Site icon Vistara News

Mandya Municipal Council Election: ಮಂಡ್ಯ ನಗರಸಭೆ ಚುನಾವಣೆ ವೇಳೆ ಹೈಡ್ರಾಮಾ; ಕುಮಾರಸ್ವಾಮಿ ಎದುರೇ ಕಾಂಗ್ರೆಸ್-ಜೆಡಿಎಸ್ ಜಟಾಪಟಿ

Mandya Municipal Council election

ಮಂಡ್ಯ: ಮಂಡ್ಯ ನಗರಸಭಾ ಚುನಾವಣೆ (Mandya Municipal Council Election) ವೇಳೆ ಭಾರಿ ಹೈಡ್ರಾಮಾ ನಡೆದಿದೆ. ಸಂಸದ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಎದುರಲ್ಲೇ ಮಾತಿನ ಚಕಮಕಿ ನಡೆದಿದೆ. ನಗರಸಭೆ ಅಧಿಕಾರಕ್ಕೆ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ.

ಇದನ್ನೂ ಓದಿ: Karnataka Weather : ಮತ್ತೆ ಭಾರಿ ಮಳೆ ಮುನ್ಸೂಚನೆ; ಏಳು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌

ಸಚಿವ ಎಚ್.ಡಿ. ಕುಮಾರಸ್ವಾಮಿ ಆಗಮಿಸುತ್ತಿದ್ದಂತೆ ನಗರಸಭೆ ಹೊರಾವರಣದಲ್ಲಿ ಹೈಡ್ರಾಮಾ ನಡೆಯಿತು. ಈ ವೇಳೆ ಪೊಲೀಸರು ಎಚ್.ಡಿ. ಕುಮಾರಸ್ವಾಮಿ ಅವರ ವಾಹನಕ್ಕೆ ಮಾತ್ರ ಒಳಗಡೆಗೆ ಅವಕಾಶ ಕಲ್ಪಿಸಲಾಯಿತು. ಇತ್ತ ಸದಸ್ಯರು ಆಗಮಿಸಿದ ಟಿಟಿ ವಾಹನಕ್ಕೆ ತಡೆ ಹಿಡಿಯಲಾಯಿತು.‌ ಕಾಂಗ್ರೆಸ್‌ ಸದಸ್ಯರ ವಾಹನವನ್ನೂ ಒಳಗಡೆ ಬಿಡದೆ ತಡೆದಿದ್ದಾರೆ. ಇತ್ತ ಜೆಡಿಎಸ್‌ನ ಸದಸ್ಯರ ವಾಹನವನ್ನೂ ಒಳ ಬಿಡದಂತೆ ವಾಹನ ತಡೆದು ಆಕ್ರೋಶ ಹೊರಹಾಕಿದ್ದರು. ಸದಸ್ಯರು ಕೆಳಗೆ ಇಳಿಯದಂತೆ ವಾಹನ ತಡೆಯಲು ಮುಂದಾದರು. ಈ ವೇಳೆ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಕುಮಾರಸ್ವಾಮಿ ಬಂದು ವಾಹನ ಬಿಡಿಸುವಲ್ಲಿ ಯಶಸ್ವಿಯಾದರು.

ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಹಾಗೂ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಗಳು

ಇಂದು ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಪಕ್ಷದಿಂದ ಎಚ್.ಎಸ್. ಮಂಜು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜಾಕಿರ್ ಪಾಷಾ ಮತ್ತು ಜೆಡಿಎಸ್-ಬಿಜೆಪಿ ಮೈತ್ರಿ ಕಡೆಯಿಂದ ಅಧ್ಯಕ್ಷ ಸ್ಥಾನಕ್ಕೆ ನಾಗೇಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅರುಣ್ ಅವರು ಚುನಾವಣಾಧಿಕಾರಿ ಎಸಿ ಶಿವಮೂರ್ತಿ ಅವರಿಗೆ ನಾಮಪತ್ರ ಸಲ್ಲಿಸಿದರು.

ಇದನ್ನೂ ಓದಿ: Accident case: ಭೀಕರ ರಸ್ತೆ ಅಪಘಾತ: ಮಹಿಳೆ ಸಾವು, ಐವರು ಗಂಭೀರ

35 ಸದಸ್ಯರ ಬಲ ಹೊಂದಿರುವ ಮಂಡ್ಯ ನಗರಸಭೆ

ಎಂಪಿ 1, ಶಾಸಕ 1 ಸೇರಿ 37 ಜನರಿಗೆ ಮತದಾನದ ಹಕ್ಕು.
ಒಟ್ಟು ಜೆಡಿಎಸ್‌ 18 ಸದಸ್ಯರು.
ಒಟ್ಟು ಬಿಜೆಪಿಯ 2 ಸದಸ್ಯರು.
ಒಟ್ಟು ಕಾಂಗ್ರೆಸ್‌ನ 10 ಸದಸ್ಯರು.
ಒಟ್ಟು ಪಕ್ಷೇತರ 5 ಸದಸ್ಯರು.

Exit mobile version