Site icon Vistara News

Pornography | ಸ್ನೇಹಿತನ ಜತೆಗೂಡಿ ಪತ್ನಿಯ ಪೋರ್ನ್‌ ವಿಡಿಯೊ ಮಾಡಿ ಬ್ಲಾಕ್‌ಮೇಲ್‌

ಹೆಂಡತಿ ಪೋರ್ನ್ ವಿಡಿಯೊ ಮಾಡಿ ಪತ್ನಿಗೆ ಬ್ಲಾಕ್ ಮೇಲ್

ಬೆಂಗಳೂರು: ಪತಿಯೇ ಪತ್ನಿಯ ಪೋರ್ನ್‌ ವಿಡಿಯೊ (Pornography) ಮಾಡಿ ಬ್ಲಾಕ್‌ಮೇಲ್‌ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಆ ವಿಡಿಯೊ ಇಟ್ಟುಕೊಂಡು ವರದಕ್ಷಿಣೆಗೂ ಕಿರುಕುಳ ಕೊಡುತ್ತಿದ್ದಾನೆ ಎಂದು ಸಂತ್ರಸ್ತೆ ಪೊಲೀಸ್‌ ಠಾಣೆಗೆ ದೂರು ದಾಖಲಿಸಿದ್ದಾರೆ.

ಪೋರ್ನ್ ವೆಬ್‌ಸೈಟ್ ನಡೆಸುತ್ತಿರುವ ಪತಿ ಸಾಗರ್ ಅರುಣ್ ಎಂಬಾತನೇ ಈ ಕೃತ್ಯ ಎಸೆಗಿದ್ದಾನೆ ಎಂದು ಪತ್ನಿ ದೂರು ನೀಡಿದ್ದಾರೆ. ಪತ್ನಿಯದ್ದೇ ಅಶ್ಲೀಲ ವಿಡಿಯೊ ಮಾಡಿ ವರದಕ್ಷಿಣೆ ಕಿರುಕುಳ ನೀಡಿದ್ದಾನೆ.

ಈ ಮೊದಲು ದಂಪತಿ ಮುಂಬೈನಲ್ಲಿದ್ದರು ಎನ್ನಲಾಗಿದೆ. ಅಲ್ಲಿ ಈತನ ಕಿರುಕುಳ ತಾಳದೆ ಮುಂಬೈನಿಂದ ಬೆಂಗಳೂರಿಗೆ ಬಂದರೂ ಕಾಮುಕ ಪತಿ ನನ್ನನ್ನು ಬಿಡುತ್ತಿಲ್ಲ. ಇಲ್ಲಿಯೂ ಕಿರುಕುಳ ನೀಡಲು ಆರಂಭಿಸಿದ್ದ. ಅಲ್ಲದೆ, ಆತನ ಸ್ನೇಹಿತ ಸುಲೇಶ್ ಕಾರ್ನಕ್ ಎಂಬಾತನ ಜತೆ ಸೇರಿ ಬ್ಲಾಕ್‌ಮೇಲ್‌ ಮಾಡುತ್ತಿದ್ದ. ನನ್ನ ಖಾಸಗಿ ಕ್ರಿಯೆಯನ್ನು ವಿಡಿಯೊ ಮಾಡಿಕೊಂಡು ವಿಕೃತಿ ಮೆರೆಯುತ್ತಿದ್ದಾನೆ. ಅಲ್ಲದೆ, ಆ ವಿಡಿಯೊ ಇಟ್ಟುಕೊಂಡು ಐದು ಲಕ್ಷ ರೂಪಾಯಿ ವರದಕ್ಷಿಣೆ ನೀಡುವಂತೆ ಕಿರುಕುಳ ನೀಡುತ್ತಿದ್ದ ಎಂದು ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ | ರಿವಾಲ್ವರ್‌ ತೋರಿಸಿ ಮನೆ ಮಾಲೀಕನಿಂದ ಅತ್ಯಾಚಾರ

ಮಾನಕ್ಕೆ ಅಂಜಿ ಸುಮ್ಮನಿದ್ದ ಪತ್ನಿ ಕೊನೆಗೆ ಪತಿ ಸಾಗರ್ ಕಾಟ ತಾಳಲಾರದೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದೆ.

Exit mobile version