ರಾಯಚೂರು: ಮಂತ್ರಾಲಯದ (Mantralaya) ಶ್ರೀ ಗುರು ರಾಘವೇಂದ್ರರ ಮಠದಲ್ಲಿ (Sri Guru Raghavendra Mutt Mantralayam) ನಿನ್ನೆ ಹುಂಡಿ (Hundi) ಎಣಿಕೆ ಕಾರ್ಯ ನಡೆಯಿತು. 29 ದಿನಗಳಲ್ಲಿ 2 ಕೋಟಿ 93 ಲಕ್ಷ ರೂಪಾಯಿ ಕಾಣಿಕೆ ಸಂಗ್ರಹವಾಗಿರುವುದು ಕಂಡುಬಂದಿದೆ.
100ಕ್ಕೂ ಹೆಚ್ಚು ಮಠದ ಸಿಬ್ಬಂದಿಗಳು ಮತ್ತು ಭಕ್ತರಿಂದ ಹುಂಡಿ ಎಣಿಕೆ ನಡೆಯಿತು. ಮೇ ತಿಂಗಳಲ್ಲಿ ಹುಂಡಿಯಲ್ಲಿ ಹಾಕಿರುವ ರಾಯರ ಭಕ್ತರ ಕಾಣಿಕೆ ಇದಾಗಿದ್ದು, ದೊಡ್ಡ ಹಾಗೂ ಸಣ್ಣ ಮೌಲ್ಯದ ಕರೆನ್ಸಿ ನೋಟುಗಳ ಜೊತೆಗೆ 136 ಗ್ರಾಂ ಬಂಗಾರ, 1510 ಗ್ರಾಂ ಬೆಳ್ಳಿ ಕೂಡ ಭಕ್ತರಿಂದ ಕಾಣಿಕೆಯಾಗಿ ಬಂದಿದೆ. ಮಂತ್ರಾಲಯದ ಪೀಠಾಧಿಪತಿ ಶ್ರೀ ಡಾ. ಸುಬುದೇಂದ್ರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು. ಮಠದ ಲೆಕ್ಕಾಧಿಕಾರಿಗಳು, ಆಡಳಿತಗಾರರು ಉಪಸ್ಥಿತರಿದ್ದರು.
ಈ ಬಾರಿ ಬೇಸಿಗೆ ರಜೆ (Summer holidays) ಇದ್ದುದರಿಂದ ಮಂತ್ರಾಲಯಕ್ಕೆ ಭೇಟಿ ನೀಡಿದ ಜನರ ಸಂಖ್ಯೆ ಹೆಚ್ಚಿದೆ. ಹಾಗೆಯೇ ಕಾಣಿಕೆಯ ಸಂಗ್ರಹವೂ ಅಧಿಕವಾಗಿರುವುದು ಕಂಡುಬಂದಿದೆ.
ಕಲಿಯುಗದ ಕಾಮಧೇನು ಎಂದು ಭಕ್ತರಿಂದ ಕೀರ್ತಿಸಿಕೊಳ್ಳುವ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಕರ್ನಾಟಕದ ವಿವಿಧ ಕಡೆಗಳಿಂದ ಮಾತ್ರವಲ್ಲದೆ ಸುತ್ತಮುತ್ತಲಿನ ರಾಜ್ಯಗಳಿಂದಲೂ ಭಕ್ತಾದಿಗಳು ಆಗಮಿಸುತ್ತಾರೆ. ತುಂಗಭದ್ರಾ ನದಿ ತೀರದಲ್ಲಿ ನಿಂತಿರುವ ರಾಯರ ಸನ್ನಿಧಾನಕ್ಕೆ ನಿತ್ಯ ಸಾವಿರಾರು ಜನ ಭಕ್ತರು ಭೇಟಿ ನೀಡುತ್ತಾರೆ. ಬೇಸಿಗೆ ರಜೆ ಮುಗಿಯುವ ಮುನ್ನವೇ ಮಂತ್ರಾಲಯಕ್ಕೆ ಹೋಗಿ ಬರಬೇಕೆಂದಿದ್ದರೆ, ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗಲು ಇರುವ ರೈಲುಗಳ ಬಗ್ಗೆ ಮಾಹಿತಿ ಇಲ್ಲಿದೆ.
