Site icon Vistara News

Suspicious husband | ಶೀಲ ಶಂಕಿಸಿ ಪತ್ನಿಯನ್ನು ಕೊಂದು ತಾನೂ ನೇಣು ಹಾಕಿಕೊಂಡ ದುಷ್ಟ ಗಂಡ

murder

ಬಳ್ಳಾರಿ: ಪತ್ನಿಯ ಶೀಲದ ಬಗ್ಗೆ ಸಂಶಯವನ್ನು ವ್ಯಕ್ತಪಡಿಸುತ್ತಿದ್ದ ವ್ಯಕ್ತಿಯೊಬ್ಬ ಆಕೆಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಜಿಗೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ರೇಖಾ ಕುಮಾರಸ್ವಾಮಿ ಅಲಿಯಾಸ್ ನೇತ್ರಾವತಿ(31) ಕೊಲೆಯಾದ ಗೃಹಿಣಿ. ಆಕೆಯನ್ನು ಕೊಂದ ಪತಿ ಕುಮಾರಸ್ವಾಮಿ ಸ್ವಲ್ಪ ದೂರದಲ್ಲೇ ಮರಕ್ಕೆ ನೇಣು ಬಿಗಿದು ಪ್ರಾಣ ಕಳೆದುಕೊಂಡಿದ್ದಾನೆ.

ಕ್ರೌರ್ಯದ ಪರಮಾವಧಿ
ರೇಖಾ ಮತ್ತು ಕುಮಾರಸ್ವಾಮಿಗೆ ೧೨ ವರ್ಷದ ಹಿಂದೆ ಮದುವೆಯಾಗಿದ್ದು, ನಾಲ್ಕು ಹೆಣ್ಣು ಮತ್ತು ಒಂದು ಗಂಡು ಮಗುವಿದೆ. ಕುಮಾರಸ್ವಾಮಿಗೆ ಯಾವತ್ತೂ ಪತ್ನಿಯ ಮೇಲೆ ಸಂಶಯ. ಹೀಗಾಗಿ ಆಗಾಗ ಜಗಳವಾಗುತ್ತಿತ್ತು. ಹಲವಾರು ಬಾರಿ ಥಳಿಸಿ, ತೀವ್ರ ರೀತಿಯಲ್ಲಿ ಹಲ್ಲೆ ಮಾಡಿದ್ದ ಆತ ಈ ಬಾರಿ ಕುಡುಗೋಲಿನಿಂದ ಆಕೆಯ ಹೊಟ್ಟೆಯನ್ನೇ ಸೀಳುವಷ್ಟು ಕ್ರೌರ್ಯ ಮೆರೆದಿದ್ದಾನೆ.

ಸಂಡೂರು ತಾಲೂಕಿನ ಚೋರನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳೀಗ ಅನಾಥರಾಗಿದ್ದಾರೆ.

ಮಂಗಳೂರಲ್ಲೂ ನಡೆದಿತ್ತು
ಇಂತಹುದೇ ಘಟನೆ ಗುರುವಾರ ಮಂಗಳೂರಿನಲ್ಲೂ ನಡೆದಿದೆ. ಮಂಗಳೂರಿನ ಪಿಲಾರಿನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಇದೇ ರೀತಿ ಸಂಶಯಪಟ್ಟು ಕೊಂದು, ತಾನೂ ನೇಣಿಗೆ ಶರಣಾಗಿದ್ದ.

ಇದನ್ನೂ ಓದಿ | Cruel husband| ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಸಂಶಯ ಪಿಶಾಚಿ ಗಂಡ

Exit mobile version