೆರೆಯಲ್ಲಿ ಯುವಕನೊಬ್ಬನ ಶವ (Murder case) ಪತ್ತೆಯಾಗಿದೆ. ಮೃತದೇಹದ ಜತೆಗಿದ್ದ ಗುರುತಿನ ಚೀಟಿ ಆಧಾರದಲ್ಲಿ ಆತನನ್ನು ರಾಜು ಬಿ.ಎನ್‌. ಎಂದು ಗುರುತಿಸಲಾಗಿದೆ. ಸುಮಾರು ೨೫ ವರ್ಷ ಪ್ರಾಯದ ಯುವಕನಂತೆ ಕಾಣುತ್ತಾರೆ.

ನಲ್ಲಿಗುಡ್ಡೆ ಕೆರೆಯ ಪಕ್ಕದಲ್ಲಿ ಒಂದು ಆಲ್ಟೋ ಕಾರು ಮತ್ತು ಅದರೊಳಗೆ ಒಂದು ಲ್ಯಾಪ್‌ಟಾಪ್‌ ಇತ್ತು. ಯಾರದ್ದಿದು ಎಂದು ಜನರು ಕುತೂಹಲದಿಂದ ನೋಡುತ್ತಿದ್ದರು. ಈ ನಡುವೆ, ಕೆರೆಯಲ್ಲಿ ಶವ ಪತ್ತೆಯಾಗಿದೆ. ಕಾಲಿಗೆ ಹಗ್ಗ ಬಿಗಿದು ಕೊಲೆ ಮಾಡಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿತ್ತು. ಬಳಿಕ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಹಕಾರದಿಂದ ಶವವನ್ನು ಮೇಲೆತ್ತಲಾಗಿದೆ.

ಸ್ಥಳಕ್ಕೆ ಬಿಡದಿ ಪೊಲೀಸರು ಆಗಮಿಸಿದ್ದು, ಮೃತದೇಹವನ್ನು ಹೊರ ತೆಗೆಸಿದರು. ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ತಡೆ ವೇದಿಕೆ ಎಂಬ ಸಂಘಟನೆಯ ಕರ್ನಾಟಕ ರಾಜ್ಯದ ಕಾನೂನು ವಿಭಾಗದ ಕಾರ್ಯದರ್ಶಿ ಎಂದು ರಾಜು ಬಿಎಂ ಗುರುತಿನ ಚೀಟಿ ಹೊಂದಿದ್ದಾರೆ. ಈ ಸಂಘಟನೆ ನಿಜಕ್ಕೂ ನೋಂದಾಯಿತ ಸಂಸ್ಥೆಯೇ? ಇದು ಏನು ಕೆಲಸ ಮಾಡುತ್ತದೆ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ.

ಯಾರೋ ದುಷ್ಕರ್ಮಿಗಳು ರಾಜು ಅವರನ್ನು ಕೊಲೆ ಮಾಡಿರುವುದು ಖಚಿತವಾಗಿದೆ. ಆದರೆ, ಯಾವ ಕಾರಣಕ್ಕೆ ಕೊಲೆ ಮಾಡಿದರು. ಮಾನವ ಹಕ್ಕುಗಳ ಹೋರಾಟದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆಯೇ? ಅಥವಾ ಬೇರೆ ವೈಯಕ್ತಿಕ ಕಾರಣಗಳಿವೆಯೇ ಎನ್ನುವುದು ಸದ್ಯಕ್ಕೆ ತಿಳಿದುಬಂದಿಲ್ಲ.

ರಾಜು ಅವರನ್ನು ಕೊಂದು ತಂದು ಕೆರೆಗೆ ಹಾಕಲಾಗಿದೆಯೇ ಅಥವಾ ಕಾಲು ಕಟ್ಟಿ ಕೆರೆಗೆ ಹಾಕಲಾಯಿತೇ ಎನ್ನುವುದನ್ನು ಮರಣೋತ್ತರ ಪರೀಕ್ಷಾ ವರದಿ ಹೇಳಬೇಕಾಗಿದೆ.

ಇದನ್ನೂ ಓದಿ | Murder Case | ಗಂಡನನ್ನು ಬಿಟ್ಟು ಪ್ರೇಮಕಾವ್ಯ ಬರೆಯಲು ಹೋದವಳು ಪ್ರಿಯಕರನಿಂದಲೇ ಕೊಲೆಯಾದಳು!

Exit mobile version