ಒಂದನೇ ರೈಲು: ಇದು ವಂದೇ ಭಾರತ್ ರೈಲು. ಈ ರೈಲು ಸಂಖ್ಯೆ KLBG VANDeBHARAT(22232). ಇದು ಕೆಎಸ್ಆರ್ ಬೆಂಗಳೂರಿನಿಂದ ಮಧ್ಯಾಹ್ನ 2.40 ಗಂಟೆಗೆ ಹೊರಡುತ್ತದೆ. ರಾತ್ರಿ 8:18ಕ್ಕೆ ಮಂತ್ರಾಯಲವನ್ನು ತಲುಪುತ್ತದೆ. ಇದರ ಪ್ರಯಾಣ ದರ cc: 1175 ರೂಪಾಯಿ ಇದೆ.
ಎರಡನೇ ರೈಲು: ಬೆಂಗಳೂರಿನಿಂದ ಮಂತ್ರಾಲಯಕ್ಕೆ ಇರುವ ಮೊದಲನೇ ರೈಲು 11014. ಇದು ಕೆಎಸ್ಆರ್ ಬೆಂಗಳೂರಿನಿಂದ ಸಂಜೆ 4 ಗಂಟೆಗೆ ಹೊರಡುತ್ತದೆ. ರಾತ್ರಿ 11.14ಕ್ಕೆ ತಲುಪುತ್ತದೆ. ಪ್ರಯಾಣ ದರ SL 245 ರೂಪಾಯಿ ಇದೆ.
ಮೂರನೇ ರೈಲು: ಎರಡನೇ ರೈಲು ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ರಾತ್ರಿ 11.15ಕ್ಕೆ ಹೊರಡುತ್ತದೆ. ಬೆಳಿಗ್ಗೆ 7.39ಕ್ಕೆ ಮಂತ್ರಾಲಯವನ್ನು ತಲುಪುತ್ತದೆ. ಈ ರೈಲು ಸಂಖ್ಯೆ YPR BIDR EXP(16577). ಶನಿವಾರ ಮಾತ್ರ ಈ ರೈಲು ಇರುತ್ತದೆ. ಪ್ರಯಾಣ ದರ SL: 235 ರೂಪಾಯಿ ಇದೆ.
ನಾಲ್ಕನೇ ರೈಲು: ಇನ್ನೊಂದು ಕೆಎಸ್ಆರ್ ಬೆಂಗಳೂರಿನಿಂದ ರಾತ್ರಿ 8:40ಕ್ಕೆ ಹೊರಡುತ್ತದೆ. ಬೆಳಗ್ಗೆ 3:49ಕ್ಕೆ ಮಂತ್ರಾಲಯವನ್ನು ತಲುಪುತ್ತದೆ. ಈ ಬೆಂಗಳೂರು ಮಂತ್ರಾಲಯ ರೈಲು ಸಂಖ್ಯೆ UDYAN EXP(11302). ಇದರ ಪ್ರಯಾಣ ದರ SL:255 ರೂಪಾಯಿ ಇದೆ. ವಾರದ ಎಲ್ಲಾ ದಿನ ಈ ರೈಲು ಸಂಚರಿಸಲಿದೆ.
ಐದನೇ ರೈಲು: ಮತ್ತೊಂದು ರೈಲು ಸಂಖ್ಯೆ HAS SUR EXP(11312). ಈ ರೈಲು ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ರಾತ್ರಿ 8:50ಕ್ಕೆ ಹೊರಡುತ್ತದೆ. ಬೆಳಿಗ್ಗೆ 2:34ಕ್ಕೆ ಮಂತ್ರಾಲಯ ತಲುಪುತ್ತದೆ. ಪ್ರಯಾಣ ದರ SL:256 ಇದೆ.
ಗುರುರಾಯರ ಮಠಕ್ಕೆ ಮಂತ್ರಾಲಯ ರೈಲ್ವೆ ಸ್ಟೇಷನ್ ತುಂಬಾ ಹತ್ತಿರದಲ್ಲಿದೆ. ಮಂತ್ರಾಲಯ ರೈಲ್ವೆ ಸ್ಟೇಷನ್‌ನಿಂದ ಮಠವು 15 ಕಿಮೀ ದೂರದಲ್ಲಿದೆ.