Site icon Vistara News

Pavagada Election Results: ಪಾವಗಡದಲ್ಲಿ ವಿಜಯ ಪತಾಕೆ ಹಾರಿಸಿದ ಕಾಂಗ್ರೆಸ್‌ನ ಎಚ್‌.ವಿ.ವೆಂಕಟೇಶ್

Pavagada assembly Election Results winner H V Venkatesh

Pavagada Election Results H V Venkatesh wins

ತುಮಕೂರು: ವಿಧಾನಸಭಾ ಚುನಾವಣೆಯ (Pavagada Election Results) ಫಲಿತಾಂಶ ಹೊರಬಿದ್ದಿದ್ದು, ಪಾವಗಡ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್‌.ವಿ.ವೆಂಕಟೇಶ್ ಗೆಲುವು ಪಡೆದಿದ್ದಾರೆ. ಇವರು 10,881 ಮತಗಳ ಅಂತರದಿಂದ ಜೆಡಿಎಸ್‌ ಅಭ್ಯರ್ಥಿ ಕೆ.ಎಂ.ತಿಮ್ಮರಾಯಪ್ಪ ವಿರುದ್ಧ ವಿಜಯ ಪತಾಕೆ ಹಾರಿಸಿದ್ದಾರೆ.

ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್‌.ವಿ.ವೆಂಕಟೇಶ್ 83,062 ಮತಗಳನ್ನು ಪಡೆದಿದ್ದು, ಜೆಡಿಎಸ್ ಅಭ್ಯರ್ಥಿ ಕೆ.ಎಂ.ತಿಮ್ಮರಾಯಪ್ಪ 72,181 ಹಾಗೂ ಬಿಜೆಪಿ ಅಭ್ಯರ್ಥಿ ಕೃಷ್ಣ ನಾಯಕ್ 7206 ಮತಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ | Kunigal Election Results: ಕುಣಿಗಲ್‌ನಲ್ಲಿ ಕಾಂಗ್ರೆಸ್‌ನ ಡಾ.ಎಚ್‌.ಡಿ. ರಂಗನಾಥ್‌ಗೆ ಗೆಲುವಿನ ಮಾಲೆ

2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವೆಂಕಟರಮಣಪ್ಪ 72,974 ಮತಗಳನ್ನು ಪಡೆದು ಗೆಲುವು ದಾಖಲಿಸಿದ್ದರು. ಜೆಡಿಎಸ್‌ ಅಭ್ಯರ್ಥಿ ತಿಮ್ಮರಾಯಪ್ಪ 72, 565 ಮತಗಳನ್ನು ಪಡೆದಿದ್ದರು.

Exit mobile version